ಸುಬ್ರಹ್ಮಣ್ಯ : ಯುವ ವಿದ್ಯಾರ್ಥಿಗಳ ಮೌಲ್ಯಯುತ ಬದುಕಿಗೆ ಎನ್ನೆಸೆಸ್ ರಹದಾರಿಯಾಗಿದೆ ಎಂದು ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಗಳ ಸಂಚಾಲಕ ಜಯಸೂರ್ಯ ರೈ ಮಾದೋಡಿ ಹೇಳಿದರು.

ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಆರಂಭಗೊಂಡ ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳು ಹೆಚ್ಚಿನ ಮಹತ್ವ ನೀಡಬೇಕು. ಅರಣ್ಯ ಸಮೃದ್ಧಿಯಿಂದ ಆರೋಗ್ಯಪೂರ್ಣ ನಾಳೆಗಳು ನಮಗೆ ದೊರಕುತ್ತದೆ ಎಂಬ ಜಾಗೃತಿಯನ್ನು ವಿದ್ಯಾರ್ಥಿಗಳು ಇತರರಲ್ಲಿ ಮೂಡಿಸಬೇಕು ಎಂದರು.ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್, ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಮುಂಡಾಳ, ಎಸ್‌ಎಸ್‌ಪಿಯು ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಗುಣವರ್ದನ ಕೆದಿಲ, ಸದಸ್ಯರಾದ ಭವ್ಯಾಕುಮಾರಿ, ರಾಧಾಕೃಷ್ಣ ಪರಮಲೆ, ಪ್ರಮುಖರಾದ ವಸಂತ ರೈ ಕಾರ್ಕಳ, ನಾಗೇಶ್ ರೈ ಮಾಳ ಮುಖ್ಯಅತಿಥಿಗಳಾಗಿದ್ದರು. ಯೋಜನಾಧಿಕಾರಿಗಳಾದ ಸೌಮ್ಯಾ ದಿನೇಶ್, ಪೂರ್ಣಿಮಾ, ಎನ್ ಎಸ್ ಎಸ್ ನಾಯಕರಾದ ಅಭಿಲಾಷ್, ಸುದೀಕ್ಷಾ. ಡಿ.ಕುಂದರ್, ಚಿಂತನ್, ರಚನಾ ಟಿ ವೇದಿಕೆಯಲ್ಲಿದ್ದರು.