ಸಾರಾಂಶ
ನರಸಿಂಹರಾಜಪುರ: ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದವರು ಮೆಣಸೂರು ಸಮೀಪದ ಭದ್ರಾ ಹಿನ್ನೀರಿಗೆ ಶನಿವಾರ ಬಾಗಿನ ಅರ್ಪಿಸಿದರು.
ನರಸಿಂಹರಾಜಪುರ: ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದವರು ಮೆಣಸೂರು ಸಮೀಪದ ಭದ್ರಾ ಹಿನ್ನೀರಿಗೆ ಶನಿವಾರ ಬಾಗಿನ ಅರ್ಪಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಟ್ಟಣ ಪಂಚಾಯಿತಿ ಸದಸ್ಯೆ ಜುಬೇದ ಮಾತನಾಡಿ, ಈ ವರ್ಷ ಉತ್ತಮ ಮಳೆಯಾಗುತ್ತಿದ್ದು ಭದ್ರಾ ತುಂಬಿ ಹರಿಯುತ್ತಿದೆ. ರೈತರಿಗೆ ಈ ವರ್ಷ ನೆಮ್ಮದಿ, ಸಂತೋಷ ತರಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಭದ್ರಾ ಹಿನ್ನೀರಿಗೆ ಬಾಗಿನ ಅರ್ಪಿಸುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಶ್ರೀನಿವಾಸ್, ಮಹಿಳಾ ಘಟಕದ ಸದಸ್ಯರಾದ ಶಾಂತ, ಅನಿತ, ಭಾನುಮತಿ,ಶೈಲಜ, ಲಲಿತಮ್ಮ,ಭವಾನಿ ಇದ್ದರು. ಎಲ್ಲರೂ ಒಟ್ಟಾಗಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.