ತಿಪ್ಪಸಂದ್ರದ ನಾಗಿಣಿ ಕೆರೆ ಬಾಗಿನ ಅರ್ಪಣೆ

| Published : Oct 24 2025, 01:00 AM IST

ಸಾರಾಂಶ

ಮಾಗಡಿ: ತಾಲ್ಲೂಕಿನಲ್ಲಿ ಉತ್ತಮ ಮಳೆ ಆಗುತ್ತಿದ್ದು ತಿಪ್ಪಸಂದ್ರದ ನಾಗಿಣಿಕೆರೆ ಕೋಡಿ ಬಿದ್ದಿದ್ದು ಗ್ರಾಮಸ್ಥರಿಂದ ಕೆರೆಗೆ ಬಾಗಿನ ಅರ್ಪಿಸಲಾಯಿತು.

ಮಾಗಡಿ: ತಾಲ್ಲೂಕಿನಲ್ಲಿ ಉತ್ತಮ ಮಳೆ ಆಗುತ್ತಿದ್ದು ತಿಪ್ಪಸಂದ್ರದ ನಾಗಿಣಿಕೆರೆ ಕೋಡಿ ಬಿದ್ದಿದ್ದು ಗ್ರಾಮಸ್ಥರಿಂದ ಕೆರೆಗೆ ಬಾಗಿನ ಅರ್ಪಿಸಲಾಯಿತು.

ರಾಮನಗರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಜಗನ್ನಾಥ ಗೌಡ ಬಾಗಿನ ಅರ್ಪಿಸಿ ಮಾತನಾಡಿ, ವರುಣನ ಕೃಪೆಯಿಂದ ಐತಿಹಾಸಿಕ ತಿಪ್ಪಸಂದ್ರದ ನಾಗಿನ ಕೆರೆ ಕೋಡಿ ಹರಿಯುತ್ತಿದ್ದು ರೈತರಿಗೆ ಅನುಕೂಲವಾಗಲಿದೆ. ಜಾನುವಾರುಗಳಿಗೆ ನೀರಿನ ಸಮಸ್ಯೆ ಬಗೆಹರಿಯಲ್ಲಿದ್ದು ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಹಲವು ದಿನಗಳಿಂದಲೂ ತಾಲೂಕಿನಲ್ಲಿ ಉತ್ತಮ ಮಳೆ ಆಗುತ್ತದೆ ಸಣ್ಣಪುಟ್ಟ ಕೆರೆಗಳಿಗೆ ನೀರಿನ ಅರಿವು ಹೆಚ್ಚಾಗಿದ್ದು ಈ ಬಾರಿ ಮಳೆ ಹೆಚ್ಚಾಗಿರುವುದರಿಂದ ಸ್ವಲ್ಪ ಪ್ರಮಾಣದಲ್ಲಿ ರೈತರಿಗೆ ರಾಗಿ ಬೆಳೆಗೆ ಹೆಚ್ಚು ಮಳೆಯಂತೆ ಕಂಡುಬಂದಿದ್ದು ರೈತರು ಉತ್ತಮ ಫಸಲನ್ನು ಪಡೆಯುವ ನಿರೀಕ್ಷೆಯಲ್ಲಿ ಇದ್ದಾರೆ ವರ್ಷವಿಡಿ ನೀರು ತಾಲ್ಲೂಕಿನ ಎಲ್ಲಾ ಕೆರೆಯಲು ಇರಬೇಕಾದರೆ ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆ ಬರುವುದು ಅವಶ್ಯಕವಾಗಿದ್ದು ಹೇಮಾವತಿ ಮತ್ತು ಎತ್ತಿನಹೊಳೆ ಮೂಲಕ ತಾಲೂಕಿನ ಕೆರೆಗಳನ್ನು ತುಂಬಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಇಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೇಮಾವತಿ ಯೋಜನೆಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ ನಾರಾಯಣ್ ರವರು ಸಾಕಷ್ಟು ಶ್ರಮ ವಹಿಸಿದ್ದರು ಈಗ ಕಾಮಗಾರಿ ಪೂರ್ಣ ಹಂತದಲ್ಲಿ ಇದ್ದು ಕೆರೆಗಳಿಗೆ ಹೇಮಾವತಿ ನೀರು ತುಂಬಿಸುವ ಕೆಲಸ ಆಗಬೇಕು ಎಂದು ಮನವಿ ಮಾಡಿದರು.

ತಿಪ್ಪಸಂದ್ರ ನಾಗಿನಿ ಕೆರೆಯಲ್ಲಿ ಗಂಗಾ ಪೂಜೆ ನೆರವೇರಿಸಿಮ ಬಾಗಿನ ಅರ್ಪಿಸಿ ಗಂಗಾಮತಿಗೆ ಪೂಜೆ ಸಲ್ಲಿಸಿದರು.

ತಾಲೂಕಿನ ರೈತ ಮೋರ್ಚಾ ಅಧ್ಯಕ್ಷ ಹನುಮಂತೇಗೌಡ ಮಾತನಾಡಿ, ನಾಗಿನಿಕೆರೆ ಮತ್ತಷ್ಟು ಅಭಿವೃದ್ಧಿಯಾಗಬೇಕು ಕೆರೆ ಏರಿ ಮೇಲೆ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸುವ ಕೆಲಸವನ್ನು ಸಣ್ಣನೀರಾವರಿ ಇಲಾಖೆ ಮಾಡಬೇಕು ಹಾಗೂ ಕೆರೆಯಿಂದ ರೈತರಿಗೆ ತೊಂದರೆಯಾಗುತ್ತಿದ್ದು, ಕೆರೆ ಹೂಳು ಎತ್ತುವ ಕೆಲಸವನ್ನು ಮಾಡಬೇಕು ಎಂದರು.

ಅರ್ಚಕ ದೀಪಕ್ ಮಾತನಾಡಿ, ಕೆರೆಗಳಿಗೆ ಬಾಗಿನ ನೀಡಿ ಗಂಗಮ್ಮನ ಪೂಜೆ ಮಾಡುವುದರಿಂದ ಮಳೆ, ಬೆಳೆ ಆಗಲಿದೆ ಹಾಗೂ ಮನಸ್ಸಿನಲ್ಲಿಯೂ ಧಾರ್ಮಿಕ ಭಾವನೆ ಇಮ್ಮುಡಿಯಾಲಿದೆ ಎಂದರು.

ಇದೇ ವೇಳೆ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಕುಮಾರಸ್ವಾಮಿ, ತಿಪ್ಪಸಂದ್ರ ಹೋಬಳಿ ಬಿಜೆಪಿ ಅಧ್ಯಕ್ಷ ಚಿಕ್ಕಣ್ಣ, ತಿಪ್ಪಸಂದ್ರ, ಸತೀಶ್, ತಿಮ್ಮೇಗೌಡ, ಸಂಪತ್, ಹೊಸಳಪ್ಪ ನಾಗರಾಜ್, ಹರೀಶ್ ತಿಪ್ಪಸಂದ್ರದ ಗ್ರಾಮಸ್ಥರು ಹಾಗೂ ಬಿಜೆಪಿ ಮುಖಂಡರು ಭಾಗವಹಿಸಿದ್ದರು.