ಎಎಮ್‌ಸಿ ಕುಕ್‌ವೇರ್ ಕಂಪನಿ ವತಿಯಿಂದ ಎಣ್ಣೆ ಇಲ್ಲದೆ ಆರೋಗ್ಯಕರ ಅಡುಗೆ ಮಾಡುವ ವಿಧಾನ, ಪೌಷ್ಠಿಕಾಂಶ ಕಳೆದುಕೊಳ್ಳದಂತೆ ತರಕಾರಿಗಳನ್ನು ಬೇಯಿಸುವ ತಂತ್ರಗಳು ಹಾಗೂ ತೈಲರಹಿತ ಅಡುಗೆಯ ಬೇಯಿಸುವ ಪ್ರಯೋಜನಗಳನ್ನು ಸ್ಥಳದಲ್ಲೇ ತೋರಿಸಲಾಯಿತು. ಅದರೊಂದಿಗೆ ‘ಆಹಾರವೇ ಆರೋಗ್ಯ’ ಕಾರ್ಯಾಗಾರದಲ್ಲಿ ಸಮತೋಲನ ಆಹಾರ ಪದ್ಧತಿ, ದೈನಂದಿನ ಆಹಾರದಲ್ಲಿ ಮಾಡಬೇಕಾದ ಬದಲಾವಣೆಗಳು, ಕೊಬ್ಬಿನಾಂಶದ ಅಪಾಯಗಳು, ನಾನ್ ಸ್ಟಿಕ್ ಬಳಕೆ ಅಪಾಯ ಮಕ್ಕಳ ಹಾಗೂ ವಯೋವೃದ್ಧರ ಆಹಾರ ಶಿಸ್ತಿನ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಕನ್ನಡಪ್ರಭ ವಾರ್ತೆ ಬೇಲೂರು
ಲಯನ್ಸ್ ಜಿಲ್ಲಾ ರಾಜ್ಯಪಾಲರ ಕಾರ್ಯಕ್ರಮಗಳಲ್ಲಿ ಒಂದಾದ ಮಹಿಳಾ ಸಬಲೀಕರಣದ ಅಂಗವಾಗಿ ಆರೋಗ್ಯ ಜಾಗೃತಿಯನ್ನು ಹೆಚ್ಚಿಸುವ ಉದ್ದೇಶದಿಂದ ವಿಶೇಷ ಕಾರ್ಯಾಗಾರ ಹಾಗೂ ಅಡುಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಪಟ್ಟಣದ ಲಯನ್ಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಎಎಮ್‌ಸಿ ಕುಕ್‌ವೇರ್ ಕಂಪನಿ ವತಿಯಿಂದ ಎಣ್ಣೆ ಇಲ್ಲದೆ ಆರೋಗ್ಯಕರ ಅಡುಗೆ ಮಾಡುವ ವಿಧಾನ, ಪೌಷ್ಠಿಕಾಂಶ ಕಳೆದುಕೊಳ್ಳದಂತೆ ತರಕಾರಿಗಳನ್ನು ಬೇಯಿಸುವ ತಂತ್ರಗಳು ಹಾಗೂ ತೈಲರಹಿತ ಅಡುಗೆಯ ಬೇಯಿಸುವ ಪ್ರಯೋಜನಗಳನ್ನು ಸ್ಥಳದಲ್ಲೇ ತೋರಿಸಲಾಯಿತು. ಅದರೊಂದಿಗೆ ‘ಆಹಾರವೇ ಆರೋಗ್ಯ’ ಕಾರ್ಯಾಗಾರದಲ್ಲಿ ಸಮತೋಲನ ಆಹಾರ ಪದ್ಧತಿ, ದೈನಂದಿನ ಆಹಾರದಲ್ಲಿ ಮಾಡಬೇಕಾದ ಬದಲಾವಣೆಗಳು, ಕೊಬ್ಬಿನಾಂಶದ ಅಪಾಯಗಳು, ನಾನ್ ಸ್ಟಿಕ್ ಬಳಕೆ ಅಪಾಯ ಮಕ್ಕಳ ಹಾಗೂ ವಯೋವೃದ್ಧರ ಆಹಾರ ಶಿಸ್ತಿನ ಬಗ್ಗೆ ಜಾಗೃತಿ ಮೂಡಿಸಲಾಯಿತು.ಈ ವೇಳೆ ಲಯನ್ಸ್ ಸಂಸ್ಥೆಯ ಅಧ್ಯಕ್ಷೆ ತಾರಾಮಣಿ ಮಾತನಾಡಿ, ಕುಟುಂಬದ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ಹೆಚ್ಚಿನ ಮಟ್ಟಿಗೆ ಮಹಿಳೆಯರ ಮೇಲಿದೆ. ಎಣ್ಣೆಯ ಬಳಕೆಯನ್ನು ನಿಯಂತ್ರಿಸುವ ಮೂಲಕ ಅನೇಕ ಅನಾರೋಗ್ಯಕರ ಸಮಸ್ಯೆಗಳನ್ನು ತಪ್ಪಿಸಬಹುದು. ಎಎಮ್‌ಸಿ ಕುಕ್‌ವೇರ್ ತರಹದ ಆಧುನಿಕ, ಆರೋಗ್ಯಪರ ಅಡುಗೆ ಪಾತ್ರೆಗಳು ಕುಟುಂಬದ ಜೀವನಶೈಲಿಯನ್ನು ಹೆಚ್ಚಿಸಲು ಅನುಕೂಲಕರ ಆರೋಗ್ಯವಾಗಿರಲು ಇದು ಸಹಾಯ ಮಾಡುತ್ತದೆ. ಇಂದಿನ ಕಾರ್ಯಕ್ರಮ, ಎಣ್ಣೆಯಿಲ್ಲದ ಅಡುಗೆ, ಆರೋಗ್ಯಕರ ಜೀವನಶೈಲಿ, ಆಹಾರ ಜಾಗೃತಿ ಇವು ಕೇವಲ ಅಡುಗೆ ಕಲಿಸುವ ಕಾರ್ಯಕ್ರಮಗಳಲ್ಲ; ಮಹಿಳೆಯರು ತಮ್ಮದೇ ಮತ್ತು ಕುಟುಂಬದ ಆರೋಗ್ಯದ ಬಗ್ಗೆ ತಿಳಿವಳಿಕೆ ಪಡೆಯುವ ಮಹತ್ವದ ವೇದಿಕೆಯಾಗಿದೆ ಎಂದರು.ಕಾವೇರಿ ಕ್ಲಿನಿಕ್‌ನ ವೈದ್ಯಾಧಿಕಾರಿ ಹಾಗೂ ಲಯನ್ಸ್ ಕ್ಲಬ್‌ನ ಡಾ. ಚಂದ್ರಮೌಳಿ ಮಾತನಾಡಿ, ಈಗಿನ ಕಾಲದಲ್ಲಿ ಹೆಚ್ಚು ಎಣ್ಣೆ, ಹೆಚ್ಚು ಉಪ್ಪು ಹಾಗೂ ಸಂಸ್ಕರಿತ ಆಹಾರಗಳ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಇದು ರಕ್ತದೊತ್ತಡ, ಮಧುಮೇಹ, ಹೃದ್ರೋಗ ಮುಂತಾದ ಅನೇಕ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ತೈಲರಹಿತ ಅಡುಗೆ, ಸಮತೋಲನ ಆಹಾರ ಮತ್ತು ನಿಯಮಿತ ವ್ಯಾಯಾಮವೇ ಉತ್ತಮ ಆರೋಗ್ಯದ ರಹಸ್ಯ ಎಂದು ಆರೋಗ್ಯ ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಆದರ್ಶ್, ಖಜಾಂಚಿ , ಸಂತೋಷ್, ಸುರೇಶ್ ಕೆ. ಸುಮಂತ್,. ಪ್ರಭಾಕರ್, ಅಬ್ದುಲ್ ಲತೀಫ್, ವಿನೋದ ಪ್ರಭಾಕರ್, ಜ್ಯೋತಿ ಸುರೇಶ್, ಶಿಲ್ಪಾ, ಚಂದ್ರಿಕಾ ಸುಮಂತ್, ಪ್ರೀತು ಚಂದ್ರ ಮೌಳಿ, ಫೌಝಿಯಾ ಇನ್ನಿತರರು ಹಾಜರಿದ್ದರು.