ಸಾರಾಂಶ
ಕನ್ನಡಪ್ರಭ ವಾರ್ತೆ ಮಸ್ಕಿ
ಯಾವುದೇ ಸರ್ಕಾರಗಳು ರೈತರಿಗೆ ಏನೇ ಕೊಟ್ಟರು ಸಾಲದು ಭಗವಂತ ಕೃಪೆಯಿಂದ ಸಕಾಲದಲ್ಲಿ ಮಳೆ ಬಂದು ಉತ್ತಮ ಬೆಳೆ ಬೆಳೆದಾಗ ಮಾತ್ರ ರೈತರಿಗೆ ಹಬ್ಬದಿನ ಇರುತ್ತದೆ ಎಂದು ಖಾದಿ ಗ್ರಾಮದ್ಯೋಗ ನಿಗಮದ ಅಧ್ಯಕ್ಷ, ಶಾಸಕ ಆರ್. ಬಸನಗೌಡ ತುರ್ವಿಹಾಳ ಹೇಳಿದರು.ಸಮೀಪದ ಮಾರಲದಿನ್ನಿ ಜಲಾಶಯಕ್ಕೆ ಶುಕ್ರವಾರ ಬಾಗೀನ ಸಲ್ಲಿಸಿದ ನಂತರ ರೈತರೊಂದಿಗೆ ಸಭೆ ನಡೆಸಿ ಮಾತನಾಡಿ,ನಮ್ಮ ರೈತರು ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆ ಪಡೆದುಕೊಂಡು ಆಯಾ ಭೂಮಿಗಳಿಗೆ ಅನುಸಾರವಾಗಿ ಬೆಳೆಗಳನ್ನು ಬೆಳೆಯಿರಿ ಎಂದು ಸಲಹೆ ನೀಡಿದರು.
ಸಿದ್ದರಾಮಯ್ಯನವರು ಸಿಎಂ ಆದರೆ ಮಳೆ ಬರುವುದಿಲ್ಲ ಎಂದು ಬಿಜೆಪಿಯವರು ಹೇಳಿದ್ದರು. ಆದರೆ ಎರಡು ವರ್ಷಗಳಿಂದ ಸತತವಾಗಿ ಮಳೆಯಾಗಿ ರೈತರು ಖುಷಿಯಾಗಿ ಇದ್ದಾರೆ. ಈಗ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಐದು ಗ್ಯಾರಂಟಿ ಯೋಜನೆ ಗಳನ್ನು ಎಲ್ಲರಿಗೂ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಸರ್ಕಾರ ಮಾಡುತ್ತಿದೆ. ಮಾರಲದಿನ್ನಿ ಜಲಾಶಯದ ಭಾಗದ ರೈತರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಕನಕ ನಾಲಾ ಯೋಜನೆ ಜಾರಿಯಾಗಲಿದೆ. ಎನ್‌ಆರ್‌ಬಿಸಿಯಿಂದ ಕೆರೆ ತುಂಬಿಸುವ ಯೋಜನೆಗಾಗಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದರು. ನಮ್ಮ ಕ್ಷೆತ್ರದ ರೈತರ ಹಿತಕ್ಕಾಗಿ ಯಾವ ತ್ಯಾಗಕ್ಕೂ ನಾವೂ ಸಿದ್ದರಾಗಿದ್ದೆವೆ. ಮಸ್ಕಿ ಕ್ಷೆತ್ರದಲ್ಲಿ ಈ ಹಿಂದೆ ಅಧಿಕಾರ ನಡೆಸಿದವರು ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಿದೇ ಈಗ ಅಭಿವೃದ್ಧಿ ವಿಚಾರ ದಲ್ಲಿ ರಾಜಕೀಯ ಮಾಡಲು ಬರುತ್ತಾರೆ ಎಂದರು.ಕನಕ ನಾಲ ಭರ್ತಿಯಾಗಲು ಇನ್ನೂ ಒಂದು ಅಡಿ ಬಾಕಿ ಇದ, ಅದೂ ಭರ್ತಿ ಆದರೆ ಆ ಭಾಗದ ರೈತರು ಕೂಡ ನೆಮ್ಮದಿಯಾಗಿರಲು ಸಹಕಾರಿಯಾಗುತ್ತದೆ ಎಂದರು.
ಕೃಷಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ರೈತರು ಬೆಳೆ ಬೆಳೆಯಬೇಕು ಕಡಿಮೆ ಬೆಳೆ ಬೆಳೆದರೆ ಸಾಲ ಕಟ್ಟಲು ಆಗದ ರೀತಿಯಲ್ಲಿ ರೈತರು ತೊಂದರೆ ಅನುಭವಸಬೇಕಾಗುತ್ತದೆ. ರೈತರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ನಾನು ಕೂಡ ಕ್ಷೆತ್ರದಲ್ಲಿ ರೈತರಿಗೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ ಎಂದರು.ನಂತರ ತಹಸೀಲ್ದಾರ್ ಮಲ್ಲಪ್ಪ ಯರಗೋಳ ಮಾತನಾಡಿ, ಉತ್ತಮ ಪಸಲು ಬೆಳೆಯಲು ಬೇಕಾದ ಸಿದ್ಧತೆಗಳನ್ನು ರೈತರು ಮಾಡಿಕೊಳ್ಳಿ ಕಾಲುವೆ ಸ್ವಚ್ಛತೆ ಬಗ್ಗೆ ಈಗಾಗಲೇ ನರೇಗಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಸಭೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ರೈತರು, ಮುಖಂಡರು ಇದ್ದರು.ಮಸ್ಕಿ ನಾಲ ಜಲಾಶಯಕ್ಕೂ
ಶಾಸಕ ತುರ್ವಿಹಾಳ ಬಾಗಿನ
ಮಸ್ಕಿ : ಸಮೀಪದ ಮಸ್ಕಿನಾಲ ಜಲಾಶಯಕ್ಕೆ ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್,ಬಸನಗೌಡ ತುರ್ವಿಹಾಳ ಅವರು ಬಾಗೀನ ಅರ್ಪಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಗ್ರಾಮೀಣ ಘಟಕ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಮುಖಂಡರಾದ ಎಚ್. ಬಿ. ಮುರಾರಿ, ನಿರೂಪಾದೆಪ್ಪ ವಕೀಲರು, ಗ್ಯಾರಂಟಿ ಸಮಿತಿ ಅಧ್ಯಕ್ಷ ಮಹಿಬೂಬಸಾಬ್, ಬಲವಂತರಾಯ ವಟಗಲ, ಹನುಮಂತಪ್ಪ ವೆಂಕಟಾಪುರ, ಮಲ್ಲಯ್ಯ ಬಳ್ಳ, ಶಿವಣ್ಣ ನಾಯಕ ವೆಂಕಟಪುರ, ಗ್ರಾಪ ಅಧ್ಯಕ್ಷ ಬೀರಪ್ಪ,ತಹಸೀಲ್ದಾರ್ ಮಲ್ಲಪ್ಪ ಯರಗೋಳ, ನೀರಾವರಿ ಇಲಾಖೆಯ ಗುರುಮೂರ್ತಿ, ದಾವೂದ್, ಸಿಪಿಐ ಬಾಲಚಂದ್ರ ಲಕಮ್, ಪಿಎಸ್ಐ ಮುದ್ದು ರಂಗ ಸ್ವಾಮಿ ಸೇರಿದಂತೆ ರೈತರು ಹಾಗೂ ಕಾರ್ಯಕರ್ತರು ಇದ್ದರು.