ಮನೆಯಿಂದ ಮತದಾನ ಮಾಡಿ ಕೊನೆಯುಸಿರೆಳೆದ ವಯೋವೃದ್ಧೆ

| Published : Apr 18 2024, 02:17 AM IST / Updated: Apr 18 2024, 09:37 AM IST

Vote

ಸಾರಾಂಶ

ಮತದಾನಕ್ಕೆ ಮೊದಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಮನೆಯವರು ಆಸ್ಪತ್ರೆಗೆ ಹೋಗುವ ಎಂದಾಗ ಅವರು ಮತದಾನ ಮಾಡಿಯೇ ಆಸ್ಪತ್ರೆ ತೆರಳುತ್ತೇನೆ ಎಂದು, ಮತದಾನ ಮಾಡಿದ್ದರು.

  ಬ್ರಹ್ಮಾವರ :  ಹಿರಿಯ ಮತದಾರರೊಬ್ಬರು ಅನಾರೋಗ್ಯದ ನಡುವೆಯೂ ಮನೆಯಲ್ಲಿಯೇ ಮತದಾನ ಮಾಡಿ ಸ್ವಲ್ಪ ಹೊತ್ತಿನಲ್ಲಿಯೇ ಕೊನೆಯುಸಿರೆಳೆದ ಘಟನೆ ಮಂಗಳವಾರ ಸಂಜೆ ಇಲ್ಲಿನ ಪಾಂಡೇಶ್ವರದ ಚಡಗರ ಅಗ್ರಹಾರ ಎಂಬಲ್ಲಿ ನಡೆದಿದೆ.

ಮೃತರು ಪಿ.ಯಶೋಧಾ ನಾರಾಯಣ ಉಪಾಧ್ಯ (83). ಅವರು ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ದಿ.ನಾರಾಯಣ ಉಪಾಧ್ಯ ಅವರ ಪತ್ನಿ. ಅವರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಈ ಬಾರಿ ಚುನಾವಣಾ ಆಯೋಗ ಹಿರಿಯ ಮತದಾರರಿಗೆ ಮನೆಯಿಂದಲೇ ಮತದಾನದ ಅವಕಾಶ ನೀಡಿತ್ತು. ಅದರಂತೆ ಅಧಿಕಾರಿಗಳು ಮಂಗಳವಾರ ಸಂಜೆ ಅವರ ಮನೆಗೆ ತೆರಳಿ ಅವರ ಮತವನ್ನು ಪಡೆದಿದ್ದರು.

ಮತದಾನಕ್ಕೆ ಮೊದಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಮನೆಯವರು ಆಸ್ಪತ್ರೆಗೆ ಹೋಗುವ ಎಂದಾಗ ಅವರು ಮತದಾನ ಮಾಡಿಯೇ ಆಸ್ಪತ್ರೆ ತೆರಳುತ್ತೇನೆ ಎಂದು, ಮತದಾನ ಮಾಡಿದ್ದರು. ನಂತರ ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ರಾತ್ರಿ 9 ಗಂಟೆ ಸುಮಾರಿಗೆ ಕೊನೆಯುಸಿರಳೆದಿದ್ದಾರೆ.