ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ರಸ್ತೆ ಪಕ್ಕ ಒಳಚರಂಡಿ ನಿರ್ಮಾಣಕ್ಕೆ ಒತ್ತುವರಿದಾರರು ಅಡ್ಡಿಪಡಿಸಿದ ಘಟನೆ ಪಟ್ಟಣದ ಮಂದಗೆರೆಯಲ್ಲಿ ನಡೆದಿದೆ.ಗ್ರಾಮದ ರಸ್ತೆ ಹಲವು ವರ್ಷದಿಂದ ಗುಂಡಿ ಬಿದ್ದು ವಾಹನ ಸವಾರರು, ಪಾದಚಾರಿಗಳಿಗೆ ಓಡಾಟಕ್ಕೆತೀವ್ರ ಸಂಕಷ್ಟವಾಗಿ ಸಾಕಷ್ಟು ಪ್ರತಿಭಟನೆ, ಮನವಿ ಮಾಡಿಕೊಂಡಿದ್ದರು. ತಾತ್ಕಾಲಿಕವಾಗಿ ಕಳೆದ ಎರಡು ತಿಂಗಳ ಹಿಂದೆ ಶಾಸಕ ಎಚ್.ಟಿ. ಮಂಜು ರಸ್ತೆ ಡಾಂಬರೀಕರಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.
ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದಿಂದ 2 ಕೋಟಿ ರು.ಗಳ ಪ್ಯಾಕೇಜ್‌ನಲ್ಲಿ ಆರಂಭವಾದ ಕಾಮಗಾರಿಗೆ ರಸ್ತೆ ಹಗೆದು ಜಲ್ಲಿಕಲ್ಲು ಹಾಕಿ ಸಮತಟ್ಟು ಮಾಡಲಾಗಿತ್ತು. ಹಲವರು ಒಳಚರಂಡಿ ನಿರ್ಮಿಸಿ ರಸ್ತೆ ಕಾಮಗಾರಿ ಮಾಡಲು ಒತ್ತಾಯಿಸಿದರು. ಮತ್ತೆ ಕೆಲವರು ಒಳಚರಂಡಿಗೆ ತಮ್ಮ ಮನೆ ಮುಂದೆ ಜಾಗ ಕೊಡವುವುದಿಲ್ಲ ಎಂದು ಅಡ್ಡಿಪಡಿಸಿದರು.ಒಳಚರಂಡಿಗಾಗಿ ಗುರುವಾರ ರಸ್ತೆ ಕಾಮಗಾರಿ ಆರಂಭಿಸಿದಾಗ ಹಲವರು ತಮ್ಮ ಮನೆ, ಅಂಗಡಿ ಮುಂಭಾಗದ ಜಗುಲಿಯನ್ನು ತೆಗೆಯಲು ಬಿಡುವುದಿಲ್ಲ. ಅಂಗಡಿ ಬೀದಿಯಲ್ಲಿ ಚರಂಡಿಯನ್ನೆ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿಲ್ಲವೇ. ಮೊದಲು ಅವುಗಳನ್ನು ತೆರವು ಮಾಡಿಸಿ. ಎಲ್ಲರಿಗೂ ಒಂದೇ ನ್ಯಾಯ ಇರಬೇಕು ಪ್ರತಿರೋಧ ವ್ಯಕ್ತಪಡಿಸಿದರು.
ಅಂತಿಮವಾಗಿ ಪಿಡಿಒ ಚಲುವರಾಜ್, ಗ್ರಾಪಂ ಸದಸ್ಯರು ಸ್ಥಳಕ್ಕೆ ಆಗಮಿಸಿ ಕಾಮಗಾರಿಗೆ ಅಡ್ಡಿಪಡಿಸದಂತೆ ಮನವರಿಕೆ ಮಾಡಿದರು.ಅರ್ಹರಿಂದ ಅರ್ಜಿ ಆಹ್ವಾನಮಂಡ್ಯ: ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕನ್ನಡ ಜಾಣ- ಜಾಣೆಯರ ವೇದಿಕೆ ಬೆಂಗಳೂರು ಸಹಯೋಗದಲ್ಲಿ ಸೆಪ್ಟೆಂಬರ್ ಕೊನೆ ವಾರದಲ್ಲಿ ಹಾಸನ ಜಿಲ್ಲೆಯಲ್ಲಿ ರಾಜ್ಯಮಟ್ಟದ ಮೂರು ದಿನಗಳ ಪಿ ಲಂಕೇಶ್ ಕೃತಿಗಳ ಅಧ್ಯಯನ ಶಿಬಿರವನ್ನು ಆಯೋಜಿಸಲಾಗಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿಯಿರುವ 20 ರಿಂದ 40 ವರ್ಷ ವಯಸ್ಸುಳ್ಳ ಜಿಲ್ಲೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್ 17 ಕೊನೆದಿನ. ಅಭ್ಯರ್ಥಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ http://karnatakasahithyaacademy.org ವೆಬ್ ಸೈಟ್‌ನಿಂದ ಅರ್ಜಿ ನಮೂನೆ ಹಾಗೂ ವಿವರಗಳನ್ನು ಪಡೆದುಕೊಳ್ಳಬಹುದು ಎಂದು ರಿಜಿಸ್ಟಾರ್ ಕರಿಯಪ್ಪ ಎನ್ ತಿಳಿಸಿದ್ದಾರೆ.