ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ನಾಡಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡುವ ವಿಷಯವನ್ನು ಮುನ್ನೆಲೆಗೆ ತಂದಿರುವುದು ಸಂತಸದ ಸಂಗತಿ.

ಕನ್ನಡಪ್ರಭ ವಾರ್ತೆ ನರಗುಂದ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ನಾಡಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡುವ ವಿಷಯವನ್ನು ಮುನ್ನೆಲೆಗೆ ತಂದಿರುವುದು ಸಂತಸದ ಸಂಗತಿ. ಕೂಡಲೇ ಈ ವಿಷಯವಾಗಿ ಪಕ್ಷಾತೀತವಾಗಿ 224 ಜನ ಶಾಸಕರು, ಸಚಿವರು 28 ಸಂಸದರು ಸೇರಿದಂತೆ ರಾಜ್ಯಸಭಾ ಸದಸ್ಯರು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಬೇಕೆಂದು ಶಾಂತಲಿಂಗ ಶ್ರೀಗಳು ಆಗ್ರಹಿಸಿದರು.

ಭಾನುವಾರ ತಾಲೂಕಿನ ಭೖರನಹಟ್ಟಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತಾಯಿ ಭುವನೇಶ್ವರಿಯ ಕನ್ನಡ ರಥೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕಬ್ಬಿನ ಸಿಹಿ ಸಕ್ಕರೆಯಾಗಿ ಪರಿವರ್ತನೆಯಾಗುತ್ತದೆ. ಆದರೆ ಆ ಸಿಹಿಯನ್ನು ಉತ್ಪಾದಿಸಿದ ರೈತನ ಬದುಕು ಕಹಿಯಾಗಬಾರದು. ರೈತನ ಬೆವರಿಗೆ ನ್ಯಾಯಯುತ ಬೆಲೆ ಸಿಗಬೇಕು. ರೈತನ ಶ್ರಮಕ್ಕೆ ಗೌರವ ಸಿಗಬೇಕು. ರೈತನ ಕುಟುಂಬಕ್ಕೆ ನೆಮ್ಮದಿಯ ಬದುಕು ದೊರೆಯಬೇಕು. ಆ ನಿಟ್ಟಿನಲ್ಲಿ ಕರ್ನಾಟಕ ಹಾಗೂ ಕೇಂದ್ರ ಸರಕಾರ ರೖತರ ಶ್ರಮಕ್ಕೆ ನ್ಯಾಯ ಕಲ್ಪಿಸಬೇಕು ಮನವಿ ಮಾಡಿದರು.

ಪ್ರಮುಖರಾದ ಮಲ್ಲಸರ್ಜ ದೇಸಾಯಿ ಮಾತನಾಡಿ, ಕನ್ನಡವು ಕೇವಲ ಒಂದು ಭಾಷೆಯಲ್ಲ ಅದು ನಮ್ಮ ನಾಡಿನ ಸಂಸ್ಕೃತಿ, ಪರಂಪರೆ, ಇತಿಹಾಸ, ಸ್ವಾಭಿಮಾನ ಮತ್ತು ಅಸ್ಮಿತೆಯ ಪ್ರತೀಕವಾಗಿದೆ ಎಂದರು.

ಕಿತ್ತಲಿಯ ಶ್ರೀ ಸಿದ್ಧರಾಮೇಶ್ವರ ಮಠದ ಅಭಿನವ ಸಿದ್ದರಾಮ ಶ್ರೀಗಳು ಮಾತನಾಡಿ ಕನ್ನಡ ಉಳಿದರೆ ಕನ್ನಡಿಗರು ಉಳಿಯಲು ಸಾಧ್ಯ, ಮನೆಯ ಭಾಷೆ ಕನ್ನಡವಾಗಲಿ, ಮನದ ಭಾಷೆ ಕನ್ನಡವಾಗಲಿ. ಕನ್ನಡ ಕೇವಲ ಸಂವಹನದ ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿಯ ಜೀವಾಳವಾಗಿದೆ ಎಂದರು.

ಬಸು ಪಾಟೀಲ ಮಾತನಾಡಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಕನ್ನಡ ತೇರು ಏಳಿಯುವ ಮೂಲಕ ಸಂಭ್ರಮದಿಂದ ಗ್ರಾಮಸ್ಥರು ಸಂಭ್ರಮದಿಂದ ರಥೋತ್ಸವ ಆಚರಣೆ ಮಾಡಿದರು.

ಈ ಸಂದರ್ಭ ಗ್ರಾಪಂ ಪಿಡಿಒ ಸಾವಿತ್ರಿ ಗಾಯಕವಾಡ, ಪ್ರಕಾಶಗೌಡ ತಿರಕನಗೌಡ್ರ, ಬಿ.ಬಿ. ಐನಾಪೂರ, ಹನಮಂತ ಸಂಗಟಿ, ವ್ಹಿ.ಜಿ. ಐನಾಪೂರ, ಎಂ.ಡಿ. ಸಕ್ಕರಿ, ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಅಧ್ಯಕ್ಷ ಉಮೇಶ ಮರ್ಚಪ್ಪನವರ, ಶಂಕರಗೌಡ ಪಾಟೀಲ, ಬಸಯ್ಯ ಹೊರಗಿನಮಠ, ಶಂಕರಗೌಡ ಶಿರಿಯಪ್ಪಗೌಡ್ರ, ಸೇರಿದಂತೆ ಕನ್ನಡ ಸಾಹಿತ್ಯ ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು.