ಸ್ಥಳೀಯ ಗುತ್ತಿಗೆದಾರರ ಕಡೆಗಣನೆಗೆ ಆಕ್ಷೇಪ

| Published : Feb 28 2025, 12:48 AM IST

ಸಾರಾಂಶ

ಕೆಜಿಎಫ್ ಜನರು ಪ್ರತಿ ಕೆಲಸಕ್ಕೂ ಗೋವಿಂದೇಗೌಡರ ಬಳಿಯೇ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗೋವಿಂದೇ ಗೌಡರು ಶಾಸಕಿ ರೂಪಕಲಾಶಶಿಧರ್‌ ಅವರು ನೇಮಿಸಿರುವ ಮಧ್ಯವರ್ತಿಯೇ ಎಂಬ ಪ್ರಶ್ನೆಗೆ ಶಾಸಕರೇ ಉತ್ತರ ನೀಡಬೇಕು. ಟೆಂಡರ್ ಗುತ್ತಿಗೆಯನ್ನು ಕೋಲಾರ ಮೂಲದವರಿಗೆ ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ ಕೆಜಿಎಫ್ ತಾಲೂಕಿನಲ್ಲಿ ಯಾವುದೇ ಸರ್ಕಾರಿ ಕೆಲಸ ಮಾಡಿಸಲು ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರ ಮನೆಗೆ ಅಲೆದಾಡಬೇಕಾಗಿದೆ. ಗೋವಿಂದೇ ಗೌಡರು ಶಾಸಕರ ಮಧ್ಯವರ್ತಿಯೇ ಎಂದು ಸಮಾಜ ಸೇವಕ ಮೋಹನ್‌ ಕೃಷ್ಣ ಪ್ರಶ್ನಿಸಿದ್ದಾರೆ. ನಗರದ ಮೊಯ್ದಿ ಮಹಲ್‌ನಲ್ಲಿ ಹಮ್ಮಿಕೊಂಡಿದ್ದ ಸೇವ್ ಕೆಜಿಎಫ್ ಸಭೆಯಲ್ಲಿ ಮಾತನಾಡಿ, ಕೆಜಿಎಫ್ ಜನರು ಪ್ರತಿ ಕೆಲಸಕ್ಕೂ ಗೋವಿಂದೇಗೌಡರ ಬಳಿಯೇ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗೋವಿಂದೇ ಗೌಡರು ಶಾಸಕಿ ರೂಪಕಲಾಶಶಿಧರ್‌ ಅವರು ನೇಮಿಸಿರುವ ಮಧ್ಯವರ್ತಿಯೇ ಎಂಬ ಪ್ರಶ್ನೆಗೆ ಶಾಸಕರೇ ಉತ್ತರ ನೀಡಬೇಕು ಎಂದರು. ಸ್ಥಳೀಯ ಗುತ್ತಿಗೆದಾರರ ಕಡೆಗಣನೆಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಗುತ್ತಿಗೆ ಕೆಲಕ್ಕೆ ಗೋವಿಂದೇಗೌಡರ ಅಪ್ತರನ್ನು ನೇಮಿಸಲಾಗಿದೆ. ನಗರಸಭೆಗೆ ಕೋಟ್ಯತರ ರುಪಾಯಿ ಅನುದಾನ ಬರಲಿದ್ದು, ಎಲ್ಲಾ ಅನುದಾನದ ಟೆಂಡರ್ ಗುತ್ತಿಗೆಯನ್ನು ಕೋಲಾರ ಮೂಲದವರಿಗೆ ಗೋವಿಂದೇ ಗೌಡರು ನೀಡಿದ್ದಾರೆ ಎಂದು ಆರೋಪಿಸಿದರು.

ಕ್ಷೇತ್ರ ಶಾಸಕರಿಗೆ ಪಿಕ್‌ನಿಕ್ ಸ್ಥಳ

ಶಾಸಕಿ ರೂಪಕಲಾಶಶಿಧರ್ ಹಾಗೂ ತಾಲೂಕು ಆಡಳಿತ ನಡೆಸುವ ಅಧಿಕಾರಿಗಳು ಸೇರಿಂದತೆ ಎಲ್ಲರೂ ಬೆಂಗಳೂರಿನಿಂದ ಕೆಜಿಎಫ್‌ಗೆ ಬೆಳಿಗ್ಗೆ ೧೧ ಗಂಟೆಗೆ ಪಿಕ್‌ನಿಕ್ ಗೆ ಬಂದು ಹೋಗುವ ಹಾಗೇ ಬಂದು ಸಂಜೆ ೪ ಗಂಟೆಗೆ ಕ್ಷೇತ್ರವನ್ನು ಖಾಲಿ ಮಾಡುತ್ತಾರೆ, ಶಾಸಕರನ್ನು ಹುಡಕಬೇಕಾದರೆ ವಾರಕ್ಕೆ ಎರಡು ಸಲ ವಿವೇಕನಗರದಲ್ಲಿ ಹೋಗಿ ನೋಡಬೇಕಾದತಂಹ ಪರಿಸ್ಥತಿ ಕ್ಷೇತ್ರದಲ್ಲಿ ಇದೆ ಎಂದರು.ಸಂಘಟನೆಯ ಪದಾಧಿಕಾರಿಗಳು

ಇದೇ ಸಂದರ್ಭದಲ್ಲಿ ಸೇವ್ ಕೆಜಿಎಫ್ ಸಂಘಟನೆಯ ಅಧ್ಯಕ್ಷರಾಗಿ ಜ್ಯೋತಿಬಸು, ಕಾರ್ಯಾಧ್ಯಕ್ಷರಾಗಿ ಮೋಹನ್‌ಕೃಷ್ಣ, ಗೌವರವ ಅಧ್ಯಕ್ಷರಾಗಿ ಶಂಕರ್, ಪಿ,ದಯಾನಂದ್ ಅವರನ್ನು ಅವಿರೋಧವಾಗಿ ಅಯ್ಕೆ ಮಾಡಲಾಯಿತು.