ನುಗ್ಗೇಹಳ್ಳಿ: ವೀರಶೈವ ಸಮಾಜದ ವತಿಯಿಂದ ಶ್ರೀ ಮಹಾದೇಶ್ವರ ಸ್ವಾಮಿ 35ನೇ ವರ್ಷದ ಅದ್ಧೂರಿ ಕೆಂಡಕೊಂಡೋತ್ಸವ ಅಂಗವಾಗಿ ವಿಶೇಷ ಪೂಜೆ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಗ್ರಾಮದ ಪೇಟೆ ಬೀದಿಯಲ್ಲಿರುವ ಶ್ರೀ ಬಸವಣ್ಣ ದೇವಾಲಯದಲ್ಲಿ ಸೋಮವಾರ ಬೆಳಗ್ಗೆಯಿಂದಲೇ ವಿಶೇಷ ಅಭಿಷೇಕ ಪೂಜೆ ಹೂವಿನ ಅಲಂಕಾರ ಸೇರಿದಂತೆ ವಿವಿಧ ಪೂಜೆಗಳು ನೆರವೇರಿದವು. ಶಾಸಕ ಸಿಎನ್ ಬಾಲಕೃಷ್ಣ ರವರು ಪೂಜೆಯಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಭಕ್ತರಿಗೆ ಆಶೀರ್ವಚನ ನೀಡಿ ದೇವರ ದಯೆಯಿಂದ ಈ ವರ್ಷವೂ ಉತ್ತಮ ಮಳೆ ಬೆಳೆಯಾಗಿ ರೈತರ ಬದುಕು ಹಸನಾಗಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ಜಯಣ್ಣ ಸ್ವಾಮೀಜಿ, ವೀರಶೈವ ಸಮಾಜದ ಹಿರಿಯರಾದ ಸಿಬಿ ಚೆನ್ನ ಮಲ್ಲಪ್ಪ, ಎನ್‌ಟಿ ಸಿದ್ದಪ್ಪ, ಸರ್ವ ಮಂಗಳಮ್ಮ, ಮುಖಂಡರಾದ ಮೆಡಿಕಲ್ ವೆಂಕಟೇಶ್, ದೊರೆಸ್ವಾಮಿ, ತೋಟಿ ನಾಗರಾಜು, ಎಚ್ ಬಿ ರಂಗಸ್ವಾಮಿ, ಓಬಳಾಪುರ ಬಸವರಾಜು, ಪಟೇಲ್ ಕುಮಾರ್, ಹುಲಿಕೆರೆ ಸಂಪತ್ ಕುಮಾರ್, ಕೃಪಾ ಶಂಕರ್, ಎಂ ಎಸ್ ಸುರೇಶ್, ಹೋಬಳಿ ಅಧ್ಯಕ್ಷ ಎನ್ ಎಸ್ ಗಿರೀಶ್, ಸಮಾಜದ ಪ್ರಮುಖರಾದ ಎನ್ ಸಿ ಕುಮಾರಸ್ವಾಮಿ, ಎನ್‌ಸಿ ವಿಶ್ವನಾಥ್, ಜಯಕೀರ್ತಿ, ಗಣೇಶ್, ಮಹೇಶ್, ಆನಂದ್, ಎನ್ ಆರ್ ಪ್ರದೀಪ್, ಎನ್‌ಪಿ ಪ್ರದೀಪ್, ಉದ್ಯಮಿಗಳಾದ ಎನ್‌ಬಿ ಲೋಹಿತ್, ಎನ್‌ಬಿ ವಿನಯ್, ವಿಜಯ್ ಕುಮಾರ್, ಎನ್ಎಂ ಉಮೇಶ್, ರಾಜು, ಹೋಟೆಲ್ ಗುರು, ಎನ್‌ಸಿ ಉಮೇಶ್, ಹೋಟೆಲ್ ಮಂಜು, ರೇಣುಕಾ ಸ್ವಾಮಿ, ಎನ್ ಎನ್ ತ್ರಿನೇಶ್ , ಎನ್ ಆರ್ ತೇಜಸ್, ಅರುಣ, ಚಿಂಟು, ರುದ್ರಸ್ವಾಮಿ, ಸೇರಿದಂತೆ ಸಮಾಜದ ಬಾಂಧವರು ಗ್ರಾಮಸ್ಥರು ಹಾಜರಿದ್ದರು.ನುಗ್ಗೇಹಳ್ಳಿ ಶ್ರೀ ಮಹಾದೇಶ್ವರ ಸ್ವಾಮಿ ಕೆಂಡಕೊಂಡೋತ್ಸವ
ವೀರಶೈವ ಸಮಾಜದ ವತಿಯಿಂದ ಶ್ರೀ ಮಹಾದೇಶ್ವರ ಸ್ವಾಮಿ 35ನೇ ವರ್ಷದ ಅದ್ಧೂರಿ ಕೆಂಡಕೊಂಡೋತ್ಸವ ಅಂಗವಾಗಿ ವಿಶೇಷ ಪೂಜೆ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಶಾಸಕ ಸಿಎನ್ ಬಾಲಕೃಷ್ಣ ರವರು ಪೂಜೆಯಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಭಕ್ತರಿಗೆ ಆಶೀರ್ವಚನ ನೀಡಿ ದೇವರ ದಯೆಯಿಂದ ಈ ವರ್ಷವೂ ಉತ್ತಮ ಮಳೆ ಬೆಳೆಯಾಗಿ ರೈತರ ಬದುಕು ಹಸನಾಗಲಿ ಎಂದು ಹಾರೈಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
