ಹಳೆ ತಾಲೂಕು ಭಗವತಿ ದೇವಾಲಯ ವಾರ್ಷಿಕ ಉತ್ಸವ

| Published : Mar 20 2024, 01:21 AM IST

ಸಾರಾಂಶ

ನಾಪೋಕ್ಲು ಹಳೆ ತಾಲೂಕಿನ ಭಗವತಿ ದೇವಾಲಯದಲ್ಲಿ ವಾರ್ಷಿಕ ಉತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಮಾ.17ರಂದು ಉತ್ಸವ ಆರಂಭಗೊಂಡಿದ್ದು 18ರಂದು ದೇವರ ನೃತ್ಯಬಲಿ ನಡೆಯಿತು. ಸಾಂಪ್ರದಾಯಿಕ ಎತ್ತು ಹೋರಾಟ ಬೊಳಕಾಟ್ ಪ್ರದರ್ಶನ ನಡೆದವು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆಸಮೀಪದ ಹಳೆ ತಾಲೂಕಿನ ಭಗವತಿ ದೇವಾಲಯದಲ್ಲಿ ವಾರ್ಷಿಕ ಉತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಮಂಗಳವಾರ ನಡೆದ ಪಟ್ಟಣಿಹಬ್ಬದಲ್ಲಿ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಮಾ.17ರಂದು ಉತ್ಸವ ಆರಂಭಗೊಂಡಿದ್ದು 18ರಂದು ದೇವರ ನೃತ್ಯಬಲಿ ನಡೆಯಿತು. ಸಾಂಪ್ರದಾಯಿಕ ಎತ್ತು ಹೋರಾಟ ಬೊಳಕಾಟ್ ಪ್ರದರ್ಶನ ಬಲಿಕ ವಿವಿಧ ಪೂಜಾ ವಿಧಾನಗಳು ಜರುಗಿ ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ನಡೆದವು .

ದೇವಾಲಯದ ಮುಖ್ಯ ಅರ್ಚಕ ಹರೀಶ್ ಭಟ್, ತಂತ್ರಿಗಳಾಗಿ ಗಿರೀಶ್ ಪೂಜಾ ಕಾರ್ಯಗಳನ್ನು ನೆರವೇರಿಸಿಕೊಟ್ಟರು.

ಪಟ್ಟಣಿ ಹಬ್ಬದಲಿ ಪಾಲ್ಗೊಂಡಿದ್ದ ಭಕ್ತರಿಗೆ ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ

ದೇವರ ನೃತ್ಯಬಲಿ ನಡೆಯಿತು.

ಬುಧವಾರ ಕಾವೇರಿ ನದಿಯಲ್ಲಿ ದೇವರ ಅವಭೃತ ಸ್ನಾನ ನಡೆಯಲಿದೆ. ಮಾ. 21ರಂದು ವಿವಿಧ ಕೋಲಗಳೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ.

ಉತ್ಸವದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಲ್ಲೆಟಿರ ಗುರುವಪ್ಪ ,ಕಾರ್ಯದರ್ಶಿ

ಕಂಗಂಡ ಜಾಲಿ ಪೂವಪ್ಪ, ಉಪಾಧ್ಯಕ್ಷ ಬೊಪ್ಪಂಡ ಕುಶಾಲಪ್ಪ, ಹಿರಿಯರಾದ ಬೊಪ್ಪೆರ ಕಾವೇರಪ್ಪ , ದೇವತಕ್ಕರಾದ ನಾಟೋಳಂಡ ಕುಟುಂಬಸ್ಥರು, ದೇವಾಲಯದ ಇತರ ತಕ್ಕ ಮುಖ್ಯಸ್ಥರು ಹಾಗೂ ಊರ ಹಾಗೂ ಪರ ಊರಿನ ಭಕ್ತಾದಿಗಳು ಪಾಲ್ಗೊಂಡಿದ್ದರು.

ನವೋದಯ ಯುವಕ ಸಂಘ ಗ್ರಾಮೀಣ ಕ್ರೀಡಾಕೂಟ:

ವಿರಾಜಪೇಟೆಯ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಗ್ಗರಿಕಾಡುವಿನಲ್ಲಿ ಮಹಾಶಿವರಾತ್ರಿಯ ಅಂಗವಾಗಿ ನವೋದಯ ಯುವಕ ಸಂಘದ ವತಿಯಿಂದ ಗ್ರಾಮೀಣ ಕ್ರೀಡಾಕೂಟ ಕಾರ್ಯಕ್ರಮ ನಡೆಯಿತು.

ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೂಕಚಂಡ ಪ್ರಸನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಕೃತಿ ಬೆಳೆಸುವಲ್ಲಿ ಯುವಕರ ಪಾತ್ರ ಮುಖ್ಯ ಎಂದರು.ನವೋದಯಯುವಕ ಸಂಘದ ಅಧ್ಯಕ್ಷ ಬಿ.ಎಂ.ದಿನೇಶ್ ಶಿವರಾತ್ರಿ ಪ್ರಾಮುಖ್ಯತೆ ತಿಳಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಎನ್. ಶಾರದ ಮತ್ತು ನವೋದಯ ಯುವಕ ಸಂಘದ ಉಪಾಧ್ಯಕ್ಷ ಟಿ.ಪಿ ಸುಬ್ಬಯ್ಯ ಇದ್ದರು.