ಸಾರಾಂಶ
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕಗಳ ವತಿಯಿಂದ ದಿಡಗೂರು ಗ್ರಾಮದಲ್ಲಿ ಇಂದಿನಿಂದ ಮೇ 3ರವರೆಗೆ ಸ್ವಚ್ಛ ಭಾರತ ಸಾಮಾಜಿಕ ಸಾಮರಸ್ಯದೆಡೆಗೆ ಯುವಜನತೆ ಘೋಷವಾಕ್ಯದಡಿ ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ಮತ್ತು 2ರ ಅಡಿಯಲ್ಲಿ ವಾರ್ಷಿಕ ವಿಶೇಷ ಶಿಬಿರ 2024- 2025 ಜರುಗಲಿದೆ ಎಂದು ಪ್ರಾಂಶುಪಾಲ ಡಾ. ಧನಂಜಯ ಬಿ.ಜಿ. ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕಗಳ ವತಿಯಿಂದ ದಿಡಗೂರು ಗ್ರಾಮದಲ್ಲಿ ಇಂದಿನಿಂದ ಮೇ 3ರವರೆಗೆ ಸ್ವಚ್ಛ ಭಾರತ ಸಾಮಾಜಿಕ ಸಾಮರಸ್ಯದೆಡೆಗೆ ಯುವಜನತೆ ಘೋಷವಾಕ್ಯದಡಿ ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ಮತ್ತು 2ರ ಅಡಿಯಲ್ಲಿ ವಾರ್ಷಿಕ ವಿಶೇಷ ಶಿಬಿರ 2024- 2025 ಜರುಗಲಿದೆ ಎಂದು ಪ್ರಾಂಶುಪಾಲ ಡಾ. ಧನಂಜಯ ಬಿ.ಜಿ. ತಿಳಿಸಿದ್ದಾರೆ.ಎನ್.ಎಸ್.ಎಸ್. ವಿಶೇಷ ಶಿಬಿರದ ಎಲ್ಲ ಕಾರ್ಯಕ್ರಮಗಳು ಕಾಲೇಜಿನ ಎನ್.ಎಸ್.ಎಸ್. ಘಟಕ 1ರ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ. ಹರಾಳು ಮಹಾಬಲೇಶ್ವರ ಮತ್ತು ಘಟಕ-2ರ ಕಾರ್ಯಕ್ರಮದ ಸಂಯೋಜನಾಧಿಕಾರಿ ಡಾ.ಶ್ರೀನಿವಾಸ ಕೆ.ಎಂ. ನೇತೃತ್ವದಲ್ಲಿ ನಡೆಯಲಿದೆ ಎಂದರು.
ತಾಲೂಕಿನ ದಿಡಗೂರಿನಲ್ಲಿ ಭಾನುವಾರ ಸಂಜೆ 6 ಗಂಟೆಗೆ ನಡೆಯಲಿರುವ ಕಾರ್ಯಕ್ರಮ ಉದ್ಘಾಟನೆಯನ್ನು ಶಾಸಕ ಡಿ.ಜಿ. ಶಾಂತನಗೌಡ ನೇರವೇರಿಸಲಿದ್ದಾರೆ. ದಿವ್ಯ ಸಾನ್ನಿಧ್ಯವನ್ನು ದಿಡಗೂರು ಶ್ರೀ ಆಂಜನೇಯ ಸ್ವಾಮಿ ಗಣಮಗ ಶ್ರೀ ಅಣ್ಣಪ್ಪ ಸ್ವಾಮಿ ವಹಿಸಲಿದ್ದಾರೆ ಎಂದು ಹೇಳಿದರು.ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಧನಂಜಯ ಬಿ.ಜಿ. ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ದಾವಣಗೆರೆ ವಿ.ವಿ. ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಅಶೋಕ್ ಕುಮಾರ್ ಪಾಳೇದ್ ಹಾಗೂ ಹೊನ್ನಾಳಿ ತಹಸೀಲ್ದಾರ್ ಪಟ್ಟರಾಜ ಗೌಡ ಆಗಮಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಲೇಶ ಎ.ಕೆ., ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ್ ಒ.ಎಚ್., ಗ್ರಾಪಂ ಸದಸ್ಯ ಕೆ.ಎನ್. ನಿಂಗಪ್ಪ, ಸಿದ್ದೇಶ್, ಗ್ರಾಪಂ ಮಾಜಿ ಅಧ್ಯಕ್ಷೆ ಸುನೀತಾ ರಾಜಪ್ಪ, ಕಸಬಾ ಸೊಸೈಟಿ ಮಾಜಿ ಅಧ್ಯಕ್ಷ ಎ.ಜಿ.ಪ್ರಕಾಶ್, ಗ್ರಾಮದ ಮುಖಂಡರಾದ ಮಂಜುನಾಥಪ್ಪ, ಗೋಪಾಲಪ್ಪ, ತಾನೋಜಿ ರಾವ್, ಮಲ್ಲೇಶ್ ಎಚ್.ಕೆ. ವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಈ ಸಂದರ್ಭ ಸಹ ಶಿಬಿರಾಧಿಕಾರಿ ಡಾ. ನಾಗರಾಜ ನಾಯ್ಕ, ಎಚ್.ವಿ. ಗೀತಾ, ರಾಘವೇಂದ್ರ ರಾವ್ ಜಿ.ಎಸ್. ತಿಪ್ಪೇಶಪ್ಪ, ಬಿ.ವಿಶ್ವನಾಥ ಮುಂತಾದವರು ಇದ್ದರು.
- - -(ಸಾಂದರ್ಭಿಕ ಚಿತ್ರ)