ಕರ್ತವ್ಯಕ್ಕೆ ಅಡ್ಡಿ: ಎಂಪಿಎಂಸಿ ಕಾರ್ಯದರ್ಶಿ ಆರೋಪ

| Published : May 22 2024, 12:47 AM IST

ಕರ್ತವ್ಯಕ್ಕೆ ಅಡ್ಡಿ: ಎಂಪಿಎಂಸಿ ಕಾರ್ಯದರ್ಶಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಎ.ಪಿ.ಎಂ.ಸಿ.ಯಲ್ಲಿ ತಾವು ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದನ್ನು ಸಹಿಸಲಾಗದೆ ಕೆಲವು ತರಕಾರಿ ದಲ್ಲಾಳರು ಸತ್ಯಕ್ಕೆ ದೂರವಾದ ಆರೋಪ ಮಾಡುತ್ತಾ ಕಾರ್ಯದರ್ಶಿಯ ಕರ್ತವ್ಯಕ್ಕೆ ಅಡ್ಡಿ ಮಾಡುತ್ತಿರುವ ಆರೋಪ

ಕನ್ನಡಪ್ರಭ ವಾರ್ತೆ ಕೋಲಾರನಗರ ಹೊರವಲಯದ ಎ.ಪಿ.ಎಂ.ಸಿ ಯಾರ್ಡ್‌ನಲ್ಲಿನ ಮಳಿಗೆಯನ್ನು ಅನಧಿಕೃತವಾಗಿ ಪರಭಾರೆ ಮಾಡಿಕೊಡಲು ಸಮ್ಮತಿಸಲಿಲ್ಲ ಎಂಬ ಕಾರಣಕ್ಕೆ ಕೆಲವರು ತಮಗೆ ಬ್ಲಾಕ್ ಮೇಲ್ ಮಾಡುವುದು, ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಅಪಪ್ರಚಾರ ಮಾಡಿ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಎ.ಪಿ.ಎಂ.ಸಿ ಕಾರ್ಯದರ್ಶಿ ವಿಜಯಲಕ್ಷ್ಮೀ ದೂರಿದರು.ನಗರದ ಎ.ಪಿ.ಎಂ.ಸಿ. ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಎ.ಪಿ.ಎಂ.ಸಿ.ಯಲ್ಲಿ ತಾವು ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದನ್ನು ಸಹಿಸಲಾಗದೆ ಕೆಲವು ತರಕಾರಿ ದಲ್ಲಾಳರು ಸತ್ಯಕ್ಕೆ ದೂರವಾದ ಆರೋಪ ಮಾಡುತ್ತಿದ್ದಾರೆ, ಕೆಲವು ಮಂಡಿ ಮಾಲೀಕರಿಗೆ ತಪ್ಪು ಮಾಹಿತಿ ನೀಡಿ ಸಂಘಟಿಸಿಕೊಂಡು ಬಂದು ವಿನಾಕಾರಣ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದರು.ಪರವಾನಗಿ ಪಡೆದ ಮಳಿಗೆ ಪರಬಾರೆ

ಎ.ಪಿ.ಎಂ.ಸಿಯಲ್ಲಿ ತರಕಾರಿ ಮಂಡಿಗೆ ಮಳಿಗೆ ಹಾಗೂ ವ್ಯಾಪಾರ ವಹಿವಾಟುಗಳಿಗೆ ಪರವಾನಗಿ ಪಡೆದು ಮಳಿಗೆಯನ್ನು ಬೇರೆಯವರಿಗೆ ಹೆಚ್ಚಿನ ಬಾಡಿಗೆ ನೀಡುವ ಮೂಲಕ ವಂಚಿಸಲಾಗುತ್ತಿದೆ, ಯಾವುದೇ ಹಳೆಯ ವಿಡಿಯೋ ಒಂದನ್ನು ಇಟ್ಟುಕೊಂಡು ಬೆದರಿಸುತ್ತಿದ್ದಾರೆ, ನಾನು ಯಾವುದೇ ರೀತಿ ಕಾನೂನು ಬಾಹಿರವಾಗಿ ನಡೆದುಕೊಂಡಿಲ್ಲ, ಹಾಗೇನಾದರೂ ಇದ್ದರೆ ಲೋಕಾಯುಕ್ತರಿಗೆ ದೂರು ನೀಡಲಿ ಎಂದರು.

ಜಿ.ಎನ್.ಜಿ ತರಕಾರಿ ದಲ್ಲಾಳ ಸಂಘದವರು ಅನಧಿಕೃತವಾಗಿ ಲೈಸನ್ಸ್ ಪಡೆದ ವ್ಯಾಪಾರ ವಹಿವಾಟು ನಡೆಸಲು ಹೋದವರಿಗೆ ಸಂಘಕ್ಕೆ ೩ ರಿಂದ ೩.೨೦ ಲಕ್ಷ ರೂ ಪಾವತಿಸಿ ಸಂಘದಲ್ಲಿ ನೋಂದಾಯಿಸಿ ನಂತರ ವ್ಯಾಪಾರ ವಹಿವಾಟು ನಡೆಸ ಬೇಕು ಎಂದು ತಾಕೀತು ಮಾಡುತ್ತಿದ್ದಾರೆ, ಈ ವಿಷಯ ತಿಳಿದು ನಾನು ವಿರೋಧಿಸಿದಾಗ ಇದು ನಮ್ಮ ವೈಯುಕ್ತಿಕ ವಿಚಾರ ಇದಕ್ಕೆ ನೀವು ಕೈಹಾಕಬಾರದು ಎಂದು ಬೆದರಿಸಿದ್ದಾರೆ ಎಂದು ಆರೋಪಿಸಿದರು.

ಈ ಸಂಬಂಧವಾಗಿ ತಾವು ಜಿಲ್ಲಾಧಿಕಾರಿ ಹಾಗೂ ಅರಕ್ಷಕ ಉಪ ನಿರೀಕ್ಷಕರಿಗೆ ದೂರು ಸಲ್ಲಿಸಿ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿರುವುದಾಗಿ ತಿಳಿಸಿದರು. ಕಳೆದ ೨೦೨೧-೨೨ನೇ ಸಾಲಿನಲ್ಲಿ ೩.೩೦ ಕೋಟಿ ರೂ ತೆರಿಗೆ ವಸೂಲಾತಿ ನಾನು ಅಧಿಕಾರ ವಹಿಸಿಕೊಂಡ ನಂತರ ೨೦೨೨-೨೩ನೇ ಸಾಲಿನಲ್ಲಿ ೪ ಕೋಟಿ ರೂ. ಹಾಗೂ ೨೦೨೩-೨೪ನೇ ಸಾಲಿನಲ್ಲಿ ೫ ಕೋಟಿ ರೂ.ಗಳಿಗೆ ವಸೂಲಾತಿ ಏರಿಕೆಯಾಗಿದೆ. ನಾನು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಎ.ಪಿ.ಎಂ.ಸಿಯಲ್ಲಿ ನೀರು, ಶೌಚಾಲಯ, ರಸ್ತೆ, ರೈತ ಭವನ ಹಾಗೂ ಕ್ಯಾಂಟೀನ್ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಿರುವುದಾಗಿ ವಿವರಿಸಿದರು.