ನೆರೆ ಬಾಧಿತ ಗ್ರಾಮಗಳಿಗೆ ಎನ್.ಎಸ್.ಎಫ್ ತಂಡ ಭೇಟಿ

| Published : Jul 31 2024, 01:10 AM IST

ನೆರೆ ಬಾಧಿತ ಗ್ರಾಮಗಳಿಗೆ ಎನ್.ಎಸ್.ಎಫ್ ತಂಡ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರವಾಹದಿಂದ ಜಲಾವೃತಗೊಂಡಿರುವ ಅವರಾದಿ, ಅರಳಿಮಟ್ಟಿ, ಸುಣಧೋಳಿ, ಹುಣಶ್ಯಾಳ ಪಿ.ವೈ, ತಿಗಡಿ, ಬೀಸನಕೊಪ್ಪ ಗ್ರಾಮಗಳಿಗೆ ಸೋಮವಾರ ಬಾಲಚಂದ್ರ ಎನ್.ಎಸ್.ಎಫ್ ತಂಡ ಭೇಟಿ ನೀಡಿತು.

ಕನ್ನಡಪ್ರಭ ವಾರ್ತೆ ಮೂಡಲಗಿ

ಪ್ರವಾಹದಿಂದ ಜಲಾವೃತಗೊಂಡಿರುವ ಅವರಾದಿ, ಅರಳಿಮಟ್ಟಿ, ಸುಣಧೋಳಿ, ಹುಣಶ್ಯಾಳ ಪಿ.ವೈ, ತಿಗಡಿ, ಬೀಸನಕೊಪ್ಪ ಗ್ರಾಮಗಳಿಗೆ ಸೋಮವಾರ ಬಾಲಚಂದ್ರ ಎನ್.ಎಸ್.ಎಫ್ ತಂಡ ಭೇಟಿ ನೀಡಿತು.

ಪ್ರವಾಹದಿಂದ ಆತಂಕಕ್ಕೆ ಸಿಲುಕಿರುವ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ ತಂಡ, ಅಗತ್ಯ ನೆರವು ನೀಡಿತು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಾಲ್ಕು ತಂಡಗಳನ್ನು ರಚಿಸಿದ್ದು, ನದಿ ತೀರದ ಗ್ರಾಮಗಳ ಸಂತ್ರಸ್ತರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಕೊಳ್ಳಲಾಗುತ್ತಿದೆ.

ನೆರೆ ಸಂತ್ರಸ್ತ ಕುಟುಂಬಗಳ ಬಗ್ಗೆ ಕಾಳಜಿ ವಹಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕ್ಷಣ ಕ್ಷಣಕ್ಕೂ ಸಂತ್ರಸ್ತರ ಸಮಸ್ಯೆಗಳ ವರದಿ ಪಡೆಯುತ್ತಿದ್ದಾರೆ. ಸಂತ್ರಸ್ತರಿಗೆ ಅಗತ್ಯವಿರುವ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಶಾಸಕರ ಆಪ್ತ ಸಹಾಯಕ ಭಾಸ್ಕರ್ ರಾವ್ ಮಾಹಿತಿ ನೀಡಿದರು.

ವಕೀಲರಾದ ಮಲ್ಲನಗೌಡ ಪಾಟೀಲ, ಸಿ.ಎಲ್. ನಾಯಿಕ, ಮುಖಂಡರಾದ ಎಚ್.ಎಸ್. ಪಾಟೀಲ, ಪ್ರಕಾಶ ಕಾಳಶೆಟ್ಟಿ, ಹಣಮಂತ ಚನ್ನಾಳ, ಜಗದೀಶ ಡೊಳ್ಳಿ, ದುಂಡಪ್ಪ ಕಲ್ಲಾರ, ಬಸಪ್ಪ ಗಿರಡ್ಡಿ, ಬಸವರಾಜ ಸಾರಾಪೂರ, ಹಣಮಂತ ರಡೇರಟ್ಡಿ, ದುಂಡಪ್ಪ ಪಾಟೀಲ, ಬಸಪ್ಪ ಬಾರಕಿ, ಅರ್ಜುನ ಜಿಡ್ಡಿಮನಿ, ಪ್ರಕಾಶ ಪಾಟೀಲ, ಗೋಪಾಲ ಬಿಳ್ಳೂರ, ಸಿದ್ದಪ್ಪ ದೇವರಮನಿ, ಸಿದ್ಧಾರೂಢ ಕಮತಿ, ಹಣಮಂತ ಅಂಬಿ, ಯಲ್ಲಪ್ಪ ಹೂಲಿಕಟ್ಟಿ, ರಫೀಕ್ ಲಾಡಕ್ನ್‌, ಅಲ್ಲಪ್ಪ ಖಾನಪ್ಪಗೋಳ, ಹಣಮಂತ ನಾಯಿಕ, ಸಿದ್ರಾಯಿ ಬಿರಡಿ, ಬಸವರಾಜ ಪಾಟೀಲ, ಉಸ್ತುವಾರಿ ಅಧಿಕಾರಿಗಳಾದ ಎಂ.ಎಸ್. ನಾಗನ್ನವರ, ಯಲ್ಲಪ್ಪ ಗದಾಡಿ, ಮಾಲದಿನ್ನಿ, ಪಿಡಿಒಗಳು, ಗ್ರಾಮ ಪಂಚಾಯತಿ ಸದಸ್ಯರು ಇತರರು ಉಪಸ್ಥಿತರಿದ್ದರು.