ಕನ್ನಡಪ್ರಭ ವಾರ್ತೆ ಮೈಸೂರು

ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಗರದ ನಾರಾಯಣ ಶಾಸ್ತ್ರೀ ರಸ್ತೆಯ ಸದ್ವಿದ್ಯಾ ಪ್ರೌಢಶಾಲೆ ಶೇ. 100 ರಷ್ಟು ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದೆ.

ಪರೀಕ್ಷೆ ಎದುರಿಸಿದ 322 ವಿದ್ಯಾರ್ಥಿಗಳಲ್ಲಿ 45 ವಿದ್ಯಾರ್ಥಿಗಳು 625ಕ್ಕೆ 600ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. ಉನ್ನತ ಶ್ರೇಣಿಯಲ್ಲಿ 152 ವಿದ್ಯಾರ್ಥಿಗಳು ತೇರ್ಗಡೆಯಾದರೆ, 155 ವಿದ್ಯಾರ್ಥಿಗಳು ಪ್ರಥಮ ದರ್ಜೆ ಮತ್ತು 15 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ವಿ. ವಿಂದ್ಯಾ 625ಕ್ಕೆ 620 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ರುಷಲ್ ಶೆರ್ವಿನ್ ಜೂಡ್ 619, ಎಂ.ಆರ್. ಯುಕ್ತಾ 619, ಅಭಿಜಿತ್ ರಾಜಪುರೋಹಿತ್ 618, ಟಿ.ಎನ್. ಭೂಮಿಕಾ 618, ಎಚ್. ಯಶ 618, ಎಂ. ಶ್ರೇಯಾ 618, ಕೆ.ಎನ್. ವಸಂತ್ 617, ಆರ್. ತನ್ಮಯಿ 616, ಲಲಿತಾ ಚೌಧರಿ 615, ಎಂ. ನಿಸರ್ಗ 614, ಎಚ್.ಪಿ. ಪ್ರನಿಧಿ 614, ಎಂ. ಶಿವಾನಿ 614, ಎಚ್.ಎಂ. ಅನೀಶ್ 613, ಎಸ್. ಚಿನ್ಮಯ್ 613, ನಿಧಿ ಯಾಜಿ 613, ಎಸ್. ಪುಷ್ಕರಣಿ 612, ಬಿ. ಪ್ರೀತಿ 612, ಎ. ಷಣ್ಮುಖ ಪ್ರಿಯಾ 612, ವಿ. ಅಕ್ಷರ 611, ಕೆ.ಎಸ್. ಸಾಹಿತ್ಯ 610, ಮೊಹಮ್ಮದ್ ಹಮ್ಯಾ ಶೈಫ್ 610, ಯುಕ್ತ ಪ್ರಮೋದ್ 610 ಅಂಕ ಪಡೆದಿದ್ದಾರೆ.

ಸದ್ವಿದ್ಯಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ಎಂ.ಕೆ.ಎಸ್. ನರಹರಿ ಬಾಬು, ಕಾರ್ಯದರ್ಶಿ ಎಂ.ಡಿ. ಗೋಪಿನಾಥ್, ಉಪಾಧ್ಯಕ್ಷ ಎಸ್. ಬಾಲಾಜಿ, ಮುಖ್ಯೋಪಾಧ್ಯಾಯ ರಾಮಚಂದ್ರ ಭಟ್, ಆಡಳಿತ ಮಂಡಳಿ ಸದಸ್ಯರಾದ ನಳಿನಿ ಚಂದರ್ ಸಾಧಕ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ, ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.


ವಿಜಯನಗರದ 1ನೇ ಹಂತದ ಸದ್ವಿದ್ಯಾ ಪ್ರೌಢಶಾಲೆ:

ವಿಜಯನಗರದ 1ನೇ ಹಂತದ ಸದ್ವಿದ್ಯಾ ಪ್ರೌಢಶಾಲೆಯು ಪ್ರಸ್ತಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಪಡೆದುಕೊಂಡಿದೆ.

59 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 40 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೆ 19 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿನಿ ಸನ್ನಿಧಿ 625ಕ್ಕೆ 618 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಶರದ್ಧಿ ಐ ಶಾಸ್ತ್ರೀ 617, ಎಸ್. ಸಾನ್ವಿ 616, ಯು.ಜಿ. ವೈಷ್ಣವಿ 616 ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದರೆ ಕೆ.ಎಸ್. ಅಭಯ್ 612 ಅಂಕ ಪಡೆದು ಶಾಲೆಯ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸದ್ವಿದ್ಯಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ಎಂ.ಎಸ್.ಕೆ. ನರಹರಿ ಬಾಬು, ಕಾರ್ಯದರ್ಶಿ ಎಂ.ಡಿ. ಗೋಪಿನಾಥ್, ಉಪಾಧ್ಯಕ್ಷ ಎಸ್. ಬಾಲಾಜಿ, ಮುಖ್ಯೋಪಾಧ್ಯಾಯಿನಿ ಕೆ. ಮಮತಾ, ಸಹ ಕಾರ್ಯದರ್ಶಿ ಫಣೀಶ್, ಆಡಳಿತ ಮಂಡಳಿ ಸದಸ್ಯರಾದ ನಳಿನಿ ಚಂದರ್ ಸಿಹಿ ತಿನಿಸಿ ಅಭಿನಂದಿಸಿದರು.

---

ಕೋಟ್

ಸದ್ವಿದ್ಯಾ ಶಾಲೆಗೆ ಉತ್ತಮ ಫಲಿತಾಂಶ ಬರಲು ಶಿಕ್ಷಕರ ಸತತ ಪ್ರಯತ್ನ ಪ್ರಮುಖ ಕಾರಣ. ನಮ್ಮ ಶಾಲೆಯ ಉತ್ತಮ ಫಲಿತಾಂಶ ಒಂದೇ ವರ್ಷ ಫಲಿತಾಂಶವಲ್ಲ . ಹಲವು ವರ್ಷಗಳ ಪರಿಶ್ರಮವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮೈಕ್ರೋ ಪ್ಲಾನಿಂಗ್ ಅಳವಡಿಕೆ ಸಹಾಯವಾಯಿತು ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಗಮನ ನೀಡಿ ಮಕ್ಕಳಿಗೆ ಅಧ್ಯಯನ ಸಾಮಗ್ರಿ ವಿತರಿಸಿ ತರಬೇತಿ ನೀಡಿದ್ದರಿಂದ ಶಾಲೆಗೆ ಒಳ್ಳೆಯ ಫಲಿತಾಂಶ ಬಂದಿದೆ.

- ಪ್ರೊ. ನರಹರಿ ಬಾಬು, ಅಧ್ಯಕ್ಷರು, ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳು

---

ಈ ವರ್ಷ ಒಳ್ಳೆೆಯ ಫಲಿತಾಂಶ ಬಂದಿದೆ. ಪ್ರಮುಖವಾಗಿ ಶಾಲೆಯ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರತಿ ವರ್ಷವೂ ಸದ್ವಿದ್ಯಾ ಶಾಲೆಗೆ ಉತ್ತಮ ಫಲಿತಾಂಶ ಬರುತ್ತದೆ. ಶಾಲೆಯ ವಿದ್ಯಾಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದಕ್ಕೆ ಆಡಳಿತ ಮಂಡಳಿ ಹೆಚ್ಚು ಶ್ರಮಿಸುತ್ತಿದ್ದು, ಶಾಲೆಯ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಶಾಲೆಗೆ ಒಳ್ಳೆಯ ಹೆಸರು ತಂದಿದ್ದಾರೆ. ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.

- ಗೋಪಿನಾಥ್ ಬಾಬು, ಕಾರ್ಯದರ್ಶಿ, ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳು