ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಡೆದ ರೈತರ ಸಭೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಗೆ ತಾಲೂಕು ಹಂತದ ಪದಾಧಿಕಾರಿಗಳನ್ನು ರೈತ ಸಂಘದ ಹಿರಿಯ ಮುಖಂಡ ಗೌಡೇಗೌಡ ಸಮ್ಮುಖದಲ್ಲಿ ಮಂಗಳವಾರ ಆಯ್ಕೆ ಮಾಡಲಾಯಿತು.ನಿರ್ಗಮಿತ ಅಧ್ಯಕ್ಷ ಶಿವಮಲ್ಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕು ಅಧ್ಯಕ್ಷರಾಗಿ ಮೋಳೆ ನಟೇಶ್, ಗೌರವಾಧ್ಯಕ್ಷರಾಗಿ ಮಸಣಶೆಟ್ಟಿ, ಬೆಂಡ್ರವಾಡಿ ರಾಜಣ್ಣ, ಸರಗೂರು ಅಶೋಕ್ , ಚಿಕ್ಕಿಂದುವಾಡಿ ಪರಮೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಸುರಾಪುರ ಕುಮಾರ, ಜಿನಕನಹಳ್ಳಿ ಸೇರಿ ಹಲವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಖಜಾಂಚಿಯಾಗಿ ತಾಂಡವಮೂರ್ತಿ, ಸಹ ಕಾರ್ಯದರ್ಶಿಗಳಾಗಿ ಸುನೀಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳಲಾಯಿತು.
ಹಸಿರು ಸೇನೆ ಅಧ್ಯಕ್ಷರಾಗಿ ಚಿಕ್ಕಲ್ಲೂರು ಕುಮಾರ್ ಆಯ್ಕೆ:ಇದೇ ವೇಳೆ ಹಸಿರು ಸೇನೆಯ ನೂತನ ಅಧ್ಯಕ್ಷರಾಗಿ ಚಿಕ್ಕಲ್ಲೂರು ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಕೊಳ್ಳೇಗಾಲ ಮೋಳೆ ವೆಂಕಟೇಶ್, ಉಪಾಧ್ಯಕ್ಷರುಗಳಾಗಿ ನಾಗರಾಜು, ಸಿದ್ದರಾಜು, ಸಂಘಟನಾ ಕಾರ್ಯದರ್ಶಿಯಾಗಿ ಸರಗೂರು ಶಿವರಾಜು ಅವರನ್ನು ಆಯ್ಕೆಮಾಡಲಾಯಿತು.
ಇದೇ ಸಂದರ್ಭ ಸಭೆಯಲ್ಲಿ ಮೂಲ ಸಿದ್ಧಾಂತದ ಅಡಿಯಲ್ಲಿ ರೈತ ಸಂಘ ಸಂಘಟನೆ ಮಾಡುವ ಕುರಿತು ಹಾಗೂ ಬಡಗಲಪುರ ನಾಗೇಂದ್ರ ಅವರ ಬಣದಿಂದ ತಾಲೂಕು ಸಂಘದ ಹಲವರು ಹೊರಬರುವ ಕುರಿತು ಸಹಾ ಚರ್ಚಿಸಲಾಯಿತು.