ಪಾಂಡವಪುರದಲ್ಲಿ 30 ರಂದು ಒಕ್ಕಲಿಗರ ವಧು-ವರರ ಸಮಾವೇಶ: ಮಲ್ಲಿಕಾರ್ಜುನೇಗೌಡ

| Published : Jun 26 2024, 12:40 AM IST

ಪಾಂಡವಪುರದಲ್ಲಿ 30 ರಂದು ಒಕ್ಕಲಿಗರ ವಧು-ವರರ ಸಮಾವೇಶ: ಮಲ್ಲಿಕಾರ್ಜುನೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಚಟುವಟಿಕೆಯಲ್ಲಿ ತೊಡಗಿರುವವರು, ಅನಕ್ಷರಸ್ಥರು, ಕಡಿಮೆ ವಿದ್ಯಾಭ್ಯಾಸ ಮಾಡಿರುವವರು, ಕೂಲಿ ಕಾರ್ಮಿಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಉದ್ಯಮಿಗಳು ಮತ್ತು ವೃತ್ತಿ ಪರರು ಕೂಡ ಭಾಗವಹಿಸಬಹುದು. ಯಾವುದೇ ಜಿಲ್ಲೆ, ತಾಲೂಕಿನ ಒಕ್ಕಲಿಗ ಜನಾಂಗದವರು ಈ ವಧು-ವರರ ಸಮಾವೇಶದಲ್ಲಿ ಭಾಗವಹಿಸಿಲು ನೋಂದಣಿ ಮಾಡಿಸಬಹುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್‌ನಿಂದ ಜೂ.30ರಂದು ಪಟ್ಟಣದ ವಿಜಯ ಶಿಕ್ಷಣ ಸಂಸ್ಥೆಯ ಡಾ.ಎಂ.ಎಸ್. ಕೃಷ್ಣಕುಮಾರ್ ಸಭಾಂಗಣದಲ್ಲಿ ಒಕ್ಕಲಿಗರ ವಧು-ವರರ ಸಮಾವೇಶ ಆಯೋಜಿಸಲಾಗಿದೆ ಎಂದು ಟ್ರಸ್ಟಿನ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನೇಗೌಡ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ವಧು-ವರನ್ವೇಷಣೆಯಲ್ಲಿ ಮದ್ಯವರ್ತಿಗಳ ಹಾವಳಿ ತಪ್ಪಿಸಲು ಸಲುವಾಗಿ ತಾಲೂಕಿನಲ್ಲಿ ಪ್ರಥಮವಾಗಿ ವಧು-ವರರ ಸಮಾವೇಶ ಆಯೋಜಿಸಲಾಗಿದೆ ಎಂದರು.

ಕೃಷಿ ಚಟುವಟಿಕೆಯಲ್ಲಿ ತೊಡಗಿರುವವರು, ಅನಕ್ಷರಸ್ಥರು, ಕಡಿಮೆ ವಿದ್ಯಾಭ್ಯಾಸ ಮಾಡಿರುವವರು, ಕೂಲಿ ಕಾರ್ಮಿಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಉದ್ಯಮಿಗಳು ಮತ್ತು ವೃತ್ತಿ ಪರರು ಕೂಡ ಭಾಗವಹಿಸಬಹುದು. ಯಾವುದೇ ಜಿಲ್ಲೆ, ತಾಲೂಕಿನ ಒಕ್ಕಲಿಗ ಜನಾಂಗದವರು ಈ ಸಮಾವೇಶದಲ್ಲಿ ಭಾಗವಹಿಸಿಲು ನೋಂದಣಿ ಮಾಡಿಸಬಹುದು ಎಂದರು.

ಸಮಾವೇಶದಲ್ಲಿ ಭಾಗವಹಿಸುವ ವಧು-ವರರು ಇತ್ತೀಚಿನ ಎರಡು ಪೋಸ್ಟ್ ಕಾರ್ಡ್ ಸೈಜ್ ಭಾವಚಿತ್ರ ಹಾಗೂ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ತರಬೇಕು. ವಧು ಮತ್ತು ವರನ ಕಡೆಯ ಒಬ್ಬರಿಗೆ ಮಾತ್ರ ಪ್ರವೇಶ ನೀಡಲಾಗುವುದು ಎಂದರು.

ವಧು-ವರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಲು ಪ್ರತಿ ಗ್ರಾಪಂಗೂ ಒಬ್ಬೊಬ್ಬ ಒಕ್ಕಲಿಗ ಮುಖಂಡರು, ಗ್ರಾಪಂ ಸದಸ್ಯರನ್ನು ನೇಮಿಸಲಾಗಿದೆ. ಜತೆಗೆ ಪಟ್ಟಣ ವ್ಯಾಪ್ತಿಗೆ ಪುರಸಭಾ ಸದಸ್ಯರಿಗೆ ಜವಾಬ್ದಾರಿ ನೀಡಲಾಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಧು-ವರರು ಬರುತ್ತಾರೆ ಎಂಬ ನಿರೀಕ್ಷೆ ಇದೆ ಎಂದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಟ್ರಸ್ಟ್ ಕೇಂದ್ರ ಸಂಘದ ಅಧ್ಯಕ್ಷ ರವಿಕುಮಾರ್ ಇತರರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಕಾರ್ಯದರ್ಶಿ ಕೆ.ಕುಬೇರ, ಕೋಶಾಧ್ಯಕ್ಷ ರೈಟರ್ ಸ್ವಾಮಿಗೌಡ, ಸಂಘಟನಾ ಕಾರ್ಯದರ್ಶಿ ಕೋ.ಪು.ಗುಣಶೇಖರ್, ಉಪಾಧ್ಯಕ್ಷ ಬಿ.ಎಸ್.ಜಯರಾಮು, ಸಾಹಿತಿ ಚಂದ್ರಶೇಖರಯ್ಯ, ನಿರ್ದೇಶಕರಾದ ಅನಿತಾ ಲೋಕೇಶ್, ಮಂಜುಳಾ ಶಂಕರ್‌ನಾಗ್, ಬಿ.ಜೆ.ಸ್ವಾಮಿ, ಶ್ರೀನಿವಾಸ್ ಇತರರು ಇದ್ದರು.