ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಎನ್‌ಎಸ್‌ಎಸ್ ಶಿಬಿರವು ಅನುಭವ ಆಧಾರಿತ ಶಿಕ್ಷಣ ಗ್ರಾಮೀಣ ಬದುಕು, ಸಂಸ್ಕೃತಿಯ ಪರಿಚಯದ ಜೊತೆಗೆ ಶಿಬಿರಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ತುಂಬಲ ಗ್ರಾಪಂ ಅಧ್ಯಕ್ಷ ರಾಮಲಿಂಗಯ್ಯ ಹೇಳಿದರು.ಮೈಸೂರಿನ ಟೆರಿಷಿಯನ್ ಕಾಲೇಜಿನ ಎನ್.ಎಸ್.ಎಸ್. ಘಟಕದವರು ತಾಲೂಕಿನ ಮುತ್ತತ್ತಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎನ್‌ಎಸ್‌ಎಸ್ ಶಿಬಿರಗಳನ್ನು ಗ್ರಾಮೀಣ ಭಾಗದಲ್ಲಿ ನಡೆಸುವುದರಿಂದ ಆ ಗ್ರಾಮಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ, ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ತಮ್ಮದೇ ಆದ ಮಹತ್ವ ಪಡೆದುಕೊಂಡಿದ್ದು, ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿವೆ. ಜನರಿಗೆ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ಕೊಡುವ ಕಾರ್ಯವನ್ನು ಈ ಶಿಬಿರಗಳು ಮಾಡುತ್ತವೆ ಎಂದರು.ಟೆರಿಷಿಯನ್ ಕಾಲೇಜಿನ ನಿರ್ದೇಶಕಿ ಡಾ. ಸಿಸ್ಟರ್ ಜ್ವನಿಟ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸೇವೆ ಮಾಡುವ ಅವಕಾಶ ಎಲ್ಲ ವಿದ್ಯಾರ್ಥಿಗಳಿಗೆ ಲಭಿಸುವುದಿಲ್ಲ. ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಇಂಥ ಸದಾವಕಾಶ ಲಭ್ಯವಾಗುತ್ತಿದ್ದು, ಇದರಿಂದ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿ ಗಿಂತ ವಿಭಿನ್ನವಾಗಿರುತ್ತಾರೆ ಎಂದರು.
ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಗ್ರಾಪಂ ಸದಸ್ಯ ಕಂಬಯ್ಯ, ತುಂಬಲ ಗ್ರಾಪಂ ಕಾರ್ಯದರ್ಶಿ ಪ್ರವೀಣ್ ಕುಮಾರ್, ಟೆರಿಷಿಯನ್ ಕಾಲೇಜಿನ ಸಹ ಪ್ರಾದ್ಯಾಪಕಿ ಡಾ.ಸಿ. ಜಯಂತಿ, ಐಕ್ಯೂಎಸಿ ಸಂಯೋಜಕ ವಿವೇಕ್ ಚಾರ್ಲ್, ಡಾ. ಮೋಹನ್, ಡಾ. ಸತೀಶ್, ಚೇತನ್, ಎನ್ಎಸ್ಎಸ್ ಶಿಬಿರಾಧಿಕಾರಿ ವೆಂಕಟೇಶ್, ಸಹ ಶಿಬಿರಾಧಿಕಾರಿ ಸ್ವಪ್ನ, ಶಿಬಿರದ ಕಾರ್ಯದರ್ಶಿ ರಮ್ಯಶ್ರೀ, ಮುತ್ತತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಹೇಶ್ ಇದ್ದರು.