ಮಂಡ್ಯ ಜಿಲ್ಲಾ ಘಟಕದ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಒಪ್ಪಂದದಂತೆ ಒಂದು ವರ್ಷದ ಮೊದಲ ಅವಧಿಗೆ ಅಧ್ಯಕ್ಷರಾಗಿ ಒಕ್ಕರಹಳ್ಳಿ ಜಯರಾಜು ಹಾಗೂ ಉಳಿದ ಎರಡು ವರ್ಷದ ಅವಧಿಗೆ ಎಚ್.ಎನ್.ಯೋಗೇಶ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪ್ರಜಾಲೇಖನಿ ಪತ್ರಿಕೆ ಸಂಪಾದಕ ಒಕ್ಕರಹಳ್ಳಿ ಜಯರಾಜು ಚುನಾಯಿತರಾದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಒಕ್ಕರಹಳ್ಳಿ ಜಯರಾಜು ಹಾಗೂ ಎಚ್.ಎನ್.ಯೋಗೇಶ್ ತಲಾ 12 ಮತ ಪಡೆದುಕೊಂಡರು. ಅನಂತರ ಜಿಲ್ಲಾ ಘಟಕದ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಒಪ್ಪಂದದಂತೆ ಒಂದು ವರ್ಷದ ಮೊದಲ ಅವಧಿಗೆ ಅಧ್ಯಕ್ಷರಾಗಿ ಒಕ್ಕರಹಳ್ಳಿ ಜಯರಾಜು ಹಾಗೂ ಉಳಿದ ಎರಡು ವರ್ಷದ ಅವಧಿಗೆ ಎಚ್.ಎನ್.ಯೋಗೇಶ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ ಟಿ.ಕೆ.ಲಿಂಗರಾಜು ಹಾಗೂ ಉಮೇಶ್ ತಲಾ 12 ಮತ ಪಡೆದ ಹಿನ್ನೆಲೆಯಲ್ಲೂ ಒಪ್ಪಂದ ಮಾಡಿಕೊಳ್ಳಲಾಯಿತು. ಮೊದಲ ವರ್ಷಕ್ಕೆ ಉಮೇಶ್ ಹಾಗೂ ಉಳಿದ ಅವಧಿಗೆ ಟಿ.ಕೆ.ಲಿಂಗರಾಜು ಆಯ್ಕೆಯಾದರು.ಪ್ರಧಾನ ಕಾರ್ಯದರ್ಶಿ ಎಂ.ಶಿವಕುಮಾರ್, ಉಪಾಧ್ಯಕ್ಷರಾಗಿ ಆರ್.ಬಿ.ದಿವಾಕರ್, ಎಸ್.ಮಂಜು, ಕಾರ್ಯದರ್ಶಿಯಾಗಿ ಸಂಜಯ್ ಬಾಬು, ಉಮೇಶ್, ಖಜಾಂಚಿಯಾಗಿ ವಿ.ಕೃಷ್ಣ ಚುನಾಯಿತರಾದರು. ನಿಕಟ ಪೂರ್ವ ಅಧ್ಯಕ್ಷ ಸಿ.ಸಿದ್ದರಾಜು ಸೇರಿದಂತೆ ಹಲವರು ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಅಭಿನಂದಿಸಿದರು. ಜಿಲ್ಲಾ ನಿರ್ದೇಶಕರಾದ ಚೇತನ್ ಕುಮಾರ್, ನಾಗೇಶ್, ಮಾಜಿ ನಿರ್ದೇಶಕ ಉಮೇಶ್ ಮಾಳಿಗೆ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು, ನಿರ್ದೇಶಕರು ಪಾಲ್ಗೊಂಡಿದ್ದರು.ಗೃಹಲಕ್ಷ್ಮಿ ಫಲಾನುಭವಿಗಳಿಗೆ ಇ- ಕೆವೈಸಿ ಅವಶ್ಯಕತೆ ಇಲ್ಲ: ಸಿ.ಇ.ನಂಜಮಣಿ
ಮಳವಳ್ಳಿ: ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ನೋಂದಣಿಯಾಗಿರುವ ಫಲಾನುಭವಿಗಳು ಯಾವುದೇ ತರಹದ ಇ-ಕೆವೈಸಿ ಮಾಡಿಸುವ ಅವಶ್ಯಕತೆ ಇಲ್ಲ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಇ.ನಂಜಮಣಿ ತಿಳಿಸಿದ್ದಾರೆ.ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಫಲಾನುಭವಿಗಳು ನೋಂದಣಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮುಂದಿನ ತಿಂಗಳ ಗೃಹಲಕ್ಷ್ಮಿ ಹಣ ಪಡೆಯಲು ಇ-ಕೆವೈಸಿ ಮಾಡಿಸಬೇಕೆಂಬ ಸುಳ್ಳು ವದಂತಿಗಳು ಹರಿದಾಡುತ್ತಿರುವುದರಿಂದ ಈ ಕುರಿತು ಹಲವಾರು ಫಲಾನುಭವಿಗಳು ಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಪ್ರಸ್ತುತ ಗೃಹಲಕ್ಷ್ಮಿ ಯೋಜನೆಯಡಿ ಹಣ ಪಡೆಯುತ್ತಿರುವ ಯಾವ ಫಲಾನುಭವಿಗಳು ಇ-ಕೆವೈಸಿ ಮಾಡಿಸುವ ಅವಶ್ಯಕತೆ ಇಲ್ಲ ಹಾಗೂ ಕೆವೈಸಿ ಮಾಡಿಸುವ ಸಂಬಂಧ ಸೈಬರ್/ಕಂಪ್ಯೂಟರ್ ಸೆಂಟರ್‌ಗಳಿಗೆ ಹೋಗಿ ತಮ್ಮ ಹಣ ಕಳೆದುಕೊಳ್ಳಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.