ಸಾರಾಂಶ
ನಮ್ಮ ಸುತ್ತಲಿನ ಅಭಿವೃದ್ಧಿಯೇ ರಾಷ್ಟ್ರ ಸೇವೆಗೆ ಮೊದಲ ಮೆಟ್ಟಿಲು. ವಿದ್ಯಾರ್ಥಿಗಳು ರಾಷ್ಟ್ರೀಯ ಮನೋಭಾವವನ್ನು ಮೈಗೂಡಿಸಿಕೊಂಡು ಸೇವೆ ಸಲ್ಲಿಸಿದಾಗ ಮಾತ್ರ ದೇಶದ ಭದ್ರತೆ ಸಾಧ್ಯವಾಗುತ್ತದೆ ಎಂದು ಪ್ರಾಚಾರ್ಯ ಡಾ.ಎ.ಬಿ.ಬಾಳಪ್ಪ ಹೇಳಿದರು.
ಮಧುಗಿರಿ: ನಮ್ಮ ಸುತ್ತಲಿನ ಅಭಿವೃದ್ಧಿಯೇ ರಾಷ್ಟ್ರ ಸೇವೆಗೆ ಮೊದಲ ಮೆಟ್ಟಿಲು. ವಿದ್ಯಾರ್ಥಿಗಳು ರಾಷ್ಟ್ರೀಯ ಮನೋಭಾವವನ್ನು ಮೈಗೂಡಿಸಿಕೊಂಡು ಸೇವೆ ಸಲ್ಲಿಸಿದಾಗ ಮಾತ್ರ ದೇಶದ ಭದ್ರತೆ ಸಾಧ್ಯವಾಗುತ್ತದೆ ಎಂದು ಪ್ರಾಚಾರ್ಯ ಡಾ.ಎ.ಬಿ.ಬಾಳಪ್ಪ ಹೇಳಿದರು.
ತಾಲೂಕಿನ ಕಾಟಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನಾ ಕಾರ್ಯ ಭಾರತ ಸರ್ಕಾರದ ಪ್ರಯೋಜಿತ ಸೇವಾ ಕಾರ್ಯವಾಗಿದ್ದು, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ರಾಷ್ಟ್ರಭಕ್ತಿ, ನಾಯಕತ್ವದ ಗುಣಗಳು, ಶಿಸ್ತು, ಸಂಯಮ, ಸಹಭಾಳ್ವೆ ಗುಣಗಳನ್ನು ಕಲಿತು ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಎನ್ಎಸ್ಎಸ್ ದಾರಿದೀಪ ಎಂದರು.ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವ , ಮಾನವೀಯ ಮೌಲ್ಯಗಳು, ಜೀವನ ಕೌಶಲ್ಯ ಸಹಭಾಗಿತ್ವ ಆತ್ಮಸ್ಥರ್ಯ ಹಾಗೂ ಕಠಿಣ ಸಮಸ್ಯೆಗಳನ್ನು ತಮ್ಮ ಬುದ್ಧಿ ಶಕ್ತಿಯಿಂದ ನಿರ್ವಹಿಸಲು ಶಿಬಿರವು ಸಹಕಾರಿ ಎಂದರು.
ಡಾ.ರಾಮುಜೆ, ಡಾ.ನಾಗರಾಜು, ಮುರುಳೀಧರ, ಮುಖಂಡರಾದ ಚಂದ್ರೇಗೌಡ , ಮೃತ್ಯುಂಜಯ, ಅಭಿಷೇಕ್, ಎನ್‌ಎಸ್‌ಎಸ್ ಅಧಿಕಾರಿ ಬಿ.ಮಂಜುನಾಥ್, ಲೀಲಾವತಿ ಇದ್ದರು. ಡಾ.ಮಂಜುನಾಥ್ ಸ್ವಾಗತಿಸಿದರು.