ಸಾರಾಂಶ
old students association formed
ಬೀದರ್: ನಗರದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಸಂಚಾಲಿತ ಬಸವೇಶ್ವರ ಬಿ.ಎಡ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ ಬಂದಿದೆ. ನಗರದಲ್ಲಿ ಸಂಘ ರಚಿಸಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಶಂಭುಲಿಂಗ ವಾಲ್ದೊಡ್ಡಿ (ಅಧ್ಯಕ್ಷ), ಗುರುನಾಥ ಮೂಲಗೆ (ಉಪಾಧ್ಯಕ್ಷ) ಹಾಗೂ ರೇವಣಪ್ಪ ಮೂಲಗೆ (ಕಾರ್ಯದರ್ಶಿ) ಸೇರಿದ್ದಾರೆ. ಕಾಲೇಜು ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕನಕಟ್ಟೆ, ಉಪನ್ಯಾಸಕರಾದ ಸಂತೋಷ್ ಸಜ್ಜನ್, ರಾಜಕುಮಾರ ಶಿಂದೆ, ವೀಣಾ ಜಲಾದೆ, ಶಿಲ್ಪಾ ಹಿಪ್ಪರಗಿ, ಹಳೆಯ ವಿದ್ಯಾರ್ಥಿಗಳಾದ ನಾಗೇಶ ಸ್ವಾಮಿ, ಲಕ್ಷ್ಮಿ ಹಾಗೂ ವಾಣಿಶ್ರೀ ಇದ್ದರು. ಇದೇ ವೇಳೆ ಸಂಘದ ನೂತನ ಪದಾಧಿಕಾರಿಗಳನ್ನು ಶಾಲು ಹೊದಿಸಿ ಸತ್ಕರಿಸಲಾಯಿತು.
------