ಸಾರಾಂಶ
ರಾಮನಗರ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ಒಂದು ಗುಂಪು ಮತ್ತೊಂದು ಗುಂಪಿನ ನಾಲ್ವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಅಚ್ಚಲು ದೊಡ್ಡಿ ಗ್ರಾಮದಲ್ಲಿ ನಡೆದಿದೆ.
ರಾಮನಗರ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ಒಂದು ಗುಂಪು ಮತ್ತೊಂದು ಗುಂಪಿನ ನಾಲ್ವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಅಚ್ಚಲು ದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಅಚ್ಚಲುದೊಡ್ಡಿ ಗ್ರಾಮದ ಒಂಟಿ ಮನೆಯಲ್ಲಿದ್ದ ಗುಂಪಿನ ಮೇಲೆ ಮತ್ತೊಂದು ಪುಂಡರ ಗುಂಪು ಹಾಡಹಗಲೇ ದಾಳಿ ಮಾಡಿದೆ. ಸೀಜರ್ ಸಿದ್ದ ಎಂಬುವರ ಬೆಂಬಲಿಗರ ಮೇಲೆ ಪಾದರಹಳ್ಳಿ ಸಂಜು ಬೆಂಬಲಿಗರು ಏಕಾಏಕಿ ಮಚ್ಚು, ತಲವಾರ್ ಬೀಸಿದೆ. ಈ ಗ್ಯಾಂಗ್ ವಾರ್ ಗೆ ಹಳೆ ವೈಷಮ್ಯ ಹಾಗೂ ಹಣಕಾಸಿನ ವಿಚಾರ ಕಾರಣ ಎನ್ನಲಾಗಿದೆ.ಅಚ್ಚಲು ಫ್ಯಾಕ್ಟರಿ ಬಳಿ ಇರುವ ಒಂಟಿ ಮನೆಗೆ ಕಾರ್ ಹಾಗೂ ಬೈಕ್‌ಗಳಲ್ಲಿ ಬಂದ ಸಂಜು ಮತ್ತು ಸಂಗಡಿಗರು ಅವಾಚ್ಯವಾಗಿ ನಿಂದಿಸಿ, ಮಾರಣಾಂತಿಕ ಹಲ್ಲೆ ಮಾಡಿದಲ್ಲದೇ ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ಗಾಯಾಳು ಹರ್ಷ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಈ ಘಟನೆಯಲ್ಲಿ ಸೀಜರ್ ಸಿದ್ದನ ಸಂಗಡಿಗರಾದ ಹರ್ಷ, ಗಣೇಶ, ಬಬ್ಲೂ ಹಾಗೂ ಮಧು ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಈ ಪೈಕಿ ಮೂವರನ್ನು ಚನ್ನಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಾದರಹಳ್ಳಿ ಸಂಜು, ಪುನೀತ್, ದೇವರಾಜು, ಅರುಣ್, ಶಾಶಂಕ್, ಪ್ರಮೋದ್ ಇನ್ನಿತರರ ಮೇಲೆ ದೂರು ದಾಖಲಾಗಿದೆ.ರಾಮನಗರ ಗ್ರಾಮಾಂತರ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ.