ಬಸವಣ್ಣ ಭಾವಚಿತ್ರ ಅನಾವರಣ ಬೇಕಾಬಿಟ್ಟು ಕಾರ್ಯಕ್ರಮಕ್ಕೆ ಆಕ್ಷೇಪ

| Published : Feb 19 2024, 01:31 AM IST

ಬಸವಣ್ಣ ಭಾವಚಿತ್ರ ಅನಾವರಣ ಬೇಕಾಬಿಟ್ಟು ಕಾರ್ಯಕ್ರಮಕ್ಕೆ ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕ ಆಡಳಿತದಿಂದ ಹಮ್ಮಿಕೊಂಡಿದ್ದ ಕರ್ನಾಟಕ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ಬೇಕಾಬಿಟ್ಟಿಯಾಗಿ ಆಯೋಜಿಸಲಾಗಿದೆ ಎಂದು ಸ್ಥಳೀಯ ಆಕ್ಷೇಪ ವ್ಯಕ್ತಪಡಿಸಿ ತಹಸೀಲ್ದಾರ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಲಿಂಗಸುಗೂರು: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕ ಆಡಳಿತದಿಂದ ಹಮ್ಮಿಕೊಂಡಿದ್ದ ಕರ್ನಾಟಕ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ಬೇಕಾಬಿಟ್ಟಿಯಾಗಿ ಆಯೋಜಿಸಲಾಗಿದೆ ಎಂದು ಸ್ಥಳೀಯ ಆಕ್ಷೇಪ ವ್ಯಕ್ತಪಡಿಸಿ ತಹಸೀಲ್ದಾರ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಆದರೆ ತಾಲೂಕ ಆಡಳಿತ ಅವರ ಭಾವಚಿತ್ರ ಅನಾವರಣ ಸಮಾರಂಭಕ್ಕೆ ಆಹ್ವಾನ ನೀಡಿಲ್ಲ. ತಾಲೂಕಿನಲ್ಲಿ ಅಪಾರ ಬಸವ ಅನುಯಾಯಿಗಳು ಇದ್ದಾರೆ ಆದರೆ ಯಾರಿಗೂ ಮಾಹಿತಿ ನೀಡಿಲ್ಲ. ಅಲ್ಲದೇ ಕಾರ್ಯಕ್ರಮದಲ್ಲಿ ಕುಳಿತಕೊಳ್ಳಲು ಆಸನ ವ್ಯವಸ್ಥೆನ ಇಲ್ಲ. ಗಣ್ಯರು ಸಮಾರಂಭ ಉದ್ದೇಶಿಸಿ ಮಾತನಾಡಲು ಸರಿಯಾದ ಮೈಕ್ ಸಹ ವ್ಯವಸ್ಥೆ ಮಾಡದೇ ಅಧಿಕಾರಿಗಳು ಬೇಕಾಬಿಟ್ಟಿ ಆಚರಣೆ ಮಾಡುತ್ತಿದ್ದೀರಿ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿ ಸಮಾರಂಭದಿಂದ ಹೊರ ಹೋಗಲು ಮುಂದಾದರು.

ತಹಸೀಲ್ದಾರ್‌ ಡಾ.ಮಲಪ್ಪ ಯರಗೋಳ ಮನವಿ ಮಾಡಿದರು. ಸಮಾರಂಭದಿಂದ ಹೊರ ಹೋಗಲು ಮುಂದಾದರೂ ಕೊನೆಗೂ ವೇದಿಕೆಯ ಮೇಲಿದ್ದ ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ನೆರೆದ ಜನರನ್ನು ಸಮದಾನಪಡಿಸಿದರು ಅಷ್ಟೋತ್ತಿಗೆ ಮೈಕ್ ಕೂಡಾ ಆರಂಭವಾಯಿತು. ತಾಲೂಕ ಆಡಳಿತದ ನಿರ್ಲಕ್ಷ್ಯ ದೋರಣೆಗೆ ಜನರು ತೀವ್ರ ಬೇಸರ ವ್ಯಕ್ತಪಡಿಸಿದರು.

ನಂತರ ನಡೆದ ಕಾರ್ಯಕ್ರಮವನ್ನು ಎಂಎಲ್ಸಿ ಶರಣಗೌಡ ಬಯ್ಯಾಪುರ ಉದ್ಘಾಟಿಸಿದರು. ತಹಸೀಲ್ದಾರ್‌ ಡಾ.ಮಲ್ಲಪ್ಪ ಯರಗೋಳ, ಇಓ ಅಮರೇಶ, ಸಿಪಿಐ ಪುಂಡಲೀಕ ಪಟಾತರ್, ವೀರಶೈವ ಸಮಾಜದ ಅಧ್ಯಕ್ಷ ಶರಣಪ್ಪ ಮೇಟಿ, ಸಿ.ಶರಣಪ್ಪ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಬಸಣ್ಣ ಮೇಟಿ, ಟಿಎಪಿಎಂಸಿ ಅಧ್ಯಕ್ಷ ಶಶಿಧರ ಪಾಟೀಲ್ ಆಶಿಹಾಳ ಸೇರಿದಂತೆ ಇದ್ದರು.