ಅಧಿಕಾರಿಗಳ ಭರವಸೆ: ಪೊಲೀಸರ ವಿರುದ್ಧದ ಪ್ರತಿಭಟನೆ ಹಿಂದಕ್ಕೆ

| Published : Nov 13 2025, 01:15 AM IST

ಅಧಿಕಾರಿಗಳ ಭರವಸೆ: ಪೊಲೀಸರ ವಿರುದ್ಧದ ಪ್ರತಿಭಟನೆ ಹಿಂದಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಭಟನಾನಿರತರು ನ. ೧೭ರ ಒಳಗಾಗಿ ಹಲ್ಲೆ ಮಾಡಿದ ಅಧಿಕಾರಿಗಳಾದ ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ಸಿಬ್ಬಂದಿಗಳಾದ ಮೇಘರಾಜ ಮತ್ತು ಮಲ್ಲಿಕಾರ್ಜುನ ವಡ್ಡರ ಅವರ ವಿರುದ್ಧ ಕೂಡಲೆ ಕ್ರಮ ತೆಗೆದುಕೊಳ್ಳಬೇಕು. ಅವರ ಮೇಲೆ ತ್ವರಿತವಾಗಿ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಶಿರಹಟ್ಟಿ: ಆಮಾಯಕ ವ್ಯಕ್ತಿಯನ್ನು ಜೂಜಾಟದ ನೆಪದಲ್ಲಿ ಪೊಲೀಸರು ಅರೆಬೆತ್ತಲೆ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಘಟನೆಗೆ ಸಂಬಂಧಿಸಿದಂತೆ ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ಪೊಲೀಸರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಬುಧವಾರ ಎರಡನೇ ದಿನವೂ ಸಂಜೆಯವರೆಗೂ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್‌ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಕೈಬಿಟ್ಟರು.ಪ್ರತಿಭಟನಾನಿರತರು ನ. ೧೭ರ ಒಳಗಾಗಿ ಹಲ್ಲೆ ಮಾಡಿದ ಅಧಿಕಾರಿಗಳಾದ ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ಸಿಬ್ಬಂದಿಗಳಾದ ಮೇಘರಾಜ ಮತ್ತು ಮಲ್ಲಿಕಾರ್ಜುನ ವಡ್ಡರ ಅವರ ವಿರುದ್ಧ ಕೂಡಲೆ ಕ್ರಮ ತೆಗೆದುಕೊಳ್ಳಬೇಕು. ಅವರ ಮೇಲೆ ತ್ವರಿತವಾಗಿ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಮೂರು ದಿನಗಳ ವರೆಗೆ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು. ಒಂದು ವೇಳೆ ಪ್ರಕರಣದಲ್ಲಿ ನಿಷ್ಕಾಳಜಿ ವಹಿಸಿದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಎಸ್‌ಪಿ ಹೇಳಿಕೆ: ಮಂಗಳವಾರ ತಡರಾತ್ರಿ ಶಿರಹಟ್ಟಿಗೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಅವರು ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ವಿಚಾರಿಸಿದರು. ಎಫ್‌ಐಆರ್ ಅನುಸಾರ ತನಿಖೆ ಕೈಗೊಂಡು ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಈ ವೇಳೆ ಗದಗ ಉಪವಿಭಾಗದ ಡಿಎಸ್‌ಪಿ ಮುರ್ತುಜಾ ಖಾದ್ರಿ, ಸಿಪಿಐ ಭಿ.ವಿ. ನ್ಯಾಮಗೌಡ ಹಾಗೂ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು. ನಾಗರಾಜ ಲಕ್ಕುಂಡಿ, ಶಂಕರ ಮರಾಠೆ, ಫಕ್ಕಿರೇಶ ರಟ್ಟಿಹಳ್ಳಿ, ಜಾನು ಲಮಾಣಿ, ತಿಮ್ಮರಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ರಮೇಶ ಲಮಾಣಿ, ಗಂಗಾಧರ ಮೆಣಶಿನಕಾಯಿ, ಪುಂಡಲೀಕ ಲಮಾಣಿ, ಅಶೋಕ ಶಿರಹಟ್ಟಿ, ಬಿ.ಡಿ. ಪಲ್ಲೇದ, ನಂದಾ ಪಲ್ಲೇದ, ಶಿವು ಲಮಾಣಿ, ಕುಮಾರಸ್ವಾಮಿ ಹಿರೇಮಠ, ಸೋಮರಡ್ಡಿ ಲಮಾಣಿ, ವಿಠ್ಠಲ ಬಿಡವೆ, ಸಂತೋಷ ತೋಡೆಕಾರ, ತಿಪ್ಪಣ್ಣ ಲಮಾಣಿ ಮುಂತಾದವರು ಇದ್ದರು.ಮನವಿ ಸ್ವೀಕರಿಸಿದ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಅವರು ಕೂಡಲೆ ಮನವಿಯ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರು.