ಸಾರಾಂಶ
ಆಕಸ್ಮಿಕ ಬೆಂಕಿಗೆ ಅಡಿಕೆ ಹಾಗೂ ಬಾಳೆಯ ಗಿಡಗಳು ಸಂಪೂರ್ಣ ನಾಶವಾಗಿರುವ ಘಟನೆ ಕಟ್ಟೆಬಾರೆಯಲ್ಲಿ ನಡೆದಿದೆ. ಆಗ್ನಿಶಾಮಕ ದಳಕ್ಕೆ ಕರೆ ಮಾಡಿದರೂ ಸ್ಪಂದಿಸದ ಸಿಬ್ಬಂದಿ ನಡೆಗಡ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಳವನಹಳ್ಳಿ: ಆಕಸ್ಮಿಕ ಬೆಂಕಿಗೆ ಅಡಿಕೆ ಹಾಗೂ ಬಾಳೆಯ ಗಿಡಗಳು ಸಂಪೂರ್ಣ ನಾಶವಾಗಿರುವ ಘಟನೆ ಕಟ್ಟೆಬಾರೆಯಲ್ಲಿ ನಡೆದಿದೆ. ಆಗ್ನಿಶಾಮಕ ದಳಕ್ಕೆ ಕರೆ ಮಾಡಿದರೂ ಸ್ಪಂದಿಸದ ಸಿಬ್ಬಂದಿ ನಡೆಗಡ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಹುಚ್ಚರಾಯನಪಾಳ್ಯ ಗ್ರಾಮದ ಉಮಾಶಂಕರಾಧ್ಯ ಅವರಿಗೆ ಸೇರಿದ ಕಟ್ಟೆಬಾರೆಯಲ್ಲಿರುವ ಕೋಡ್ಲಹಳ್ಳಿ ಸರ್ವೇ.೯೦/೨ ರಲ್ಲಿ ಬುಧವಾರ ಸಂಜೆ ೪ ಗಂಟೆಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಸುಮಾರು ೨೦೦ ಆಡಿಕೆ ಗಿಡ ಹಾಗೂ ೨೦೦ ಬಾಳೆ ಗಿಡಿಗಳು ನಾಶವಾಗಿವೆ.ಸ್ಥಳಕ್ಕೆ ಬಾರದ ಆಗ್ನಿಶಾಮಕ ತಂಡ
ಬೆಂಕಿ ತಗಲಿದ ತಕ್ಷಣ ತೋಟದ ಮಾಲಿಕ ಆಗ್ನಿಶಾಮಕ ಕಚೇರಿಗೆ ದೂರವಾಣಿ ಕರೆ ಮಾಡಿದ್ದಾರೆ ಕರೆಗೆ ಯಾರು ಸ್ಪಂದಿಸದೇ ಇರುವ ಕಾರಣ ಸ್ಥಳಕ್ಕೆ ಹೋಗಿ ನಡೆದ ಘಟನೆ ಬಗ್ಗೆ ತಿಳಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ನಮ್ಮಲ್ಲಿ ವಾಹನ ಇಲ್ಲ ಮಧುಗಿರಿಯಿಂದ ಬರುತ್ತೆ ಎಂದು ಕಾಲಹರಣ ಮಾಡಿದ್ದಾರೆ. ನಂತರ ಸ್ಥಳೀಯರ ಸಹಾಯದಿಂದ ಸೋಪ್ಪು ಹಾಗೂ ನೀರಿನಿಂದ ಬೆಂಕಿಯನ್ನ ನಂದಿಸಿದ್ದಾರೆ ಎಂದು ತಿಳಿದುಬಂದಿದೆ.ರೈತ ಉಮಾಶಂಕರಾಧ್ಯ ಮಾತನಾಡಿ ನಾನು ಬಡರೈತನಾಗಿದ್ದು ಜೀವನ ನಡೆಸಲು ಸುಮಾರು ೧ ಸಾವಿರಕ್ಕೂ ಅಧಿಕ ಅಡಿಕೆ, ಬಾಳೆಯನ್ನ ಹಾಕಲಾಗಿತ್ತು. ಪಸಲು ಬರುವ ಮುಂಚೆಯೇ ಬೆಂಕಿಗೆ ಸಿಲುಕಿ ಸಂಪೂರ್ಣ ನಾಶವಾಗಿದೆ. ಅಗ್ನಿಶಾಮಕ ಅಧಿಕಾರಿಗಳ ತಿಳಿಸಿದರೂ ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ತೋರಿದ್ದಾರೆ. ತೋಟಗಾರಿಕೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದರು.