ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಕಿತ್ತೂರ ರಾಣಿ ಚನ್ನಮ್ಮಳ ನಾಟ್ಯ ಮಂದಿರವನ್ನು ಬೇರೆ ಉದ್ದೇಶಕ್ಕೆ ಹಸ್ತಾಂತರಿಸಬಾರದು ಎಂದು ಅಖಂಡ ಕರ್ನಾಟಕ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಕಿತ್ತೂರ ರಾಣಿ ಚನ್ನಮ್ಮಳ ನಾಟ್ಯ ಮಂದಿರವನ್ನು ಬೇರೆ ಉದ್ದೇಶಕ್ಕೆ ಹಸ್ತಾಂತರಿಸಬಾರದು ಎಂದು ಅಖಂಡ ಕರ್ನಾಟಕ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿದರುಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರದ ಕಿತ್ತೂರ ರಾಣಿ ಚನ್ನಮ್ಮ ನಾಟ್ಯ ಮಂದಿರ ಸ್ಥಾಪನೆಗೊಂಡು ಸುಮಾರು ವರ್ಷಗಳು ಗತಿಸಿದೆ. ಇತ್ತೀಚಿನ ದಿನಗಳಲ್ಲಿ ನಾಟ್ಯ ಮಂದಿರ ಶಿಥಿಲಾವಸ್ಥೆಯಲ್ಲಿದ್ದು, ಅದನ್ನು ಸರ್ಕಾರ ಮತ್ತು ಜಿಲ್ಲಾಡಳಿತ ಬೇರೆ ಕಾರಣಕ್ಕೆ ಖಾಸಗಿಗೆ ಹಸ್ತಾಂತರಿಸಬೇಕೆಂಬ ಚರ್ಚೆ ನಡೆದಿದೆ. ಖಾಸಗಿ ನಾಟಕ ಕಂಪನಿಗಳು ಸ್ವಂತ ಜಾಗೆ ಇಲ್ಲದ ಕಾರಣ ಬೇರೆ ಒಡೆತನದ ಬೇರೆ ಜಾಗವನ್ನು ಬಾಡಿಗೆಯನ್ನಾಗಿ ಪಡೆದು ವರ್ಷಾನುಗಟ್ಟಲೇ ರಂಗಕಲೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ಮೊದಲೇ ರಂಗಭೂಮಿ ಕಲಾವಿದರ ಬದುಕು ತುಂಬಾ ಶೋಚನೀಯವಾಗಿದೆ. ಆದ್ದರಿಂದ, ಇಂತವರಿಗೆ ಸರ್ಕಾರ ಆರ್ಥಿಕ ನೆರವು ನೀಡಿ ರಂಗ ಕಲೆಯನ್ನು ಉತ್ತೇಜಿಸಬೇಕು. ಇಲ್ಲವೇ ಈ ಕಿತ್ತೂರ ರಾಣಿ ಚೆನ್ನಮ್ಮ ನಾಟ್ಯ ರಂಗ ಮಂದಿರವನ್ನು ಯಾವುದೇ ಬೇರೆ ಉದ್ದೇಶಕ್ಕೆ ಬಳಸದೇ ನಾಟ್ಯ ರಂಗಮಂದಿರವಾಗಿ ಉಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಜಿ.ಯಂಕಂಚಿ, ಸುರೇಶ ಬಿರಾದಾರ ಮುಂತಾದವರು ಇದ್ದರು.