ಸಾರಾಂಶ
ಆರ್ಥಿಕ ಸಂಕಷ್ಟದಿಂದ ಶಿಕ್ಷಣ ವಂಚಿತರಾಗಿರುವ ಬಡಮಕ್ಕಳಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದು ಶಿಕ್ಷಣ ಒದಗಿಸಬೇಕೆಂದು ಶಾಸಕ ಎಸ್.ಟಿ.ಸೋಮಶೇಖರ್ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಕೆಂಗೇರಿ
ಆರ್ಥಿಕ ಸಂಕಷ್ಟದಿಂದ ಶಿಕ್ಷಣ ವಂಚಿತರಾಗಿರುವ ಬಡಮಕ್ಕಳಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದು ಶಿಕ್ಷಣ ಒದಗಿಸಬೇಕೆಂದು ಶಾಸಕ ಎಸ್.ಟಿ.ಸೋಮಶೇಖರ್ ಸಲಹೆ ನೀಡಿದರು.ಮಂಗಳವಾರ ಎಸ್.ಟಿ.ಸೋಮಶೇಖರ್‌ಗೌಡ ಅಭಿಮಾನಿಗಳ ಬಳಗದಿಂದ ರಘುವನಹಳ್ಳಿಯ ಶ್ರೀ ಸಿದ್ಧಗಂಗಾ ಪ್ರೌಢಶಾಲೆ, ಸೋಫಿಯಾ ಮತ್ತು ವಾಜರಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
ವಿದ್ಯೆಗಿಂತ ಸಂಪತ್ತು ಬೇರೊಂದಿಲ್ಲ. ಶಿಕ್ಷಣಕ್ಕೆ ಬೇಧಭಾವವಿಲ್ಲ. ಬಡವರು, ಶ್ರೀಮಂತರಿಗೂ ಶಿಕ್ಷಣ ಸಿಗಬೇಕು. ಬಡತನದ ದೆಸೆಯಿಂದ ಶಿಕ್ಷಣ ವಂಚಿತರಾಗುವ ಮಕ್ಕಳ ನೆರವಿಗೆ ಪ್ರತಿಯೊಬ್ಬರು ಧಾವಿಸಬೇಕೆಂದು ಕರೆ ನೀಡಿದರು.ಕಾಂಗ್ರೆಸ್ ಮುಖಂಡ ಬಿ.ಆರ್.ಶಿವಮಾದಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಗ್ಗಲಿಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಅಮೃತ್ ಗೌಡ, ಪಾಲಿಕೆ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್, ಮೈಲಸಂದ್ರ ನಾಗರಾಜು, ಮಂಜುನಾಥ್, ಶಿವಕುಮಾರ್ ಸ್ವಾಮಿ, ವಾಜರಹಳ್ಳಿ ಶಿವಣ್ಣ, ತಾತಗುಣಿ ಎಂ.ಎಸ್. ಉಮೇಶ್, ಆರ್.ಪ್ರವೀಣ್, ಅರುಣ್ ಕುಮಾರ್, ಶ್ರೀನಾಥ್, ವಿಜಯ್, ಪಾರ್ವತಿ, ವಿಜಯಕುಮಾರ್, ಮಮತಾ ಇದ್ದರು.