ಉಗಮ ಶ್ರೀನಿವಾಸ್ ಕನ್ನಡಪ್ರಭ ವಾರ್ತೆ ತುಮಕೂರು ಕಲ್ಪತರು ಜಿಲ್ಲೆ ತುಮಕೂರಿನಲ್ಲಿ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಿದ್ದು ನಾಲ್ಕು ವರ್ಷಗಳಲ್ಲಿ 1316 ಮಂದಿ ಪತ್ತೆಯಾಗಿದ್ದು ಇದು ಗಂಭೀರ ಆರೋಗ್ಯ ಹಾಗೂ ಸಾಮಾಜಿಕ ಸಮಸ್ಯೆಗೆ ಕಾರಣವಾಗಿದೆ. ತುಮಕೂರು ಜಿಲ್ಲೆಯಲ್ಲಿ 2023-24 ನೇ ಸಾಲಿನಲ್ಲಿ 478 ಮಂದಿ ಬಾಲ ಗರ್ಭಿಣಿಯರಿದ್ದರೆ, 2024-25ನೇ ಸಾಲಿನಲ್ಲಿ 442, 2025-26ನೇ ಸಾಲಿನಲ್ಲಿ 349 ಹಾಗೂ 2026 ರಲ್ಲಿ ಜೂನ್ ವರೆಗೆ 47 ಮಂದಿ ಸೇರಿದಂತೆ ಕಳೆದ ನಾಲ್ಕು ವರ್ಷಗಳಲ್ಲಿ 1316 ಬಾಲಗರ್ಭಿಣಿಯರಾಗಿದ್ದಾರೆ.2023-2024 ರ ಸಾಲಿನಲ್ಲಿ ಜಿಲ್ಲೆಯಲ್ಲಿ 14 ವರ್ಷದ ಒಳಗಿನ 12 ಮಂದಿ, 15 ವರ್ಷದೊಳಗಿನ 23 ಮಂದಿ, 16 ವರ್ಷದೊಳಗಿನ 102 ಹಾಗೂ 17 ವರ್ಷದೊಳಗಿನ 341 ಮಂದಿ ಬಾಲಗರ್ಭಿಣಿಯರಾಗಿದ್ದಾರೆ. 2024-25 ನೇ ಸಾಲಿನಲ್ಲಿ 14 ವರ್ಷ ವಯಸ್ಸಿನಗೊಳಗಿನ 15, 15 ವರ್ಷದೊಳಗಿನ 20, 16 ವರ್ಷದೊಳಗಿನ 85 ಹಾಗೂ 17 ವರ್ಶದೊಳಗಿನ 322 ಮಂದಿ ಬಾಲಗರ್ಭಿಣಿಯರಾಗಿದ್ದಾರೆ.2025-26 ನೇ ಸಾಲಿನಲ್ಲಿ 14 ವರ್ಷದೊಳಗಿನ 7 ಮಂದಿ, 15 ವರ್ಷದೊಳಗಿನ 28 ಮಂದಿ, 16 ವರ್ಷದೊಳಗಿನ 58 ಹಾಗೂ 17 ವರ್ಷದೊಳಗಿನ 253 ಮಂದಿ ಬಾಲಗರ್ಭಿಣಿಯರಾಗಿದ್ದಾರೆ.2026 ನೇ ಸಾಲಿನ ಜೂನ್ ತಿಂಗಳವರೆಗೆ 14 ವರ್ಷದೊಳಗಿನ 2 ಮಂದಿ, 15 ವರ್ಷದೊಳಗಿನ 3 ಮಂದಿ, 16 ವರ್ಷದೊಳಗಿನ 9 ಮಂದಿ ಹಾಗೂ 17 ವರ್ಷದೊಳಗಿನ 33 ಮಂದಿ ಬಾಲಗರ್ಭಿಣಿಯರಾಗಿದ್ದಾರೆ.ಕಳೆದ ವಾಲ್ಕು ವರ್ಷಗಳಲ್ಲಿ ಪಾವಗಡದಲ್ಲಿ ಅತಿ ಹೆಚ್ಚು ಅಂದರೆ 428 ಮಂದಿ, ಶಿರಾದಲ್ಲಿ 257 ಮಂದಿ ಬಾಲಗರ್ಭಿಣಿಯರಾಗಿದ್ದು ಮೊದಲೆರೆಡು ಸ್ಥಾನದಲ್ಲಿದೆ. ಚಿಕ್ಕನಾಯಕನಹಳ್ಳಿಯಲ್ಲಿ 105, ಗುಬ್ಬಿಯಲ್ಲಿ 62, ಕೊರಟಗೆರೆಯಲ್ಲಿ 44, ಕುಣಿಗಲ್ 63, ಮಧುಗಿರಿಯಲ್ಲಿ 155, ತಿಪಟೂರಿನಲ್ಲಿ 44, ತುಮಕೂರಿನಲ್ಲಿ 126, ತುರುವೇಕೆರೆಯಲ್ಲಿ 32 ಮಂದಿ ಸೇರಿದಂತೆ ಒಟ್ಟು 1316 ಮಂದಿ ಬಾಲಗರ್ಭಿಣಿಯರಿದ್ದಾರೆ.ಗಡಿ ಭಾಗವಾದ ಪಾವಗಡ, ಶಿರಾ ಮತ್ತಿತರೆ ಗ್ರಾಮದಲ್ಲಿ ಗಡಿ ಭಾಗದ ಆಂಧ್ರ ಪ್ರದೇಶದಿಂದ ಮದುವೆ ಮಾಡಿಕೊಂಡು ಬರುತ್ತಿದ್ದಾರೆ. ಮದುವೆಯಾಗದೆ ಗರ್ಭಿಣಿಯಾದವರು ಫೋಕ್ಸೋ ಕಾಯ್ದೆಯಡಿಯೂ ಪ್ರಕರಣ ದಾಖಲಾಗಿವೆ. ಆಸ್ಪತ್ರೆಗಳಲ್ಲಿ ಗರ್ಭಿಣಿಯರು ಬಂದಾಗ ಮಕ್ಕಳ ವಯಸ್ಸು ಬೆಳಕಿಗೆ ಬರುತ್ತಿದೆ.2026 ನೇ ಸಾಲಿನಲ್ಲಿ ಬಾಲ ಗರ್ಣಿಯರ ಸಂಖ್ಯೆ ಕಡಿಮೆಯಾಗಿದ್ದರೂ ನಾಲ್ಕು ವರ್ಷದಲ್ಲಿ ಆಗಿರುವ ಬಾಲಗರ್ಭಿಣಿಯರ ಸಂಖ್ಯೆ ಆತಂಕಕ್ಕೆ ಕಾರಣವಾಗಿದೆ. ಆರೋಗ್ಯ ಶಿಕ್ಷಣದ ಬಗ್ಗೆ ಸಂಬಂಧಪಟ್ಟವರು ಜಾಗೃತಿ ಮೂಡಿಸಬೇಕಾಗಿದೆ. ಬಾಲ್ಯ ವಿವಾಹದ ಬಗ್ಗೆ ಪ್ರೌಢಶಾಲಾ ಮಟ್ಟದಲ್ಲೇ ಜಾಗೃತಿ ಮೂಡಿಸಬೇಕಾಗಿದೆ. ಮದುವೆ ವಯಸ್ಸಿನ ಬಗ್ಗೆ ಗ್ರಾಮೀಣ ಭಾಗದಲ್ಲಿ ಆಂದೋಲನ ರೀತಿ ಕಾರ್ಯಕ್ರಮ ರೂಪಿಸಬೇಕಾಗಿದೆ ಎಂಬುದು ಆಸ್ಪತ್ರೆ ಸಿಬ್ಬಂದಿ ಆಂಬೋಣವಾಗಿದೆ.
ಹೆಚ್ಚುತ್ತಲೇ ಇದೆ ಬಾಲಗರ್ಭಿಣಿಯರ ಸಂಖ್ಯೆ
ಕಲ್ಪತರು ಜಿಲ್ಲೆ ತುಮಕೂರಿನಲ್ಲಿ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಿದ್ದು ನಾಲ್ಕು ವರ್ಷಗಳಲ್ಲಿ 1316 ಮಂದಿ ಪತ್ತೆಯಾಗಿದ್ದು ಇದು ಗಂಭೀರ ಆರೋಗ್ಯ ಹಾಗೂ ಸಾಮಾಜಿಕ ಸಮಸ್ಯೆಗೆ ಕಾರಣವಾಗಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.