ಕನ್ನಡಪ್ರಭ ವಾರ್ತೆ ಗುರುಮಿಠಕಲ್
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಪ್ರತಿ ಸೋಮವಾರ ನಡೆಯುವ ಧನಗಳ ಸಂತೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ರೈತರು ಮತ್ತು ಜಾನುವಾರು ತೀವ್ರ ಸಂಕಷ್ಟ ಅನುಭವಿಸುತ್ತಿರುವ ಕುರಿತು ಜುಲೈ 14 ವರದಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಪುರಸಭೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸ್ವಚ್ಚತೆಗೆ ಮುಂದಾಗಿದ್ದಾರೆ.ಸಂತೆ ಆವರಣ ಅವ್ಯವಸ್ಥೆಯಿಂದ ಕೂಡಿದ್ದು, ಸ್ವಚ್ಛತೆಯ ಕೊರತೆಯಿಂದ ಕುಡಿಯುವ ನೀರಿನ ಅಭಾವ ಹಾಗೂ ನಿರ್ವಹಣೆಯ ಲೋಪದಿಂದ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ರೈತರು ಇದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆರೋಪಿಸಿದ ಬೆನ್ನಲ್ಲೇ, ಧನಗಳ ಸಂತೆ ಸ್ಥಳಕ್ಕೆ ಅಧಿಕಾರಿಗಳ ದಂಡು ಭೇಟಿ ನೀಡಿ ಪರಿಶೀಲಿಸಿ ನಂತರ ಮಾತನಾಡಿದ ಪುರಸಭೆ ಮುಖ್ಯಅಧಿಕಾರಿ ಶರಣಪ್ಪ ಸ್ಥಳದಲ್ಲಿದ ಅಧಿಕಾರಿ ಸಿಬ್ಬಂದಿಗಳಿಗೆ ಜೆಸಿಬಿ ಮತ್ತು ಟ್ರಾಕ್ಟರ್ ನಿಂದ ಕಾರ್ಮಿಕರ ಕರೆಸಿ ಸ್ಥಳದಲ್ಲೇ ಸ್ವಚ್ಛತೆ ಮಾಡಲು ಮುಂದಾದರು ನಂತರ ಬ್ಲಿಚಿಂಗ್ ಪೌಡರ್ ಸಿಂಪಡಿಸಿ ಎಂದು ಸ್ಥಳದಲ್ಲಿದ ಅಧಿಕಾರಿ ಸಿಬ್ಬಂದಿಗೆ ಸೂಚನೆ ನೀಡಿದರು.
ನಂತರ ಮಾತನಾಡಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಪ್ರತಿ ಸೋಮವಾರ ನಡೆವ ಧನಗಳ ಸಂತೆಯಲ್ಲಿ ಮೂಲಸೌಲಭ್ಯ ಸ್ಚಚ್ಛತೆ ಕುಡಿವ ನೀರಿನ ಪಾಚುಗಟ್ಟಿದ ನೀರಿನಿಂದ ಧನಕರಗಳಿಗೋ ರೋಗ ರುಜಿನ ಬರುತ್ತವೆಂದು ಹೋರಾಟದ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಪುರಸಭೆ ಮತ್ತು ಕೃಷಿ ಉತ್ಪನ್ನ ಅಧಿಕಾರಿಗಳು ಜಂಟಿಯಾಗಿ ಧನಗಳ ಸಂತೆ ಸಪೂರ್ಣ ಸ್ವಚ್ಛತೆ ಮಾಡಲು ಮುಂದಾಗಿರುವುದು ನನ್ನ ಹೋರಾಟಕ್ಕೆ ತಕ್ಷಣ ಸ್ಪಂದಿಸಿದ ಎಲ್ಲಾ ಅಧಿಕಾರಿ ಸಿಬ್ಬಂದಿಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರು ಧನ್ಯವಾದ ತಿಳಿಸಿದ್ದಾರೆ.ಇದೇ ಸಂಧರ್ಭದಲ್ಲಿ ಪುರಸಭೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಾದ ಅಶೋಕ, ರಾಮುಲು, ಜಗದೀಶ, ಹಾಗೂ ವಿನೋದ, ಡಿಸಿ ಕಾಮಿನಿ ,ಪವನ, ಮಲ್ಲೇಶಿ ರೈತರು ಸೇರಿದಂತೆ ಪೌರಕಾರ್ಮಿಕರು ಮತ್ತು ಕೂಲಿ ಕಾರ್ಮಿಕರು ಇದ್ದರು.
ಸಂತೆ ದಿನದಂದು ಪಶುವೈದ್ಯರ, ಪೊಲೀಸ್‌ರ ವ್ಯವಸ್ಥೆ ಜೊತೆಗೆ ಬಾಂಡ ಕಲ್ಲುಗಳು ಸಾಲಾಗಿ ನೆಡೆಸಬೇಕು, ರ‍್ಯಾಂಪ್ ನಿರ್ಮಾಣ, ವಿದ್ಯುತ್ ದೀಪ, ಸಿಸಿ ಕ್ಯಾಮೆರಾ, ಮತ್ತು ಹೆಚ್ಚಿನ ಗಿಡಗಳನ್ನು ನೆಡುವುದು, ಲಾರಿಗಳಿಗೆ ಪ್ರತ್ಯೇಕ ಸ್ಥಳದಲ್ಲಿ ನಾಮಫಲಕ ಅಳವಡಿಸಿ, ಅಲ್ಲೇ ನಿಲ್ಲುಗಡೆ ಸೂಚನೆ ನೀಡಬೇಕಾಗಿದೆ ಅಂದಾಗ ಮಾತ್ರ ಮಾರುಕಟ್ಟೆ ಪ್ರಾಂಗಣದಲ್ಲಿ ಶಿಸ್ತು ಬದ್ಧ ಮಾರುಕಟ್ಟೆ ಎಂದು ಹೆಸರು ಬರುಲು ಸಾಧ್ಯವಾಗುತ್ತದೆ.
- ಉಮೇಶ್ ಕೆ. ಮುದ್ನಾಳ, ಸಾಮಾಜಿಕ ಹೋರಾಗಾರ.