ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ, ಸೇವಾಭಾವ ಬೆಳೆಸುವ ಎನ್ಎಸ್ಎಸ್: ನಾಗರಾಜ್

| Published : Apr 05 2025, 12:51 AM IST

ಸಾರಾಂಶ

ಶೃಂಗೇರಿ, ಸಮಾಜ ಸೇವೆಗೆ ಇನ್ನೊಂದು ಹೆಸರಾದ ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ, ಸೇವಾ ಮನೋಭಾವ ಬೆಳೆಸುತ್ತಾ ಉತ್ತಮ ಸಂಘಟನೆಯಾಗಿದೆ ಎಂದು ಬಾಳೆಹೊನ್ನೂರು ಸೀಗೋಡಿನ ಕಾಫಿ ಸಂಶೋಧನಾ ಕೇಂದ್ರದ ಜಂಟೀ ನಿರ್ದೇಶಕ ಜೆ.ಎಸ್ .ನಾಗರಾಜ್ ಹೇಳಿದರು.

ತೆಕ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಸಮಾಜ ಸೇವೆಗೆ ಇನ್ನೊಂದು ಹೆಸರಾದ ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ, ಸೇವಾ ಮನೋಭಾವ ಬೆಳೆಸುತ್ತಾ ಉತ್ತಮ ಸಂಘಟನೆಯಾಗಿದೆ ಎಂದು ಬಾಳೆಹೊನ್ನೂರು ಸೀಗೋಡಿನ ಕಾಫಿ ಸಂಶೋಧನಾ ಕೇಂದ್ರದ ಜಂಟೀ ನಿರ್ದೇಶಕ ಜೆ.ಎಸ್ .ನಾಗರಾಜ್ ಹೇಳಿದರು.

ತಾಲೂಕಿನ ತೆಕ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ನಡೆಯುತ್ತಿರುವ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರದ ಸಾರ್ವಭೌಮತೆ ಮುಂದೆ ನನ್ನದು ಎಂಬುದು ಸದಾ ಗೌಣ ಹೀಗೆಂದು ಭಾವಿಸಿ ಸಾಮಾಜಿಕ, ಧಾರ್ಮಿಕ, ಸಾಂಸಾರಿಕ ಧರ್ಮವನ್ನು ಹಾಗೂ ರಾಷ್ಟ್ರ ಧರ್ಮವನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಸಮಾಜ ಉತ್ತಮಗೊಳ್ಳಲು ಎನ್ಎಸ್ಎಸ್ ಶಿಬಿರಗಳು ಮಕ್ಕಳಿಗೆ ದಾರಿ ತೋರಿಸಿ ತರಬೇತಿ ನೀಡಿರುವುದನ್ನು ಹಿರಿಯರೂ, ಅವರಿಂದ ಕಲಿತು ಬದುಕನ್ನು ಸೃಜನಶೀಲಗೊಳಿಸಿಕೊಳ್ಳಬೇಕು. ತನ್ಮೂಲಕ ಸಮಾಜದ ಸುಸ್ಥಿತಿ ಕಾಪಾಡಲು ವಿದ್ಯಾರ್ಥಿಗಳಿಗೆ ಎನ್ಎಸ್ಎಸ್ ಪೂರಕವಾದ ಪ್ರೇರಕ ಶಕ್ತಿಯಾಗಲಿ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಭಾರತೀ ಮಾತನಾಡಿ ಗಾಂಧಿಜೀಯವರು ಸ್ವತಃ ಸ್ವಚ್ಚತಾ ಕಾರ್ಯ, ಬಡವರು ಮತ್ತು ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅವರ ಕನಸನ್ನೇ ಧ್ಯೇಯವಾಗಿರಿಸಿಕೊಂಡಿರುವ ಎನ್ಎಸ್ಎಸ್ ಸೇವೆ ಮಾಡುವುದೇ ಮುಖ್ಯ ಗುರಿಯಾಗಿಸಿಕೊಂಡಿದೆ. ಇಲ್ಲಿ ಸ್ವಯಂ ಸೇವಕರು ಸ್ವಚ್ಛತೆ ಪ್ರಾಮುಖ್ಯತೆ ಅರಿತು ದೇಶವನ್ನು ನಿರ್ಮಲಗೊಳಿಸಬೇಕು ಎಂದರು.

ಕಾಲೇಜು ಅಭಿವೃದ್ಧಿ ಮಂಡಳಿ ಕಾರ್ಯಾಧ್ಯಕ್ಷ ತ್ರಿಮೂರ್ತಿ, ಶಿಬಿರದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎಂ.ರಮೇಶ್ ಭಟ್, ಕೂತಗೋಡು ಗ್ರಾಪಂ ಅಧ್ಯಕ್ಷ ನಾಗೇಶ್, ಹಾಲಪ್ಪಗೌಡ, ಚೆನ್ನಕೇಶವ, ಎನ್ಎಸ್ಎಸ್ ಅಧಿಕಾರಿಗಳಾದ ಡಿ.ಮಂಜುನಾಥ್, ರಾಘವೇಂದ್ರ ರೆಡ್ಡಿ ಮತ್ತಿತರರು ಉಫಸ್ಥಿತರಿದ್ದರು.

4 ಶ್ರೀ ಚಿತ್ರ 1-

ಶೃಂಗೇರಿ ತೆಕ್ಕೂರಿನಲ್ಲಿ ನಡೆಯುತ್ತಿರುವ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಎನ್ಎಸ್ಎಸ್ ಶಿಬಿರವನ್ನು ಜೆ.ಎಸ್ .ನಾಗರಾಜ್ ಉದ್ಘಾಟಿಸಿದರು. ಪ್ರಾಂಶುಪಾಲರಾದ ಭಾರತೀ, ತ್ರಿಮೂರ್ತಿ ಮತ್ತಿತರರು ಇದ್ದರು.