ಸಾರಾಂಶ
ಈ ಹಿಂದೆ ತಂದೆ-ತಾಯಿಯನ್ನು ಶಿವ ಪಾರ್ವತಿಯೆಂದು ಗೌರವಿಸುವ ಸಂಸ್ಕೃತಿ ಇತ್ತು.
ಹೂವಿನಹಡಗಲಿ: ವೃದ್ಧಾಶ್ರಮ ವೃದ್ಧರಿಗೆ ಬದುಕಲು ಮನೋಸ್ಥೈರ್ಯ ತುಂಬುತ್ತದೆ ಎಂದು ಕೃಪಾಶ್ರಯ ಟ್ರಸ್ಟ್‌ನ ರಾಜ್ಯಾಧ್ಯಕ್ಷ ರೆವರೆಂಡ್ ಸ್ಯಾಮ್ಸ್ ಅರ್ಥರ್ ಪಾಲ್ ಹೇಳಿದರು.ಪಟ್ಟಣದ 19ನೇ ವಾರ್ಡಿನಲ್ಲಿ ನೂತನವಾಗಿ ಆರಂಭವಾಗಿರುವ ಕೃಪಾಶ್ರಯ ಟ್ರಸ್ಟ್‌ನ ವೃದ್ಧಾಶ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ತಂದೆ-ತಾಯಿಯನ್ನು ಶಿವ ಪಾರ್ವತಿಯೆಂದು ಗೌರವಿಸುವ ಸಂಸ್ಕೃತಿ ಇತ್ತು. ಆದರೆ, ಇಂದು ಆಧುನಿಕ ಯುಗದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ವಿಪರ್ಯಾಸದ ಸಂಗತಿ. ಅನೇಕ ಕಾರಣಗಳಿಂದ ಮಕ್ಕಳಿಂದ ದೂರವಾದ ತಂದೆ, ತಾಯಿಯನ್ನು ನೋಡಿಕೊಳ್ಳುವ ಮಾನವೀಯ ನೆಲೆಯ ವೃದ್ಧಾಶ್ರಮಗಳಿಗೆ ಸಾಮಾಜಿಕ ವಲಯದ ನೆರವು ಹೆಚ್ಚಬೇಕಾಗಿದೆ ಎಂದರು.ಪತ್ರಕರ್ತ ಬಿಚ್ಚುಗತ್ತಿ ಖಾಜಾ ಹುಸೇನ್ ಮಾತನಾಡಿ, ಮನುಷ್ಯ ಆಡಂಬರ ಜೀವನದಲ್ಲಿ, ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮರೆತು, ವೃದ್ಧೆ ತಂದೆ ತಾಯಿಯನ್ನು ಸಾಕಲು ಹೆಣಗಾಡುತ್ತಿರುವುದು ನಾಚಿಕೆ ಸಂಗತಿ. ಬದಲಾದ ವ್ಯವಸ್ಥೆಯಲ್ಲಿ ವೃದ್ಧಾಶ್ರಮಗಳು ಅನಿವಾರ್ಯವಾಗಿವೆ. ಹಡಗಲಿ ಪಟ್ಟಣದಲ್ಲಿ ವೃದ್ಧಾಶ್ರಮ ಪ್ರಾರಂಭ ಆಗಿರುವುದು ಸಂತಷ ತಂದಿದೆ ಎಂದರು.
ಟ್ರಸ್ಟ್ ಉಪಾಧ್ಯಕ್ಷೆ ಶಿಬಿ ಸ್ಯಾಮ್ಸನ್, ಫಾ.ಹಾಲೇಶ್ ನಾಯ್ಕ, ಫಾ.ಪ್ರಕಾಶ. ರೂಪಾಬಾಯಿ. ಫಾ.ನಾಗರಾಜ್ ನಾಯ್ಕ, ಫಾ.ಹೇಮಂತ್, ಶಿರಸ್ತೆದಾರ ಮೇಟಿ, ಸಿಡಿಪಿಒ ಕಚೇರಿಯ ಹನುಮಕ್ಕ, ಕೆ.ಪುತ್ರೇಶ, ಕೆ.ಲಲಿತಮ್ಮ, ಹಲಗಿ ಸುರೇಶ, ದೇವದಾಸಿ ಸಂಘಟನೆ ಅಧ್ಯಕ್ಷೆ ಎಚ್.ದಂಡೆಮ್ಮ, ಟಿ.ಸುರೇಶ, ಶೇಖರ್, ಜ್ಯೋತಿ, ಸಂಕಿರ್ಣ, ಕೋಟೆಪ್ಪ ಸೇರಿದಂತೆ ಇತರರಿದ್ದರು.