ನ್ಯಾಮತಿ ಪಟ್ಟಣದಲ್ಲಿ ನಿಯಮ ಉಲ್ಲಂಘಿಸಿ ಗುಟ್ಕಾ ಮಾರಾಟ ಮಾಡುತ್ತಿದ್ದ ಚಹಾ ಅಂಗಡಿ, ಹೋಟೆಲ್, ಪಾನ್ ಬೀಡಾ ಸೇರಿದಂತೆ ವಿವಿಧ ಅಂಗಡಿಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ದಿಢೀರ್ ದಾಳಿ ನಡೆಸಿ, ಮಾಲೀಕರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸಿದರು.
- ₹100- ₹500 ದಂಡ ವಿಧಿಸಿ ಮಾಲೀಕರಿಗೆ ಎಚ್ಚರಿಕೆ
- - -ನ್ಯಾಮತಿ: ಪಟ್ಟಣದಲ್ಲಿ ನಿಯಮ ಉಲ್ಲಂಘಿಸಿ ಗುಟ್ಕಾ ಮಾರಾಟ ಮಾಡುತ್ತಿದ್ದ ಚಹಾ ಅಂಗಡಿ, ಹೋಟೆಲ್, ಪಾನ್ ಬೀಡಾ ಸೇರಿದಂತೆ ವಿವಿಧ ಅಂಗಡಿಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ದಿಢೀರ್ ದಾಳಿ ನಡೆಸಿ, ಮಾಲೀಕರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸಿದರು.
ತಂಬಾಕು ನಿಷೇಧ ಕೋಶ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ನೇತೃತ್ವದಲ್ಲಿ ಪಟ್ಟಣದ ನೆಹರೂ ರಸ್ತೆ, ಶ್ರೀ ಮಹಂತೇಶ್ವರ ರಸ್ತೆ, ಬಸ್ ನಿಲ್ದಾಣದ ಬಳಿ ಇರುವ ಚಹಾದ ಅಂಗಡಿ, ಮೊಬೈಲ್ ಕರೆನ್ಸಿ ಅಂಗಡಿ, ಪಾನ್ ಬೀಡಾ ಶಾಪ್‌ಗಳಿಗೆ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿತು. ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚಿದರು. ರಾಜ್ಯದಲ್ಲಿ ತಂಬಾಕು ಉತ್ಪನ್ನ ಮಾರಾಟ ನಿಷೇಧವಿದ್ದರೂ 22 ಅಂಗಡಿಗಳ ಮಾಲೀಕರು ನಿಯಮ ಉಲ್ಲಂಘಿಸಿದ್ದರಿಂದ ಅವರಿಗೆ ₹100 ರಿಂದ ₹500 ವರೆಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದರು.ತಂಬಾಕು ಸೇವನೆ ನಿಯಂತ್ರಣಕ್ಕೆ ಹಲವು ಕಾನೂನು ರೂಪಿಸಿದ್ದರೂ ಮಾರಾಟ ಮಾಡುತ್ತಿರುವ ಬಗ್ಗೆ ಸ್ಥಳೀಯ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಿದೆ. ಇನ್ನು ಮುಂದೆ ಶಾಲೆಗಳ ಆವರಣದಿಂದ 100 ಮೀಟರ್ ಒಳಗೆ ಹಾಗೂ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳಾದ ಸಿಗರೇಟ್, ಗುಟ್ಕಾದಂತಹ ವಸ್ತುಗಳನ್ನು ಮಾರಾಟ ಮಾಡಲು ನಿಷೇಧವಿದೆ ಎಂದು ತಿಳಿಹೇಳಿದರು.
ಕಾರ್ಯಾಚರಣೆಯಲ್ಲಿ ನ್ಯಾಮತಿ ಠಾಣೆಯ ಪಿಎಸ್‌ಐ ಶೋಭ, ಎಎಸ್‌ಐ ಮಲ್ಲೇಶಪ್ಪ, ಸಿಬ್ಬಂದಿ ಹೇಮಂತ್, ಆರೋಗ್ಯ ಇಲಾಖೆಯ ಎಂ.ಬಿ. ನಿಂಗಪ್ಪ, ಜಂಟಿ ಕೈ ಪಡೆಯ ಸುಧೀರ್ ನುಚ್ಚಿನ್ ಇದ್ದರು.- - -
-ಚಿತ್ರ:ತಂಬಾಕು ನಿಷೇಧ ಕೋಶ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ನ್ಯಾಮತಿ ಪಟ್ಟಣದಲ್ಲಿ ನಿಯಮ ಉಲ್ಲಂಘಿಸಿ ಗುಟ್ಕಾ ಮಾರಾಟ ಮಾಡುತ್ತಿದ್ದ ಅಂಗಡಿ, ಮುಂಗ್ಗಟ್ಟುಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ದಂಡ ವಿಧಿಸಿ ಎಚ್ಚರಿಕೆ ನೀಡಿದರು.