ಸಾರಾಂಶ
ಬೇಸಿಗೆ ಅಂಗವಾಗಿ ನಗರಸಭೆ ವ್ಯಾಪ್ತಿಯಲ್ಲಿರುವ ನಗರದ ದೊಡ್ಡ ಕೆರೆ ಮತ್ತು ಸಣ್ಣ ಕೆರೆ ಹಾಗೂ ತುರ್ವಿಹಾಳ ಪಟ್ಟಣ ಬಳಿಯಿರುವ 159 ಎಕರೆ ಪ್ರದೇಶದಲ್ಲಿರುವ ಕೆರೆ ಸ್ಥಳಕ್ಕೆ ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷೆ, ಪೌರಾಯುಕ್ತ ಹಾಗೂ ಸದಸ್ಯರು ಖುದ್ದಾಗಿ ಭೇಟಿ ನೀಡಿ ವೀಕ್ಷಿಸಿದರು.
ಸಿಂಧನೂರು: ಬೇಸಿಗೆ ಅಂಗವಾಗಿ ನಗರಸಭೆ ವ್ಯಾಪ್ತಿಯಲ್ಲಿರುವ ನಗರದ ದೊಡ್ಡ ಕೆರೆ ಮತ್ತು ಸಣ್ಣ ಕೆರೆ ಹಾಗೂ ತುರ್ವಿಹಾಳ ಪಟ್ಟಣ ಬಳಿಯಿರುವ 159 ಎಕರೆ ಪ್ರದೇಶದಲ್ಲಿರುವ ಕೆರೆ ಸ್ಥಳಕ್ಕೆ ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷೆ, ಪೌರಾಯುಕ್ತ ಹಾಗೂ ಸದಸ್ಯರು ಖುದ್ದಾಗಿ ಭೇಟಿ ನೀಡಿ ವೀಕ್ಷಿಸಿದರು.
ನಗರಸಭೆ ಅಧ್ಯಕ್ಷೆ ಪ್ರಿಯಾಂಕಾ ರೋಹಿತ್ ಮಾತನಾಡಿ, ತುರ್ವಿಹಾಳ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಸಿಂಧನೂರಿನ ಎರಡೂ ಕೆರೆಗಳು ಸಹ ತುಂಬಿವೆ. ಈಗಾಗಾಲೇ 5 ದಿನಕ್ಕೊಮ್ಮೆ ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದು, ಅವಧಿ ಹೆಚ್ಚಿಸುವ ಕುರಿತು ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಹೀಗಾಗಿ ಸಾರ್ವಜನಿಕರು ನಿಯಮಿತವಾಗಿ ನೀರು ಬಳಕೆ ಮಾಡಬೇಕು. ವಿನಾಃಕಾರಣ ಪೋಲು ಮಾಡಬಾರದು ಎಂದು ಮನವಿ ಮಾಡಿದರು.ಪೌರಾಯುಕ್ತ ಮಂಜುನಾಥ ಗುಂಡೂರ್ ಮಾತನಾಡಿದರು. ಉಪಾಧ್ಯಕ್ಷೆ ಮಂಜುಳಾ ಪ್ರಭುರಾಜ್, ಸದಸ್ಯ ಚಂದ್ರಶೇಖರ ಮೈಲಾರ್, ಸಹಾಯಕ ಕಾರ್ಯಪಾಲಕ ಎಂಜನಿಯರ್ ಮನ್ಸೂರ್ ಅಹ್ಮದ್, ಸಹಾಯಕ ಎಂಜನಿಯರ್ ಪ್ರವೀಣ್, ಕಿರಿಯ ಎಂಜನಿಯರ್ ಶಾಂತಕುಮಾರ್, ಸಿಬ್ಬಂದಿ ಜಾಫರ್ ಇದ್ದರು.