ಸಾರಾಂಶ
ಮನುಷ್ಯ ಪ್ರತಿನಿತ್ಯ ಸೇವನೆ ಮಾಡುವ ಆಹಾರ ಪೌಷ್ಟಿಕವಾಗಿ ಇದ್ದರೆ ಮಾತ್ರ ಗಟ್ಟಿಮುಟ್ಟಾಗಿ ಇರುತ್ತಾನೆ ಎಂದು ಡಾ. ಮಹೇಶ ಹಿರೇಮಠ ಹೇಳಿದರು.
ನರಗುಂದ: ಮನುಷ್ಯ ಪ್ರತಿನಿತ್ಯ ಸೇವನೆ ಮಾಡುವ ಆಹಾರ ಪೌಷ್ಟಿಕವಾಗಿ ಇದ್ದರೆ ಮಾತ್ರ ಗಟ್ಟಿಮುಟ್ಟಾಗಿ ಇರುತ್ತಾನೆ ಎಂದು ಡಾ. ಮಹೇಶ ಹಿರೇಮಠ ಹೇಳಿದರು.ಅವರು ಪಟ್ಟಣದ ಜಮಾಲಾಪುರ ಓಣಿಯ ಮಾರುತೇಶ್ವರ ದೇವಸ್ಥಾನದಲ್ಲಿ ಧರ್ಮಸ್ಥಳ ಸಂಸ್ಥೆ, ಸ್ನೇಹಜೀವಿ ಜ್ಞಾನವಿಕಾಸ ಕೇಂದ್ರದಲ್ಲಿ ಆಶ್ರಯದಲ್ಲಿ ನಡೆದ ಪೌಷ್ಟಿಕ ಆಹಾರ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ದಿನನಿತ್ಯದ ಊಟದ ವ್ಯವಸ್ಥೆ ಬೆಳಗ್ಗೆ ರಾಜನಂತೆ ಊಟ ಮಾಡಬೇಕು, ಮಧ್ಯಾಹ್ನ ಮಧ್ಯಮ ವರ್ಗದವರಂತೆ ಊಟ ಮಾಡಬೇಕು ರಾತ್ರಿ ಭಿಕ್ಷುಕನಂತೆ ಊಟ ಮಾಡಬೇಕು, ಈ ರೀತಿ ಮಾಡಿದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತೆ ಎಂದರು.
ಮೊಳಕೆ ಕಾಳು, ಮೊಟ್ಟೆ, ಹಾಲು, ಮೊಸರು, ಮಜ್ಜಿಗೆ ಇದೆಲ್ಲವೂ ಸಹಿತ ನಮ್ಮ ದಿನನಿತ್ಯದ ಊಟದಲ್ಲಿ ಸೇವನೆ ಮಾಡಬೇಕು, ಇದರಿಂದ ನಮಗೆ ಎಲ್ಲಾ ರೀತಿಯ ಪೌಷ್ಟಿಕ ಆಹಾರ ದೊರೆಯುತ್ತದೆ ಎಂದು ಮಾಹಿತಿ ನೀಡಿದರು. ಮಹಿಳೆಯರು ಪೌಷ್ಟಿಕತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು, ಕುಟುಂಬವನ್ನು ನಿರ್ವಹಣೆ ಮಾಡುವುದು ಮಹಿಳೆಯರು, ಹಾಗಾಗಿ ಹೆಚ್ಚಾಗಿ ಮಹಿಳೆಯರಿಗೆ ಮಾಹಿತಿಯನ್ನು ನೀಡಲಾಗುವುದು. ಜ್ಞಾನವಿಕಾಸ ಕೇಂದ್ರದಿಂದ ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ತಿಳಿಸುವ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಈರಮ್ಮ ಹಿರೇಮಠ, ಯೋಜನಾಧಿಕಾರಿ ಮಾಲತಿ ದಿನೇಶ, ವೀರಯ್ಯ ಶಿರುಂದಮಠ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ವನಜಾಕ್ಷಮ್ಮ, ವಲಯದ ಮೇಲ್ವಿಚಾರಕಿ ನಾಗರತ್ನ, ಸೇವಾ ಪ್ರತಿನಿಧಿ ಮಂಜುಳಾ ಹಾಗೂ ಕೇಂದ್ರದ ಎಲ್ಲಾ ಸಂಘದ ಸದಸ್ಯರು ಉಪಸ್ಥಿತರಿದ್ದರು.