ಸಾರಾಂಶ
ನೆಲಮಂಗಲ: ನಗರದ ಬಸ್ ನಿಲ್ದಾಣ ಬಳಿ ವಾಹನ ದಟ್ಟಣೆ ಹಾಗೂ ಬಸ್‌ನಿಲ್ದಾಣ ಕಾಮಗಾರಿ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬೇಟಿ ನೀಡಿ ಪರಿಶೀಲಿಸಿದರು.
ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹಾಗೂ ಶಾಸಕ ಎನ್.ಶ್ರೀನಿವಾಸ್ ಮೊದಲಿಗೆ ಬಸ್ ನಿಲ್ದಾಣ ಕಾಮಗಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಕಾಮಗಾರಿ ನಡೆಯುತ್ತಿದ್ದ ಸ್ಥಳ ಹಾಗೂ ಪೂರ್ಣಗೊಂಡ ಸ್ಥಳಗಳಿಗೆ ಬೇಟಿ ನೀಡಿ ಪರಿಶೀಲಿಸಿದರು.ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಶಾಸಕರು ಬಹದಿನಗಳಿಂದ ಬಸ್ ನಿಲ್ದಾಣ ಕಾಮಗಾರಿಯಿಂದ ಸಂಚಾರ ದಟ್ಟಣೆ ಉಂಟಾಗುತ್ತಿರುವ ಸಮಸ್ಯೆ ಬಗೆಹರಿಸಬೇಕು ಮನವಿ ಮಾಡಿದ್ದರು. ಈಗಾಗಲೇ ಬಸ್ ನಿಲ್ದಾಣದ ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೆ.1ರಿಂದ ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಳಕೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಸುಸಜ್ಜಿತ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಗುವುದು ಎಂದರು.
ಬೆಂಗಳೂರಿನ ಕಚೇರಿಯಲ್ಲಿ ಶಾಸಕ ಎನ್.ಶ್ರೀನಿವಾಸ್ ಒಳಗೊಂಡು ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಕೆಎಸ್‌ಆರ್‌ಟಿಸಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ಸೆ.1ರಂದು ಸಭೆ ಕರೆದು ನಗರಸಭೆ ಹಾಗೂ ಕೆಎಸ್‌ಆರ್‌ಟಿ ನಡುವೆ ಒಡಂಬಡಿಕೆ ಕುರುತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವಾಗಿ ಸಚಿವರು ತಿಳಿಸಿದರು.ಮಾತಿನ ಚಕಮಕಿ: ಬಸ್ ನಿಲ್ದಾಣ ಕಾಮಗಾರಿ ಕುರಿತು ಶಾಸಕರಿಗೆ ಹಾಗೂ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮಾಹಿತಿ ನೀಡುವಲ್ಲಿ ಸಂಬಂಧಪಟ್ಟ ಇಂಜಿನಿಯರ್ ವಿಫಲರಾಗಿದ್ದಾರೆಂದು ಕೆಲ ಮುಖಂಡರು ಅರೋಪಿಸಿದರು. ಈ ಕುರಿತು ಸಚಿವರ ಬೆಂಬಲಗರು ಅಧಿಕಾರಿಗಳ ಪರ ವಹಿಸಿಕೊಂಡು ಮಾತನಾಡಿದ್ದರಿಂದ, ಸಚಿವರ ಬೆಂಬಲಿಗರು ಹಾಗೂ ಶಾಸಕರ ಬೆಂಬಲಗರೊಂದಿಗೆ ಮಾತಿನ ಚಕಮಕಿ ನಡೆಯಿತು.
ಈ ಸಂದರ್ಭದಲ್ಲಿ ಶಾಸಕ ಎನ್.ಶ್ರೀನಿವಾಸ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್.ರಾಮಚಂದ್ರನ್, ಆಡಳಿತಾಧಿಕಾರಿ ವೇಣುಗೋಪಾಲ್, ಕೆಎಸ್‌ಆರ್‌ಟಿ ವ್ಯವಸ್ಥಾಪಕ ನಿರ್ದೇಶಕ ಎನ್.ರಾಚಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್‌ಗೌಡ, ಸದಸ್ಯ ಬಿ.ಜಿ.ವಾಸು, ನಗರಸಭೆ ಅಧ್ಯಕ್ಷ ಗಣೇಶ್, ಉಪಾಧ್ಯಕ್ಷ ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಪದ್ಮನಾಬ್‌ಪ್ರಸಾದ, ನಿಟಕಪೂರ್ವ ಅಧ್ಯಕ್ಷೆ ಪೂರ್ಣಿಮಾಸುಗ್ಗರಾಜು, ಸದಸ್ಯ ಸಿ.ಪ್ರದೀಪ್, ನರಸಿಂಹಮೂರ್ತಿ, ಲೋಲಾಕ್ಷಿಗಂಗಾಧರ್, ಮುಖಂಡ ಎಂ.ಕೆ.ನಾಗರಾಜು, ಕೆ.ಕೃಷ್ಣಪ್ಪ, ಹೇಮಂತ್‌ಕುಮಾರ್, ರಘುನಾಥ್, ಮುನಿಯಪ್ಪ, ನರಸಿಂಹಮೂರ್ತಿ, ಕೆ.ವಸಂತ್, ಸಿ.ಎಂ.ಗೌಡ, ಚಿಕ್ಕಣ್ಣ, ಜಯರಾಮ್, ಗಂಗಾಧರ್, ಕೆಂಪರಾಜು, ಗೋವಿಂದರಾಜು, ಮಂಜುನಾಥ್ ಇತರರಿದ್ದರು.