ಸಾರಾಂಶ
ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯ ಹಾಗೂ ತುಮಕೂರಿನ ಇನ್ನೋವೇಷನ್ ಇಂಕ್ಯೂಬೇಶನ್ ಮತ್ತು ಎಂಟರ್‌ಪ್ರಿನರ್‌ಷಿಪ್ ಕೌನ್ಸಿಲ್ ಸಹಯೋಗದೊಂದಿಗೆ ಉದ್ಯಮಶೀಲತೆ ವೃತ್ತಿಯಾಗಿ ಅವಕಾಶಗಳ ಮಹಾ ಸಾಗರ ಎಂಬ ಜಾಗೃತಿ ಕಾರ್ಯಕ್ರಮವನ್ನು 29ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಕೆಐಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಪತರು ವಿದ್ಯಾಸಂಸ್ಥೆಯ ಖಜಾಂಚಿ ಟಿ.ಎಸ್.ಶಿವಪ್ರಸಾದ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯ ಹಾಗೂ ತುಮಕೂರಿನ ಇನ್ನೋವೇಷನ್ ಇಂಕ್ಯೂಬೇಶನ್ ಮತ್ತು ಎಂಟರ್‌ಪ್ರಿನರ್‌ಷಿಪ್ ಕೌನ್ಸಿಲ್ ಸಹಯೋಗದೊಂದಿಗೆ ಉದ್ಯಮಶೀಲತೆ ವೃತ್ತಿಯಾಗಿ ಅವಕಾಶಗಳ ಮಹಾ ಸಾಗರ ಎಂಬ ಜಾಗೃತಿ ಕಾರ್ಯಕ್ರಮವನ್ನು 29ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಕೆಐಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಪತರು ವಿದ್ಯಾಸಂಸ್ಥೆಯ ಖಜಾಂಚಿ ಟಿ.ಎಸ್.ಶಿವಪ್ರಸಾದ್ ತಿಳಿಸಿದರು. ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉದ್ಯಮಶೀಲತೆ ಭವಿಷ್ಯದ ಅವಶ್ಯಕತೆಯಾಗಿದೆ. ಕಲ್ಪತರು ಸಂಸ್ಥೆಯ ಅಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಶಾಲಾ ಕಾಲೇಜುಗಳು ಇದರಲ್ಲಿ ಭಾಗವಹಿಸುತ್ತಿದ್ದು ವಿಷನ್ 2035 ದೀರ್ಘಾವಧಿ ತಂತ್ರಯೋಜನೆಯನ್ನು ಅನುಸರಿಸುತ್ತಿದೆ. ಸ್ಟಾರ್ಟಪ್‌ಗಳು, ಇಂಕ್ಯುಬೇಷನ್ ಕೇಂದ್ರಗಳು, ಸಂಶೋಧನೆ, ಯೋಜನೆಗಳು, ಅನುದಾನಗಳು ಹಾಗೂ ಹೂಡಿಕೆ ಅವಕಾಶಗಳತ್ತ ವಿಶೇಷ ಗಮನ ನೀಡಲಾಗುವುದು. ಇದಕ್ಕಾಗಿ ಕಲ್ಪತರು ಸಂಸ್ಥೆ ಸಹಿ ವಿವಿಧ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ. ಕಲ್ಪತರು ಸಂಸ್ಥೆ ಈಗಾಗಲೇ ತೊಂಬತ್ತು ಲಕ್ಷಗಳ ವೆಚ್ಚದಲ್ಲಿ ಐಡಿಯಾ ಲ್ಯಾಬ್ ಪ್ರಾರಂಭಿಸಿದ್ದು ಮುಂಬರುವ ದಿನಗಳಲ್ಲಿ ಎಐಎಂಎಲ್ ಅಳವಡಿಕೆ, ಇಂಕ್ಯುಬೇಷನ್, ಕ್ವಾಂಟಮ್ ಕಂಪ್ಯೂಟಿಂಗ್, ಡೇಟಾಸೈನ್ಸ್ ಹಾಗೂ ಸೈಬರ್ ಸೆಕ್ಯೂರಿಟಿ ಕೇಂದ್ರಗಳು ಮುಂತಾದ ಭವಿಷ್ಯದ ಯೋಜನೆಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿದೆ. ಇದಕ್ಕೆ ವಿದ್ಯಾರ್ಥಿಗಳು, ಬೋಧಕರಾದಿಯಾಗಿ ಸಾರ್ವಜನಿಕರ ಸಹಕಾರವೂ ಬೇಕು ಎಂದು ತಿಳಿಸಿದರು. ಪ್ರಾಂಶುಪಾಲ ಎಚ್.ಸಿ ಸತೀಷ್‌ಕುಮಾರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಕೇವಲ ಕೆಲಸಕ್ಕೆ ಸೇರುವ ಯೋಚನೆಯ ಬದಲಿಗೆ ಸ್ಟಾರ್ಟಪ್‌ಗಳನ್ನು ಪ್ರಾರಂಭಿಸಿ ಅವರೇ ಹತ್ತಾರು ಜನರಿಗೆ ಕೆಲಸ ಕೊಡುವಂತಾಗಬೇಕು. ಈ ನಿಟ್ಟಿನಲ್ಲಿ ಅವರಿಗೆ ಇರುವ ಅವಕಾಶಗಳು, ಆರ್ಥಿಕ ಕ್ರೋಢೀಕರಣ, ಸ್ಕಿಲ್ ಡೆವೆಲಪ್‌ಮೆಂಟ್ ಮುಂತಾದ ತರಬೇತಿಯನ್ನು ಈ ಕಾರ್ಯಕ್ರಮದಲ್ಲಿ ನೀಡಲಾಗುವುದು. ಇದರಿಂದ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗೆ ವ್ಯಾಪಕ ಪ್ರಯೋಜನ ದೊರಕಲಿದೆ ಎಂದರು. ಕೆವಿಎಸ್ ಕಾರ್ಯದರ್ಶಿ ಉಮಾಶಂಕರ್ ಮಾತನಾಡಿ ಆ.೨೯ರಂದು ಕೆಐಟಿ ಸಭಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ವೆಂಕಟೇಶ್ವರಲು, ಕಾರ‍್ಪೋರಾಡ್ ಇಂಡಸ್ಟ್ರೀಸ್ ಅಧ್ಯಕ್ಷ ಡಾ. ಎಚ್.ಜಿ.ಚಂದ್ರಶೇಖರ್ ಹಾಗೂ ಇನ್ನೋವೇಷನ್ ಇಂಕ್ಯೂಬೇಶನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸತೀಶ್ ಭವಾನ್ಕರ್ ಭಾಗವಹಿಸಲಿದ್ದಾರೆ ಎಂದರುಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜ್, ನಿಕಟಪೂರ್ವ ಪ್ರಾಂಶುಪಾಲ ಗುರುಮೂರ್ತಿ, ಪಲ್ಲಾಗಟ್ಟಿ ಅಡವಪ್ಪ ಕಾಲೇಜಿನ ಸತೀಷ್‌ಚಂದ್ರ ಮತ್ತಿತರರಿದ್ದರು.ಕೋಟ್...ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಬಿ.ಎಸ್.ಉಮೇಶ್‌ರವರ ಪುತ್ರ ಪ್ರಣವ್ ಬೆಳ್ಳೂರ ಭಾರತೀಯ ವಾಯು ಸೇನೆಯಲ್ಲಿ ಕೆಲಸಮಾಡುತ್ತಿದ್ದು ಇತ್ತೀಚೆಗೆ ನಡೆದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಶೌರ್ಯ ಪ್ರದರ್ಶಿಸಿದ್ದಕ್ಕಾಗಿ ರಾಷ್ಟ್ರಪತಿಗಳ ಶೌರ್ಯಪದಕಕ್ಕೆ ಭಾಜನರಾಗಿರುವುದಕ್ಕೆ ಕಲ್ಪತರು ವಿದ್ಯಾಸಂಸ್ಥೆಯ ಪರವಾಗಿ ಪ್ರಣವ್ ಬೆಳ್ಳೂರ ಹಾಗೂ ಅವರ ತಂದೆ-ತಾಯಿಗೆ ಅಭಿನಂದನೆ ಸಲ್ಲಿಸುತ್ತೇವೆ.
-ಸಂಗಮೇಶ್ ಕಾರ್ಯದರ್ಶಿ ಕಲ್ಪತರು ಸಂಸ್ಥೆ