ಅಧಿಕಾರಿಗಳಿಂದ ರಸಗೊಬ್ಬರ ಮಾರಾಟ ಕೇಂದ್ರಗಳ ತಪಾಸಣೆ

| Published : Aug 02 2025, 12:00 AM IST

ಸಾರಾಂಶ

ರಾಮನಗರ: ರಸಗೊಬ್ಬರ ಕಾಳಸಂತೆ ಮಾರಾಟ ತಲೆ ಎತ್ತದಂತೆ ಕ್ರಮಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸೂಚಿಸಿದ ಬೆನ್ನಲ್ಲೆ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಜಿಲ್ಲೆಯ ಹಲವೆಡೆ ರಸಗೊಬ್ಬರ ಮಾರಾಟ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಮನಗರ: ರಸಗೊಬ್ಬರ ಕಾಳಸಂತೆ ಮಾರಾಟ ತಲೆ ಎತ್ತದಂತೆ ಕ್ರಮಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸೂಚಿಸಿದ ಬೆನ್ನಲ್ಲೆ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಜಿಲ್ಲೆಯ ಹಲವೆಡೆ ರಸಗೊಬ್ಬರ ಮಾರಾಟ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಷಿ ಇಲಾಖೆ, ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಜಂಟಿಯಾಗಿ ರಸಗೊಬ್ಬರ ಮಾರಾಟ ಮಳಿಗೆ, ದಾಸ್ತಾನು ಕೇಂದ್ರಗಳಲ್ಲಿ ದಾಸ್ತಾನು, ಬೇಡಿಕೆ, ಪೂರೈಕೆ, ಮಾರಾಟ ಪ್ರಮಾಣ, ದರ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿದರು.

ರಸಗೊಬ್ಬರ ಅಭಾವ ಎದುರಾದ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪೊಲೀಸ್ ಮಾಹಾ ನಿರ್ದೇಶಕರು ಹಾಗೂ ಕೃಷಿ ಅಧಿಕಾರಿಗಳಿಗೆ ಕಾಳಸಂತೆಯ ವಿರುದ್ಧ ಕ್ರಮ ಕೈಗೊಳ್ಳಬೇಕು.

ಜಿಲ್ಲೆ ಮತ್ತು ತಾಲೂಕು, ಹೋಬಳಿ ಎಲ್ಲೂ ರಸಗೊಬ್ಬರಕ್ಕೆ ಕೃತಕ ಅಭಾವ ಸೃಷ್ಟಿಯಾಗಬಾರದು. ಈ ರೀತಿ ಅಭಾವ ಸಷ್ಟಿಸುತ್ತಿರುವವರ ಬಗ್ಗೆ ತೀವ್ರ ನಿಗಾ ವಹಿಸುವಂತೆ ಸೂಚನೆ ನೀಡಿದ್ದರು.

ಅದರಂತೆ ರಾಮನಗರದ ಪ್ರಾಥಮಿಕ ಕಷಿ ಪತ್ತಿನ ಸಂಘ ಮತ್ತು ಫಾರಂ ಖುಷಿ ಅಗ್ರಿಟೆಕ್, ರಾಮನಗರ ಟೌನಿನ ಪೂರ್ಮಿಮಾ ಟ್ರೇಡರ್ಸ್, ಬಿಡದಿ ರೈತ ಸೇವಾ ಸಹಕಾರ ಸಂಘದ ದಾಸ್ತಾನು ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ಅಕಾರಿಗಳು ತಪಾಸಣೆ ನಡೆಸಿದರು.

ಪರಿಶೀಲನೆ ವೇಳೆ ಯೂರಿಯಾ ರಸಗೊಬ್ಬರದ ಭೌತಿಕ ದಾಸ್ತಾನು ಮತ್ತು ಪಿಓಎಸ್ ದಾಸ್ತಾನು ತಾಳೆಯಾಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳಲಾಗಿದೆ. ಯೂರಿಯಾ ಡಿ.ಪಿ.ಎ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರಗಳನ್ನು ಗರಿಷ್ಟ ಮಾರಾಟ ಬೆಲೆಯೊಳಗೆ ಮಾರಾಟ ಮಾಡಿರುವ ಕುರಿತು ಅಧಿಕಾರಿಗಳು ದಾಖಲೆ ಪರಿಶೀಲಿಸಿದ್ದಾರೆ.

ಈ ವೇಳೆ ಕೃಷಿ ಜಂಟಿ ನಿರ್ದೇಶಕಿ ಅಂಬಿಕಾ, ತಹಸೀಲ್ದಾರ್ ತೇಜಸ್ವಿನಿ, ಡಿವೈಎಸ್ಪಿ ಶ್ರೀನಿವಾಸ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

--------------------------------

...ಕೋಟ್ ....

ಜಿಲ್ಲೆಯಲ್ಲಿ ಸದ್ಯಕ್ಕೆ ಎಲ್ಲಿಯೂ ರಸಗೊಬ್ಬರದ ಅಭಾವ ಕಂಡು ಬಂದಿಲ್ಲ. ಅಧಿಕಾರಿಗಳ ತಂಡ ಆಯ್ದ ದಾಸ್ತಾನು, ಮಳಿಗೆಗಳನ್ನು ಪರಿಶೀಲಿಸಿಸಿದ್ದಾರೆ. ಎಂಆರ್ ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು, ಕೃತಕ ಅಭಾವ ಸಷ್ಟಿಸುವ ಪ್ರಕರಣಗಳು ಕಂಡುಬಂದಿಲ್ಲ.

-ಅಂಬಿಕಾ, ಕೃಷಿ ಜಂಟಿ ನಿರ್ದೇಶಕರು.

----------------------------------------

.... ಬಾಕ್ಸ್ ....

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಆಗಸ್ಟ್ 1ಕ್ಕೆ ಲಭ್ಯವಿರುವ ರಸಗೊಬ್ಬರ (ಮೆ.ಟನ್ ಗಳಲ್ಲಿ)

ಗೊಬ್ಬರ ದಾಸ್ತಾನು

ಯೂರಿಯಾ 2537.00

ಕಾಂಪ್ಲೆಕ್ಸ್ 1968.40

ಡಿಎಪಿ 478.00

ಎಂಒಪಿ 135.35

ಎಸ್ಎಸ್ಪಿ 93.65

------------------------------------------

ಒಟ್ಟು 5212.40

------------------------------------------

1ಕೆಆರ್ ಎಂಎನ್ 6.ಜೆಪಿಜಿ

ಕೃಷಿ, ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳ ತಂಡ ರಸಗೊಬ್ಬರ ಮಾರಾಟ ಕೇಂದ್ರಗಳ ತಪಾಸಣೆ ನಡೆಸಿತು.

----------------------------------------