ಸಾರಾಂಶ
ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಕೊಟ್ಟೂರುಎನ್ಎಸ್ಎಸ್ ಶಿಕ್ಷಣ ಕಲಿಕೆಯೊಂದಿಗೆ ಜೀವನ ಅನುಭವ ಮತ್ತು ಕ್ರಿಯಾಶೀಲತೆಯನ್ನು ಪ್ರತಿ ಹಂತದಲ್ಲೂ ಕಲಿಸಿಕೊಡುತ್ತದೆ ಎಂದು ಕೊಟ್ಟೂರೇಶ್ವರ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮೋಹನ್ ರೆಡ್ಡಿ ಹೇಳಿದರು.
ತಾಲೂಕಿನ ಅಂಬಳಿ ಗ್ರಾಮದಲ್ಲಿ ಮಹಾವಿದ್ಯಾಲಯದಿಂದ ಹಮ್ಮಿಕೊಳ್ಳಲಾಗಿರುವ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮಾ ಗಾಂಧಿ ಕಲ್ಪನೆ ಸಹ ಶಿಕ್ಷಣದೊಂದಿಗೆ ಸೇವೆ ಮತ್ತು ವ್ಯಕ್ತಿ ವಿಕಾಸದ ಕಲ್ಪನೆಯನ್ನು ಸಾರಿದ್ದರು ಎಂದರು.ಅಂಬಳಿ ಎನ್ಎಸ್ಎಸ್ ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಶಿಬಿರಾರ್ಥಿಗಳು ಗ್ರಾಮದ ಅಭಿವೃದ್ಧಿಗೆ ಸಹಾಯಕ ಯೋಜನೆ ರೂಪಿಸಿರುವುದರ ಜೊತೆಗೆ ಶಿಸ್ತು, ಸಂಯಮ, ತಾಳ್ಮೆ ಮತ್ತು ವ್ಯಕ್ತಿ ವಿಕಸನದ ಹಂತ ಕಲಿಯಬೇಕಿದೆ ಎಂದರು.
ಪ್ರಾಚಾರ್ಯ ಡಾ. ಎಂ. ರವಿಕುಮಾರ್ ಮಾತನಾಡಿ, ಅಂಬಳಿ ಮತ್ತು ಕೆ.ಕೋಡಿಹಳ್ಳಿಯಲ್ಲಿ ಶಿಬಿರದ ಅವಧಿಯಲ್ಲಿ ಜನತೆಗೆ ಸ್ವಚ್ಛತೆ ಕಾಪಾಡುವ ಮತ್ತು ಸೌಹಾರ್ದತೆಯಿಂದ ಪ್ರತಿಯೊಬ್ಬರು ಇದ್ದು, ಒಟ್ಟುಗೂಡಿರಬೇಕೆಂಬ ಸಂದೇಶವನ್ನು ನೀಡಲು ಮುಂದಾಗಬೇಕು ಎಂದು ಕರೆ ನೀಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೊಳಲಮ್ಮ ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಮುಖಂಡರಾದ ಷಡಾಕ್ಷರಪ್ಪ, ಕೆ. ಸಿದ್ದಲಿಂಗಪ್ಪ ಮಾತನಾಡಿದರು. ಆಡಳಿತ ಮಂಡಳಿ ಸದಸ್ಯರಾದ ಕೊಟ್ರೇಶ ಕಾಮಶೆಟ್ಟಿ, ಟಿ.ಎಂ. ಗಿರೀಶ, ಕೆ. ವಿವೇಕಾನಂದ , ಶಿವಕುಮಾರ ಖಾನವಳಿ, ರೆಡ್ಡಿ ಹರೀಶ್ವರಗೌಡ, ಮುದ್ದೆಗೌಡರ ಚನ್ನಬಸಪ್ಪ, ಎಚ್ ವಿಶ್ವನಾಥ, ಆರ್. ಪ್ರಕಾಶ ಗೌಡ, ಹನುಮನಗೌಡ, ಉಪನ್ಯಾಸಕ ಡಾ. ಜೆ.ಬಿ. ಸಿದ್ದನಗೌಡ ಮತ್ತು ಇತರರಿದ್ದರು.
ಕೆ.ಪಿ. ರಾಧಸ್ವಾಮಿ ಸ್ವಾಗತಿಸಿ, ರಮೇಶ ವಂದಿಸಿದರು. ಓ. ಶಿವಪ್ರಕಾಶ ನಿರೂಪಿಸಿದರು.