ಕಾಮನ್‌ ಪುಟಕ್ಕೆಅಕ್ಷರಸ್ಥರೇ ಸಮಾಜಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ

| Published : Apr 04 2025, 12:45 AM IST

ಸಾರಾಂಶ

ಸಮಾಜವನ್ನು ಹಾಳು ಮಾಡುವ ಕೆಲಸ ನಡೆಯುತ್ತಿದ್ದು, ಕಲುಷಿತ ವಾತಾವರಣ ನಿರ್ಮಾಣವಾಗುತ್ತಿದೆ

ಕನ್ನಡಪ್ರಭ ವಾರ್ತೆ ಮೈಸೂರು

ರಾಜಕಾರಣಿಗಳು ಸೇರಿದಂತೆ ಅಕ್ಷರಸ್ಥರೇ ಸಮಾಜಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ತು ಸದಸ್ಯ ಎಚ್. ವಿಶ್ವನಾಥ್ ಕಳವಳ ವ್ಯಕ್ತಪಡಿಸಿದರು.ನಗರದ ಹೈವೇ ವೃತ್ತದ ಬಳಿಯ ಒಸನ್ ಡಿಲೈಟ್ (ಝೈಕಾ) ಹೊಟೇಲ್‌ ನಲ್ಲಿ ರೆಸ್ಪಾನ್ಸಿಬಲ್ ಸಿಟಿಜನ್ಸ್ ವಾಯ್ಸ್ ಗುರುವಾರ ಸಂಜೆ ಆಯೋಜಿಸಿದ್ದ ಸಾಮಾಜಿಕ ಸೌಹಾರ್ದತೆ ಮತ್ತು ಸಹೋದರತ್ವದ ಕಡೆಗೆ- ಈದ್ ಮಿಲನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಮಾಜವನ್ನು ಹಾಳು ಮಾಡುವ ಕೆಲಸ ನಡೆಯುತ್ತಿದ್ದು, ಕಲುಷಿತ ವಾತಾವರಣ ನಿರ್ಮಾಣವಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಮಾಜಕ್ಕೆ ಸೋದರತೆ ಮತ್ತು ಭಾತೃತ್ವದ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ತನ್ವೀರ್ ಸೇಠ್ ಮಾತನಾಡಿ, ಸಮಾಜ ಉಳಿಯಬೇಕಾದರೆ ಎಲ್ಲರ ಮನಸ್ಸಿನಲ್ಲಿನ ಕಲ್ಮಶ ದೂರವಾಗಬೇಕಿದೆ. ನಾವೆಲ್ಲರೂ ಸೇರಿ ಸರ್ವ ಜನಾಂಗದ ಶಾಂತಿಯ ತೋಟವನ್ನು ನಿರ್ಮಿಸುವ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕಿದೆ ಎಂದು ಹೇಳಿದರು. ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಮೈಸೂರಿನಲ್ಲಿ ಸೌಹಾರ್ದತೆಯ ಕೊರತೆ ಇದ್ದರೂ, ಇನ್ನೂ ಮುಂದೆ ಧರ್ಮ ಧರ್ಮವನ್ನು ಎತ್ತು ಕಟ್ಟುವುದು ನಡೆಯುವುದಿಲ್ಲ’ ಎಂದರು.ಮೈಸೂರು ಸರ್ಖಾಜಿ ಉಸ್ಮಾನ್ ಷರೀಫ್, ಅಬ್ದುಲ್ ಸಲಾಂ ಸಾಬ್, ಪ್ರೊ. ಶಬ್ಬೀರ್ ಮುಸ್ತಾಫ, ಶೌಖತ್ ಪಾಷ, ಭಾಸ್ಕರ್, ಕಮಲ್ ಗೋಪಿನಾಥ್, ಸಿ. ಬಸವಲಿಂಗಯ್ಯ, ಸವಿತಾ ಪ. ಮಲ್ಲೇಶ್, ಬಿ.ಎಂ. ಹನೀಫ್, ಮೋಹನ್ ಕುಮಾರ್ ಗೌಡ, ನೆಲೆ ಹಿನ್ನೆಲೆ ಗೋಪಾಲಕೃಷ್ಣ, ಇ. ರತಿರಾವ್, ಬೆಟ್ಟಯ್ಯ ಕೋಟೆ, ಶಂಭುಲಿಂಗ ಸ್ವಾಮಿ, ಎಂ.ಎಫ್. ಖಲೀಂ ಮೊದಲಾದವರು ಇದ್ದರು.