ಸಾರಾಂಶ
ಅಂಕೋಲಾ: ಸಾಮಾಜಿಕ ಆರೋಗ್ಯದ ಶ್ರೇಯೋಭಿವೃದ್ಧಿಯ ಕರ್ತವ್ಯದಲ್ಲಿ ಶೂಶ್ರಷಕರ ಸೇವೆ ಅತ್ಯಮೂಲ್ಯವಾಗಿದೆ ಎಂದು ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ.ಪೂರ್ಣಿಮಾ ಆರ್.ಟಿ. ಹೇಳಿದರು.
ಅವರು ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್ ಇದರ ದೀಪಧಾರಣೆ ಮತ್ತು ಪ್ರತಿಜ್ಞಾ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಾರಾಯಣ ಸ್ವಾಮಿ ಮಾತನಾಡಿ, ಅಂದು ಶುಶ್ರೂಷಕ ಸೇವೆ ಎನ್ನುವುದು ಗೌರವಕ್ಕೆ ಧಕ್ಕೆ ಎನ್ನುವ ವಾತಾವರಣವಿತ್ತು. ಆದರೆ ಇಂದು ಶುಶ್ರೂಷಕ ಸೇವೆಯೆ ಎಲ್ಲ ರಂಗಕ್ಕಿಂತ ಮೇಲ್ಪಂಕ್ತಿಯಲ್ಲಿ ಕಾಣಿಸಿಕೊಂಡು ಗಮನಾರ್ಹವಾಗಿದೆ ಎಂದರು.
ಕಾರವಾರದ ಜಿಲ್ಲಾಸ್ಪತ್ರೆಯ ಶುಶ್ರೂಷಕರ ಮೇಲ್ವಿಚಾರಕಿ ಚಂದ್ರಕುಮಾರಿ ರಜಪೂತ್ ದೀಪ ಪ್ರಜ್ವಲನೆ ನಡೆಸಿ ಮಾತನಾಡಿ, ಶುಶ್ರೂಷಕಿ ಸಮಾಜದ ಕಣ್ಣಾಗಿ ಮಾದರಿಯಾಗಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿಶ್ವದರ್ಶನ ಶಿಕ್ಷಣ ಸಮೂಹ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಮಾತನಾಡಿ, ಮಾಜಿ ಶಾಸಕ ದಿವಂಗತ ಉಮೇಶ ಭಟ್ ಅವರ ಕನಸಿನ ಕೂಸಾಗಿ ಹುಟ್ಟಿಕೊಂಡ ವಿಶ್ವದರ್ಶನ ಸಂಸ್ಥೆ ಹೆಮ್ಮರವಾಗಿ ಬೆಳೆಯುವರ ಹಿಂದೆ ಸರ್ವರ ಕೊಡುಗೆಯ ಅಗ್ರಗಣ್ಯವಾಗಿದೆ ಎಂದರು.
ಉಪ ಪ್ರಾಚಾರ್ಯೆ ದೀಪಾಲಿ ಕುರ್ಢೆಕರ, ಕಾರ್ಯ ನಿರ್ವಾಹಕ ಗುರು ನಾಯಕ ಉಪಸ್ಥಿತರಿದ್ದರು.ಪ್ರಾಚಾರ್ಯ ಶಂಕರ ಗೌಡ ಕಡೆಮನೆ ಸ್ವಾಗತಿದರು. ಉಪನ್ಯಾಸಕರಾದ ಅಂಜಲಿ ನಾಯ್ಕ, ಗೀತಾ ನಾಯ್ಕ ನಿರೂಪಿಸಿದರು. ಸುಮನಾ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕಿ ಅನುಷಾ ನಾಯ್ಕ ವರದಿ ವಾಚಿಸಿದರು. ಉಪನ್ಯಾಸಕಿ ಐಶ್ವರ್ಯ ನಾಯ್ಕ ವಂದಿಸಿದರು. ಸಾಂಸ್ಕ್ರತಿಕ ಕಾರ್ಯಕ್ರಮವನ್ನು ರಮ್ಯಾ ಗೌಡ ಹಾಗೂ ಕವಿತಾ ಗೌಡ ನಿರ್ವಹಿಸಿದರು.