ಅಧಿಕಾರಿಗಳು ಕರ್ತವ್ಯಮುಖಿಗಳಾಗಿ ಕೆಲಸ ಮಾಡಬೇಕು: ರಾಮಲಿಂಗಯ್ಯ

| Published : Dec 02 2024, 01:19 AM IST

ಅಧಿಕಾರಿಗಳು ಕರ್ತವ್ಯಮುಖಿಗಳಾಗಿ ಕೆಲಸ ಮಾಡಬೇಕು: ರಾಮಲಿಂಗಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ವಿಕಲಚೇತನರಿಗೆ 2016 ಕಾಯ್ದೆ ಅನ್ವಯ ಸರ್ಕಾರ 21 ವಿಷಯಗಳ ಬಗ್ಗೆ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಸಮರ್ಪಕವಾಗಿ ಜಾರಿಗೆ ತಂದು ಅರ್ಹರಿಗೆ ತಲುಪಿಸುವ ಕಾರ್ಯದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಾರ್ಯಕ್ರಮ ರೂಪಿಸಬೇಕು.

ಕನ್ನಡ ಪ್ರಭ ವಾರ್ತೆ ಮದ್ದೂರು

ವಿಕಲಚೇತನರ ಕಲ್ಯಾಣಕ್ಕಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸುವಲ್ಲಿ ಅಧಿಕಾರಿಗಳು ಕರ್ತವ್ಯ ಮುಖಿಗಳಾಗಿ ಕೆಲಸ ಮಾಡಬೇಕು ಎಂದು ತಾಪಂ ಇಒ ರಾಮಲಿಂಗಯ್ಯ ಹೇಳಿದರು.

ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿವಿ ಧೋದ್ದೇಶ ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರ ಸಹಯೋಗದಲ್ಲಿ ನಡೆದ ವಿಕಲಚೇತನರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ವಿಕಲಚೇತನರಿಗೆ 2016 ಕಾಯ್ದೆ ಅನ್ವಯ ಸರ್ಕಾರ 21 ವಿಷಯಗಳ ಬಗ್ಗೆ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಸಮರ್ಪಕವಾಗಿ ಜಾರಿಗೆ ತಂದು ಅರ್ಹರಿಗೆ ತಲುಪಿಸುವ ಕಾರ್ಯದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಾರ್ಯಕ್ರಮ ರೂಪಿಸಬೇಕು ಎಂದರು.

ಗ್ರಾಮೀಣ ಭಾಗದ ವಿಕಲಚೇತನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಸಾಕಷ್ಟು ಅರಿವು ಇರುವುದಿಲ್ಲ ಅಂಥವರನ್ನು ಗುರುತಿಸಿ ಯೋಜನೆಗಳ ಸೌಲಭ್ಯ ದೊರಕಿಸಿಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಕಲಚೇತನರ ಸಬಲೀಕರಣ ಇಲಾಖೆ ತಾಲೂಕು ಸಂಯೋಜಕ ಪುಟ್ಟಸ್ವಾಮಿ, ಪುರಸಭೆಯ ಬಿ.ಕೆ. ರಾಜಣ್ಣ, ವಿ.ಆರ್.ವಿನುತಾ, ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷ ಪೂರ್ಣಿಮಾ, ಗೌರವಾಧ್ಯಕ್ಷ ಸಿ.ಕೆ.ಕೃಷ್ಣ, ರಾಮಸ್ವಾಮಿ, ಭಾರತಿ, ಸರ್ವೋದಯ ವಿಕಲಚೇತನರ ಸಂಘದ ಅಧ್ಯಕ್ಷ ಎಸ್.ಸಿ.ರಮೇಶ್ ಮತ್ತಿತರರು ಭಾಗವಹಿಸಿದ್ದರು.

ಬೆಸಗರಹಳ್ಳಿ ಶಾಲೆಯಲ್ಲಿ ಮಕ್ಕಳ ಸಂತೆ

ಮದ್ದೂರು:

ತಾಲೂಕಿನ ಬೆಸಗರಹಳ್ಳಿಯ ಪುಣ್ಯಕೋಟಿ ಎಜುಕೇಶನ್ ಟ್ರಸ್ಟ್ ವತಿಯಿಂದ ಶನಿವಾರ ಶಾಲೆ ಆವರಣದಲ್ಲಿ ಮಕ್ಕಳ ಸಂತೆ ನಡೆಯಿತು.

ಶಾಲೆ ಮಕ್ಕಳೊಂದಿಗೆ ಪೋಷಕರು ಪಾಲ್ಗೊಂಡು ತಮ್ಮ ಮನೆಗಳಲ್ಲಿ ಮಾಡಿದ್ದ ಸಿಹಿ ಮತ್ತು ಖಾರ ತಿಂಡಿ ಹಾಗೂ ತಮ್ಮ ಮನೆಯಂಗಳದಲ್ಲಿ ಬೆಳೆದಿದ್ದ ಹಣ್ಣು, ತರಕಾರಿಗಳನ್ನು ತಂದು ಸಂತೆಯಲ್ಲಿಟ್ಟು ಮಾರಾಟ ಮಾಡಿದರು.

ಜನಪ್ರತಿನಿಧಿಗಳು. ಗ್ರಾಮಸ್ಥರುಗಳು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು. ನಿವೃತ್ತ ಪ್ರಾಂಶುಪಾಲರಾದ ಯದು ಶೈಲಾ ಸಂಪತ್ ಮಕ್ಕಳ ಸಂತೆಗೆ ಚಾಲನೆ ನೀಡಿದರು. ದಿನನಿತ್ಯ ಆಟ ಪಾಠಗಳಲ್ಲಿ ತಲ್ಲಿನರಾಗಬೇಕಾಗಿದ್ದ ಮಕ್ಕಳು ಸಂತೆ ಏರ್ಪಡಿಸಿರುವುದು ವಿಶೇಷವಾಗಿದೆ. ಸಾರ್ವಜನಿಕರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಈ ವೇಳೆ ದಲಿತ ಮುಖಂಡ ಬಿ.ಎಂ.ಸತ್ಯಪ್ಪ, ಶಿಕ್ಷಣ ಸಂಸ್ಥೆ ಮುಖ್ಯಸ್ಥ ಎಂ.ಆರ್.ನೂತನ್ ಹಾಗೂ ಶಿಕ್ಷಕ ವೃಂದದವರು ಇದ್ದರು.