ವಿಲ್ಸನ್ ಗಾರ್ಡನ್ ನಾಗ ಸ್ಥಳಾಂತರಕ್ಕೆ ಕಾನೂನು ತೊಡಕು

| Published : Aug 27 2024, 01:34 AM IST

ವಿಲ್ಸನ್ ಗಾರ್ಡನ್ ನಾಗ ಸ್ಥಳಾಂತರಕ್ಕೆ ಕಾನೂನು ತೊಡಕು
Share this Article
  • FB
  • TW
  • Linkdin
  • Email

ಸಾರಾಂಶ

ಜೈಲಿನಲ್ಲಿ ದರ್ಶನ್ ಜತೆ ಕಾಣಿಸಿಕೊಂಡಿರುವ ರೌಡಿ ನಾಗರಾಜ ಅಲಿಯಾಸ್ ವಿಲ್ಸನ್ ಗಾರ್ಡನ್‌ ನಾಗನನ್ನು ಬೇರೆ ಜೈಲಿಗೆ ಸ್ಥಳಾಂತರಿಸುವ ಸಂಬಂಧ ಕಾನೂನು ತೊಡಕು ಅಧಿಕಾರಿಗಳಿಗೆ ಎದುರಾಗಿದೆ.

ಬೆಂಗಳೂರು: ಜೈಲಿನಲ್ಲಿ ದರ್ಶನ್ ಜತೆ ಕಾಣಿಸಿಕೊಂಡಿರುವ ರೌಡಿ ನಾಗರಾಜ ಅಲಿಯಾಸ್ ವಿಲ್ಸನ್ ಗಾರ್ಡನ್‌ ನಾಗನನ್ನು ಬೇರೆ ಜೈಲಿಗೆ ಸ್ಥಳಾಂತರಿಸುವ ಸಂಬಂಧ ಕಾನೂನು ತೊಡಕು ಅಧಿಕಾರಿಗಳಿಗೆ ಎದುರಾಗಿದೆ. ಕೆಲ ತಿಂಗಳ ಹಿಂದೆ ಜೈಲಿನಲ್ಲಿ ರೌಡಿಗಳ ನಡುವೆ ಸಂಘರ್ಷ ಸಂಭವಿಸುವ ಸಾಧ್ಯತೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಳ್ಳಾರಿ ಜೈಲಿಗೆ ನಾಗನನ್ನು ಅಧಿಕಾರಿಗಳು ಸ್ಥಳಾಂತರಿಸಿದ್ದರು. ಆದರೆ ತನ್ನ ಸ್ಥಳಾಂತರ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ನಾಗ, ಬೆಂಗಳೂರಿನಲ್ಲಿ ನನ್ನ ಕುಟುಂಬವಿದೆ. ಅಲ್ಲದೆ ನನ್ನ ಮೇಲಿನ ಪ್ರಕರಣಗಳ ವಿಚಾರಣೆಗೆ ಸಹ ತೊಂದರೆಯಾಗುತ್ತಿದೆ ಎಂದು ಮನವಿ ಮಾಡಿದ್ದ. ಈ ಮನವಿ ಮಾನ್ಯ ಮಾಡಿದ್ದ ನ್ಯಾಯಾಲಯವು, ಆತನ ಸ್ಥಳಾಂತರವನ್ನು ರದ್ದುಪಡಿಸಿತ್ತು. ಈ ಹಿನ್ನಲೆಯಲ್ಲಿ ಮತ್ತೆ ನಾಗನನ್ನು ಬೇರೆ ಜೈಲಿಗೆ ಸ್ಥಳಾಂತರಿಸುವ ಸಂಬಂಧ ನ್ಯಾಯಾಲಯ ಅನುಮತಿ ಪಡೆಯಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಈ ಕುರಿತು ಈಗಾಗಲೇ ನಗರ ಪೊಲೀಸ್ ಆಯುಕ್ತರು ಕೂಡ ಕಾರಾಗೃಹ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.