ಸಾರಾಂಶ
ಚೇಳೂರು : ಅಕ್ರಮ ಮದ್ಯ ಮಾರಾಟ ಹಾಗೂ ಎಂಆರ್‌ಪಿಗಿಂತ ಆಧಿಕ ಬೆಲೆಗೆ ಮಾರಾಟ ಮಾಡುತ್ತಿರುವ ಕುರಿತು ‘ಕನ್ನಡಪ್ರಭ’ ಪ್ರಕಟಿಸಿದ ವರದಿಗೆ ಸಂಬಂಧಿಸಿರುವ ಮುಖ್ಯ ಮಂತ್ರಿಯವರ ಕುಂದುಕೊರತೆ ವಿಭಾದ ವಿಶೇಷ ಕರ್ತವ್ಯಾಧಿಕಾರಿ ಕಚೇರಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಅಬಕಾರಿ ಇಲಾಖೆಗೆ ಪತ್ರ ಬರೆದಿದೆ.
ನೂತನ ಚೇಳೂರು ತಾಲೂಕಿನಾದ್ಯಂತ ಬಾರ್ ಹಾಗೂ ವೈನ್ ಶಾಪ್‌ಗಳಲ್ಲಿ ಎಂಆರ್‌ಪಿ ದರಕಿಂತ ಆಧಿಕ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವ ಕುರಿತು ‘ಕನ್ನಡಪ್ರಭ’ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಮುಖ್ಯಮಂತ್ರಿಗಳ ಕುಂದುಕೊರತೆಗಳ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳ ಕಚೇರಿಯಿಂದ ಅಬಕಾರಿ ಇಲಾಖೆಗೆ ಪತ್ರ ಬರೆದು ಮಾಹಿತಿ ಕೇಳಿತ್ತು. ಅಬಕಾರಿ ಇಲಾಖೆಗೆ ಸೂಚನೆ
ಅಬಕಾರಿ ಇಲಾಖೆಗೆ ಮುಖ್ಯ ಮಂತ್ರಿ ಕಚೇರಿಯಿಂದ ಚೇಳೂರು ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ಹಾಗೂ ನಿಗದಿತ ಬೆಲೆಗಿಂತ ಅಧಿಕ ಮಾರಾಟಕ್ಕೆ ಮಾಡುವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು. ಆದರೆ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕರೆ ಸ್ವೀಕರಿಸದ ಅಧಿಕಾರಿಗಳುಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಎಂಆರ್‌ಪಿ ದರಕ್ಕಿಂತ ಅಧಿಕ ಬೆಲೆಗೆ ಮಾರಾಟ ಕುರಿತು ಪ್ರಕಟವಾದ ವರದಿ ಕುರಿತಂತೆ ಅಬಕಾರಿ ಇಲಾಖೆಗೆ ಮುಖ್ಯಮಂತ್ರಿಗಳ ಕುಂದುಕೊರತೆಗಳ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಬರೆದ ಪತ್ರ ಕುರಿತಂತೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಪಡೆಯಲು ಅಬಕಾರಿ ಅಧಿಕಾರಿಗಳಿಗೆ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.ಸುದ್ದಿ ಪ್ರಕಟ ವಾದ ಹಿನ್ನಲೆಯಲ್ಲಿ ಮುಖ್ಯ ಮಂತ್ರಿಯ ಕಚೇರಿಯಿಂದ ಅಬಕಾರಿ ಇಲಾಖೆಗೆ ಪತ್ರ ಬಂದಿದ್ದು,ಈ ಕುರಿತು ಕನ್ನಡಪ್ರಭ ಪ್ರತಿನಿಧಿ ಬಾಗೇಪಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಸತತ ಎರಡು ದಿನಗಳಿಂದ ಸಂಪರ್ಕಿಸುತ್ತಿದ್ದರು, ಕರೆಗೂ ಸ್ಪಂದಿಸದೆ ನಿರ್ಲಕ್ಷ ತೋರುತ್ತಿದ್ದಾರೆ.
)
;Resize=(128,128))
;Resize=(128,128))