ಜೂನ್‌ 24ರ ವರೆಗೆ ಬೇಲೂರಿನಲ್ಲಿ ನ್ಯಾಯ ಸುಧಾ ಮಂಗಳ ಉತ್ಸವ

| Published : Jun 02 2024, 01:48 AM IST

ಜೂನ್‌ 24ರ ವರೆಗೆ ಬೇಲೂರಿನಲ್ಲಿ ನ್ಯಾಯ ಸುಧಾ ಮಂಗಳ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾಧೀಶತೀರ್ಥ ಶ್ರೀಪಾದರ 17ನೇ ಶ್ರೀಮದ್ ಬ್ರಹ್ಮಸೂತ್ರ ಅನು ವ್ಯಾಖ್ಯಾನ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವ ಮೇ 31 ಮತ್ತು ಜೂ.1, 2, 24ರಂದು ಶ್ರೀ ಚೆನ್ನಕೇಶವ ಸನ್ನಿಧಿ ಬೇಲೂರಿನಲ್ಲಿ ನಡೆಯುತ್ತಿದೆ. ಇದರ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಸಂಸ್ಥಾನ ಪೂಜೆ ಜ್ಞಾನ ಸತ್ರ ಉದ್ಘಾಟನೆಯನ್ನು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಸುಭುದೇಂದ್ರತೀರ್ಥ ಶ್ರೀಪಾದರು ನೆರವೇರಿಸಿಕೊಟ್ಟರು.

ಸಂಸ್ಥಾನ ಪೂಜೆ ಜ್ಞಾನ ಸತ್ರ ಉದ್ಘಾಟನೆ । ಸುಭುದೇಂದ್ರತೀರ್ಥ ಉಪಸ್ಥಿತಿ

ಬೇಲೂರು: ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ಹೃಷೀಕೇಶ ತೀರ್ಥಪೀಠ ಶ್ರೀ ಪಲಿಮಾರುಮಠ ಉಡುಪಿ ಜಂಟಿಯಾಗಿ ವಿದ್ಯಾಧೀಶತೀರ್ಥ ಶ್ರೀಪಾದರ 17ನೇ ಶ್ರೀಮದ್ ಬ್ರಹ್ಮಸೂತ್ರ ಅನು ವ್ಯಾಖ್ಯಾನ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವ ಮೇ 31 ಮತ್ತು ಜೂ.1, 2, 24ರಂದು ಶ್ರೀ ಚೆನ್ನಕೇಶವ ಸನ್ನಿಧಿ ಬೇಲೂರಿನಲ್ಲಿ ನಡೆಯುತ್ತಿದೆ. ಇದರ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಸಂಸ್ಥಾನ ಪೂಜೆ ಜ್ಞಾನ ಸತ್ರ ಉದ್ಘಾಟನೆಯನ್ನು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಸುಭುದೇಂದ್ರತೀರ್ಥ ಶ್ರೀಪಾದರು ನೆರವೇರಿಸಿಕೊಟ್ಟರು .

ಶುಕ್ರವಾರ ಬೆಳಿಗ್ಗೆ 9.30ಕ್ಕೆ ವಾಕ್ಯಾರ್ಥ ಗೋಷ್ಠಿ ಅಧ್ಯಕ್ಷತೆಯನ್ನು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಮಹಾ ಮಹೋಪಾಧ್ಯಾಯ ವಿದ್ವಾನ್ ರಾಜ ಎಸ್. ಗಿರಿ ಆಚಾರ್ಯ ನಡೆಸಿಕೊಟ್ಟರು

ಬೆಳಿಗ್ಗೆ ಆರು ಗಂಟೆಯಿಂದಲೇ ಭಕ್ತರ ದಂಡು ಶ್ರೀ ವೈಷ್ಣವ ಗೋಷ್ಠಿಯಲ್ಲಿ ನಡೆದ ಪೂಜೆಗೆ ಹರಿದು ಬಂದಿತ್ತು. ಮಂತ್ರಾಲಯದ ಸುಭುದೇಂದ್ರ ತೀರ್ಥ ಶ್ರೀಪಾದರು ಬೇಲೂರಿನ ಶಾಸಕ ಎಚ್.ಕೆ.ಸುರೇಶ್ ಮನೆಯಲ್ಲಿಯೇ ತಂಗಿದ್ದರು. ಶನಿವಾರ ಮಧ್ಯಾಹ್ನ ಭಕ್ತಾದಿಗಳಿಗೆಲ್ಲ ಫಲಮಂತ್ರ ಪುಷ್ಪಾಕ್ಷತೆ ವಿತರಿಸಿ ಮಾಧ್ಯಮದೊಂದಿಗೆ ಮಾತನಾಡಿ, ಬೇಲೂರು ವಿಶ್ವವಿಖ್ಯಾತ ಸ್ಥಳವಾದರೂ ಪ್ರಗತಿಯಲ್ಲಿ ಸ್ವಲ್ಪ ಹಿಂದೆ ಬಿದ್ದಿದ್ದು ಶಾಸಕರು ಬೇಲೂರನ್ನು ಪ್ರಗತಿಯತ್ತ ಕೊಂಡೊಯ್ಯಲು ಶ್ರಮಿಸಬೇಕೆಂದು ತಿಳಿಸಿದರು.

ಅದಲ್ಲದೆ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಜಾಗವು ಬೇಲೂರಿನಲ್ಲಿದ್ದು ಅಲ್ಲಿ ಬರುವ ಪ್ರವಾಸಿಗರಿಗೆ ಮತ್ತು ಭಕ್ತಾದಿಗಳಿಗೆ ತಂಗಲು ಹಾಗೂ ದಿನವೂ ಅನ್ನದಾಸೋಹ ನಡೆಯುವ ವ್ಯವಸ್ಥೆಯು ಆಗಬೇಕು. ಅದನ್ನು ಈಡೇರಿಸುವಲ್ಲಿ ಎಲ್ಲರ ಸಹಕಾರ ಅತ್ಯಗತ್ಯವೆಂದರು.

ಸದ್ಯದಲ್ಲಿಯೇ ಅದರತ್ತ ಕಾರ್ಯೊನ್ಮುಖರಾಗುವುದಾಗಿ ತಿಳಿಸಿದರು. ಪಲಿಮಾರು ಮಠದ ಶ್ರೀಗಳು ಸಂಕಲ್ಪ ಮಾಡಿ ಇಲ್ಲಿ ನೆರವೇರಿಸುತ್ತಿರುವ ಕಾರ್ಯಕ್ರಮ ಅತಿದೊಡ್ಡ ಕಾರ್ಯಕ್ರಮವಾಗಿದ್ದು ಬಹಳ ಅಚ್ಚುಕಟ್ಟಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿರುವುದಾಗಿ ತಿಳಿಸಿದರು.