ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸಾಹಿತ್ಯಕ್ಕೆ ಬೇರು ಒದಗಿಸಿರುವ ಈ ಸಮಾಜವು ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಹಾಗೂ ಸಾಮಾಜಿಕವಾಗಿ ಬೆಳೆಯಲು ಪೂರಕವಾದ ಕಾರ್ಯಕ್ರಮವನ್ನು ಸರ್ಕಾರ ರೂಪಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.ಒಡಲು ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ದುಂಬಿದಾಸರ ಕ್ಷೇಮಾಭಿವೃದ್ಧಿ ಸಂಘವು ಕುಪ್ಪೆ ನಾಗರಾಜ ಅವರ ''''''''ಅಲೆಮಾರಿಯ ಅಂತರಂಗ'''''''' ಇಂಗ್ಲೀಷ್ಅನುವಾದ ಏಕತಾರಿ'' ಕೃತಿಯನ್ನು ಭಾನುವಾರ ಕಿರುರಂಗಮಂದಿರದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅಲೆಮಾರಿಗಳಲ್ಲಿ ವಿವಿಧ ಕಾರಣಕ್ಕೆ ಅನೇಕ ಗುಂಪುಗಳಿವೆ. ಸರ್ಕಾರದಿಂದ ಸೂಕ್ತವಾಗಿ ಗುರುತಿಸುವ ಕೆಲಸ ಮಾಡಲಾಗುವುದು. ಸರ್ಕಾರವು 38 ಕೋಟಿ ರೂ. ಅಲೆಮಾರಿ ನಿಗಮಕ್ಕೆ ಮೀಸಲಿಟ್ಟಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಒದಗಿಸಲಿದೆ. ನಮ್ಮ ಬದಕನ್ನು ಅರ್ಥಪೂರ್ಣವಾಗಿ ತಿಳಿಸುವ ಸಮುದಾಯದ ಗಾಯಕರನ್ನು ಗುರುತಿಸಿ, ಗೌರವಿಸುವ ಮೂಲಕ ಪ್ರೋತ್ಸಾಹಿಸಲಾಗುವುದು ಎಂದು ಅವರು ಭರವಸೆ ನೀಡಿದರು.ಆದಿವಾಸಿಗಳು ಭಾರತದ ದೇಶದ ನಿಜವಾದ ಮೂಲನಿವಾಸಿಗಳು. ಇವರೆಲ್ಲರೂ ಪ್ರಕೃತಿ ಆರಾಧಕರು, ಸಿಂಧೂ ನದಿ ಕಣಿವೆಯಲ್ಲಿ ಬೆಟ್ಟ, ಗುಡ್ಡ, ಮರ, ನದಿಯನ್ನು ಪೂಜಿಸುತ್ತಿದ್ದರು. ಸಿಂಧೂ ನದಿ ನಾಗರಿಕತೆಯೇ ಹಿಂದೂ ಎಂದಾಗಿದೆ. ಅವರಲ್ಲಿ ದೈವದ ಆರಾಧನೆ, ಮೂಢನಂಬಿಕೆ, ಗೊಡ್ಡು ಆಚರಣೆ ಇರಲಿಲ್ಲ ಎಂದರು.
ಪ್ರಜಾಪ್ರಭುತ್ವದ ಬೇರು ಇರುವುದು ಮೂಲನಿವಾಸಿಗಳ ಬದುಕಿನಲ್ಲಿ. ಸಾಹಿತ್ಯ ಬೇರು ಇರುವುದು ಜಾನಪದದಲ್ಲಿ. ಜಾನಪದವು ಜನರ ಬದುಕು ಮತ್ತು ಅನುಭವವಾಗಿದೆ. ಸಮಾಜದ ಉದ್ದಾರಕ್ಕೆ, ಉತ್ತಮ ಬದುಕಿಗೆ, ಒಳ್ಳೆಯ ನಾಳೆಗೆ ಜಾನಪದ ಕಲೆ ಸೃಷ್ಟಿಯಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಕರ್ನಾಟಕ ರಾಜ್ಯ ದುಂಬಿದಾಸರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ವಿ. ಗೋಪಾಲಕೃಷ್ಣ, ಒಡಲು ಟ್ರಸ್ಟ್ ಅಧ್ಯಕ್ಷ ಆರ್.ಎಸ್. ದೊಡ್ಡಣ್ಣ, ಪ್ರಧಾನ ಕಾರ್ಯದರ್ಶಿ ಕೆ.ಎನ್. ಶಿವಲಿಂಗಯ್ಯ, ಲೇಖಕ ಕುಪ್ಪೆ ನಾಗರಾಜ, ಸದಾನಂದ್ ಮೊದಲಾದವರು ಇದ್ದರು.