ತಾಲೂಕಿನ ಗೌಡೇಟಿ ಗ್ರಾಮದಲ್ಲಿನ ಅಶುಚಿತ್ವದ ಕುರಿತು ಕನ್ನಡಪ್ರಭದಲ್ಲಿ ವರದಿ ಪ್ರಕಟವಾದ ಬೆನ್ನೆಲ್ಲೇ ತಾಪಂ ಇಒ ಮಧುಸೂದನ್ ಹಾಗೂ ಸಹಾಯಕ ಅಧಿಕಾರಿ ಮಾರುತಿ ಪ್ರಸಾದ್ ಗ್ರಾಮಕ್ಕೆ ಭೇಟಿ ನೀಡಿ ಅಭಿವೃದ್ಧಿ ಕುರಿತು ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಪಾವಗಡ
ತಾಲೂಕಿನ ಗೌಡೇಟಿ ಗ್ರಾಮದಲ್ಲಿನ ಅಶುಚಿತ್ವದ ಕುರಿತು ಕನ್ನಡಪ್ರಭದಲ್ಲಿ ವರದಿ ಪ್ರಕಟವಾದ ಬೆನ್ನೆಲ್ಲೇ ತಾಪಂ ಇಒ ಮಧುಸೂದನ್ ಹಾಗೂ ಸಹಾಯಕ ಅಧಿಕಾರಿ ಮಾರುತಿ ಪ್ರಸಾದ್ ಗ್ರಾಮಕ್ಕೆ ಭೇಟಿ ನೀಡಿ ಅಭಿವೃದ್ಧಿ ಕುರಿತು ಪರಿಶೀಲನೆ ನಡೆಸಿದರು. ಗ್ರಾಪಂ ಪಿಡಿಒ ಚಿಕ್ಕಣ್ಣ ಅವರಿಂದ ಮಾಹಿತಿ ಪಡೆದರು. ನರೇಗಾ ಪ್ರಗತಿ ಕುರಿತು ವಿವರ ಪಡೆದು ಕೂಲಿಕಾರರಿಗೆ ಕೆಲಸ ನೀಡುವಂತೆ ಗ್ರಾಪಂ ಪಿಡಿಒಗೆ ಸೂಚಿಸಿದರು.ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯ ದ ಪರಿಣಾಮ ಗ್ರಾಮದ ಪ್ರಗತಿ ಮಾರೀಚೆಕೆಯಾಗಿತ್ತು. ನರೇಗಾದಲ್ಲಿ ವ್ಯಾಪಕ ಭ್ರಷ್ಟಾಚಾರವೆಸಗಿ ಯೋಜನೆ ಹೆಸರಿನಲ್ಲಿ ಲಕ್ಷಾಂತರ ರು ಅವ್ಯವಹಾರ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ನರೇಗಾ ಅವ್ಯವಹಾರ, ಚರಂಡಿಗಳ ಅವ್ಯವಸ್ಥೆ, ಗ್ರಾಮ ನೈರ್ಮಲ್ಯ ವಿಫಲ ಸೇರಿದಂತೆ ಅಭಿವೃದ್ಧಿ ಕುಂಠಿತವಾಗಿರುವ ಬಗ್ಗೆ ಗ್ರಾಮದ ಹಲವು ಮುಖಂಡರು ಅಳಲು ತೋಡಿಕೊಂಡಿದ್ದ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಿಸಿ ಜ.15 ರಂದು ಗೌಡೇಟಿ ಗ್ರಾಮ ಅಭಿವೃದ್ಧಿ ಕುಂಠಿತ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು.