ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಸಿದ್ಧೇಶ್ವರ ಅಪ್ಪಗಳ ಗುರುನಮನ ಮಹೋತ್ಸವದ ಭಾಗವಾಗಿ ಗುರುವಾರ ಬೆಳಿಗ್ಗೆ ೬ ಗಂಟೆಗೆ ನಾಡಿನ ವಿವಿಧ ಸ್ವಾಮೀಜಿಗಳು, ಮಠಾಧೀಶರು ಹಾಗೂ ಭಕ್ತರು ಶ್ರೀಗಳ ಕುರಿತಾದ ವೇದ ಮೂರ್ತಿ ಜ್ಞಾನ ಜ್ಯೋತಿ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸಿದ್ಧೇಶ್ವರ ಅಪ್ಪಗಳ ಗುರುನಮನ ಮಹೋತ್ಸವದ ಭಾಗವಾಗಿ ಗುರುವಾರ ಬೆಳಿಗ್ಗೆ ೬ ಗಂಟೆಗೆ ನಾಡಿನ ವಿವಿಧ ಸ್ವಾಮೀಜಿಗಳು, ಮಠಾಧೀಶರು ಹಾಗೂ ಭಕ್ತರು ಶ್ರೀಗಳ ಕುರಿತಾದ ವೇದ ಮೂರ್ತಿ ಜ್ಞಾನ ಜ್ಯೋತಿ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಗುರುಗಳಾದ ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ಜಪಯಜ್ಞದ ಮೂಲಕ ಗುರುವಿಗೆ ನಮಸ್ಕಾರಗಳು ಎನ್ನುವ`ಶಿವಾಯ ನಮಃ ಓಂ, ಶಿವಾಯ ನಮಃ ಓಂ'''''''' ಎಂಬ ಮಂತ್ರ ಪಠಿಸಲಾಯಿತು. ನಂತರ ಒಂದು ನಿಮಿಷದ ಮೌನ ಧ್ಯಾನ ಸಲ್ಲಿಸಿ, ಸಿದ್ಧೇಶ್ವರ ಶ್ರೀಗಳನ್ನು ಭಕ್ತಿಯಿಂದ ಸ್ಮರಿಸಲಾಯಿತು.ಸಾವಿರಾರು ಭಕ್ತರು ಜಪಯಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುದೇವನಿಗೆ ಶ್ರದ್ಧೆ-ಭಕ್ತಿಯಿಂದ ನಮನಗಳನ್ನು ಸಲ್ಲಿಸಿದರು. ನಂತರ ಸಿದ್ಧೇಶ್ವರ ಸ್ವಾಮೀಜಿಗಳ ವಿಡಿಯೋ ಪ್ರವಚನ ಪ್ರಸಾರ ಮಾಡಲಾಯಿತು.
ಬೆಳಿಗ್ಗೆ ೮ಗಂಟೆಗೆ ಶ್ರೀ ಮಲ್ಲಿಕಾಜುನ ಶಿವಯೋಗಿಗಳವರ ಪ್ರಣವ ಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಡಿನ ನೂರಾರು ಸ್ವಾಮೀಜಿಗಳು, ಮಠಾಧೀಶರು, ಗುರುದೇವರ ಶಿಷ್ಯ ಬಳಗ ಹಾಗೂ ಭಕ್ತರು ಪೂಜೆಯಲ್ಲಿ ಭಾಗವಹಿಸಿ ಮಲ್ಲಿಕಾರ್ಜುನ ಸ್ವಾಮೀಜಿಗಳು ಹಾಗೂ ಸಿದ್ಧೇಶ್ವರ ಅಪ್ಪಗಳವರಿಗೆ ಪುಷ್ಫ ನಮನ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು.