ರಸ್ತೆ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಖಡಕ್ ವಾರ್ನಿಂಗ್

| Published : Jun 01 2024, 12:47 AM IST

ಸಾರಾಂಶ

ಮಳೆಗಾಲ ಬಂದ್ರೂ ಮುಗಿಯದ ರಸ್ತೆ ಕಾಮಗಾರಿ ಎಂಬ ತಲೆಬರಹದದಲ್ಲಿ ಕನ್ನಡಪ್ರಭದಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿದ ಅಧಿಕಾರಿಗಳು ಶುಕ್ರವಾರ ರಸ್ತೆ ಕಾಮಗಾರಿ ವೀಕ್ಷಿಸಿ ನಿಗದಿಪಡಿಸಿದ ಅವಧಿಯೊಳಗೆ ಆದಷ್ಟು ಬೇಗ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭವಾರ್ತೆ ಗುಳೇದಗುಡ್ಡಮಳೆಗಾಲ ಬಂದ್ರೂ ಮುಗಿಯದ ರಸ್ತೆ ಕಾಮಗಾರಿ ಎಂಬ ತಲೆಬರಹದದಲ್ಲಿ ಕನ್ನಡಪ್ರಭದಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿದ ಅಧಿಕಾರಿಗಳು ಶುಕ್ರವಾರ ರಸ್ತೆ ಕಾಮಗಾರಿ ವೀಕ್ಷಿಸಿ ನಿಗದಿಪಡಿಸಿದ ಅವಧಿಯೊಳಗೆ ಆದಷ್ಟು ಬೇಗ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ ನಡೆದಿರುವ ಗುಳೇದಗುಡ್ಡ ತಾಲೂಕಿನ ಬೂದಿನಗಡ-ಅಲ್ಲೂರ ಮಾರ್ಗದ 3 ಕಿಮೀ ಕಾಮಗಾರಿ ಅವಧಿ 2024ರ ಜು.18ಕ್ಕೆ ಮುಗಿಯಬೇಕಿದೆ. ಕಾಮಗಾರಿ ಸ್ಥಳಕ್ಕೆ ಬಾಗಲಕೋಟೆಯ ಪಿಎಂಜಿಎಸ್‌ವೈ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಶಿವಬಸವ ಕಿರಗಿ ಹಾಗೂ ಸೆಕ್ಷನ್ ಎಂಜಿನಿಯರ್ ಅನೀಲ ಜಾಧವ ಭೇಟಿ ನೀಡಿ ಮಳೆಗಾಲ ಆರಂಭವಾಗಿದ್ದು, ಮಳೆಗಾಲದಲ್ಲಿ ಕಾಮಗಾರಿ ಮಾಡುತ್ತಿದ್ದೀರಿ. ಮಳೆಗೆ ಸಿಲುಕಿ ಕಳಪೆಯಾಗದಂತೆ ಕ್ರಮವಹಿಸಿ. ಉಳಿದ ಕಾಮಗಾರಿ ಆದಷ್ಟು ಬೇಗ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಿದರು.

ಗುಳೇದಗುಡ್ಡ ತಹಸೀಲ್ದಾರ್‌ ಮಂಗಳಾ ಎಂ., ಕಾಮಗಾರಿ ಬೇಗ ಮುಗಿಸಿ ಸಾರ್ವಜನಿಕರಿಗೆ ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.ಬೂದಿನಗಡ ಮಾರ್ಗದ 3 ಕಿ.ಮೀ. ರಸ್ತೆ ಕಾಮಗಾರಿ ಗುಣಮಟ್ಟದ್ದಾಗಿದೆ. ಅವಧಿ ಮುಗಿಯುವದರೊಳಗೆ ರಸ್ತೆ ಮಾಡುವಂತೆ ನಿಗಾವಹಿಸುತ್ತೇವೆ.

- ಶಿವಬಸವ ಕಿರಗಿ, ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ, ಪಿಎಂಜಿಎಸ್ ವೈ ಯೋಜನೆ ಬಾಗಲಕೋಟೆ