23ರಂದು ಉಡುಪಿಯ ವಿವಿಧೆಡೆ ವಿದ್ಯುತ್‌ ವ್ಯತ್ಯಯ

| Published : Apr 21 2024, 02:15 AM IST

ಸಾರಾಂಶ

ತುರ್ತು ನಿರ್ವಹಣಾ ಕಾಮಗಾರಿ ಮತ್ತು ಲೈನ್ ಶಿಫ್ಟಿಂಗ್ /ನಿರ್ವಹಣೆ ಮತ್ತು ಮಾರ್ಗ ರಚನೆ ಕಾಮಗಾರಿ ಹಿನ್ನೆಲೆ ಉಡುಪಿ ಜಿಲ್ಲೆಯ ವಿವಿಧೆಡೆ ಏ. 23ರಂದು ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯವಾಗಲಿದೆ.

ಕಾರ್ಕಳ: ಕೇಮಾರ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಫೀಡರ್‌ಗಳಾದ ನಿಟ್ಟೆ, ಕಲ್ಯಾ, ಲೆಮಿನಾ, ಸಾಣೂರು, ಇರ್ವತ್ತೂರು, ನಿಟ್ಟೆ ವಾಟರ್ ಸಫ್ಲೈ, ಬಜಗೋಳಿ, ಹೊಸ್ಮಾರು, ಕಾರ್ಕಳ ಎಕ್ಸ್‌ಪ್ರೆಸ್ ಮತ್ತು ಮಿಯ್ಯಾರ್ ಫೀಡರ್‌ನಲ್ಲಿ, ಕಾರ್ಕಳ ಉಪಕೇಂದ್ರದಿಂದ ಹೊರಡುವ ಪದವು, ನಕ್ರೆ, ಕೆ.ಎಚ್.ಬಿ., ಬೈಲೂರು ಎಕ್ಸ್‌ಪ್ರೆಸ್, ಜಾರ್ಕಳ, ಹಿರ್ಗಾನ, ಅಜೆಕಾರು, ದುರ್ಗಾ ಹಾಗೂ ಮುಂಡ್ಲಿ ಫೀಡರ್ ಹಾಗೂ ಬೆಳ್ಮಣ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಫೀಡರ್‌ಗಳಾದ ಬೋಳ, ಬೆಳ್ಮಣ್, ಮುಂಡ್ಕೂರು, ನಂದಳಿಕೆ ಫೀಡರ್‌ನಲ್ಲಿ ಏ.23ರಂದು ಬೆಳಗ್ಗೆ 9ರಿಂದ ಸಂಗೆ 5 ಗಂಟೆವರೆಗೆ ತುರ್ತು ನಿರ್ವಹಣಾ ಕಾಮಗಾರಿ ಮತ್ತು ಲೈನ್ ಶಿಫ್ಟಿಂಗ್ /ನಿರ್ವಹಣೆ ಮತ್ತು ಮಾರ್ಗ ರಚನೆ ಕಾಮಗಾರಿ ನಡೆಯಲಿದೆ.

ಆದ್ದರಿಂದ ಅಂದು ನಿಟ್ಟೆ, ನಿಟ್ಟೆ ಕಾಲೇಜು, ನಿಟ್ಟೆ ವಾಟರ್ ಸಫ್ಲೈ, ಬೊರ್ಗಲ್ ಗುಡ್ಡೆ, ಹಾಮಾಜೆ, ಕುಂಟಾಡಿ, ಕೈರಬೆಟ್ಟು, ನಿಟ್ಟೆ ಪಂಚಾಯಿತಿ, ನಿಟ್ಟೆ ಮಸೀದಿ, ಲೆಮಿನಾ ಇಂಡಸ್ಟ್ರಿಸ್, ದೂಪದಕಟ್ಟೆ, ಕೆಮ್ಮಣ್ಣು, ನೆಲ್ಲಿಗುಡ್ಡೆ, ಬಾರಾಡಿ, ಬೇಲಾಡಿ, ಕಾಂತಾವರ, ಕಲ್ಯಾ, ಬೋಳ ಪಂಚಾಯಿತಿ, ಪಿಲಿಯೂರು, ಕೆರೆಕೋಡಿ, ಒಂಜಾರೆ ಕಟ್ಟೆ, ಬಾರೆಬೈಲು, ಪುಕ್ಕಲ್ಲು, ಕೆಂಪುಜೋರ, ಬೆಳ್ಮಣ್, ಗೋಳಿಕಟ್ಟೆ, ಜಂತ್ರ, ನೀಚಾಲು, ಬೆಳ್ಮಣ್ ದೇವಸ್ಥಾನ, ನಂದಳಿಕೆ, ಕೆದಿಂಜೆ, ಮಾವಿನಕಟ್ಟೆ, ದೇಂದೊಟ್ಟು ಪದವು, ಮುಂಡ್ಕೂರು, ಮುಲ್ಲಡ್ಕ, ಕೊಡಿಮಾರ್, ನಾನಿಲ್ ತಾರ್, ಜಾರಿಗೆಕಟ್ಟೆ, ಸಂಕಲಕರಿಯ, ಸಚ್ಚರಿಪೇಟೆ, ಕುಂಟಿಬೈಲು, ಮಿಯ್ಯಾರು, ರೆಂಜಾಳ, ಬೊರ್ಕಟ್ಟೆ, ರಾಮೇರಗುತ್ತು, ಕಾಜರಬೈಲು, ಅಡ್ಕರಪಲ್ಕೆ, ಕುರ್ಕಲ್ ಪಲ್ಕೆ, ಹಿನಾಪಾಡಿ, ನೆಲ್ಲಿಗುಡ್ಡೆ, ಕಳತ್ರಪಾದೆ, ಬೈಪಾಸ್, ಮುರತ್ತಂಗಡಿ, ಇರ್ವತ್ತೂರು, ಸಾಣೂರು, ಕುಂಟಲ್ಪಾಡಿ, ದೇಂದಬೆಟ್ಟು, ಪರ್ಪಲೆ, ಪಡ್ಡಾಯಿಗುಡ್ಡೆ, ಮುದ್ದಣ್ಣ ನಗರ, ಬಾವಗುತ್ತು, ಶುಂಠಿಗುಡ್ಡೆ, ಚಿಲಿಂಬಿ, ಬಜಗೋಳಿ, ಮುಡ್ರಾಲು, ಕಡಾರಿ, ಮುಳ್ಳೂರು, ಮಾಳ, ಗುರ್ಗಲ್ ಗುಡ್ಡೆ, ಚೌಕಿ, ಹುಕ್ರಟ್ಟೆ, ನೆಲ್ಲಿಕಾರು, ಹೊಸ್ಮಾರು, ಈದು, ನಲ್ಲೂರು, ಜೋಡುಕಟ್ಟೆ, ಮಂಜಡ್ಕ, ಕಾಳಿಕಾಂಬ, ಪುಲ್ಕೇರಿ, ಪದವು, ಗುಂಡ್ಯಾಡ್ಕ, ಪೊಸನೊಟ್ಟು, ಪಳ್ಳಿ, ಆನಂದಿ ಮೈದಾನ, ನಕ್ರೆ, ಪರಪು, ಕೆ.ಎಚ್.ಬಿ., ಜೋಡುರಸ್ತೆ, ಬೈಲೂರು ಟೌನ್, ನೀರೆ, ಕೌಡೂರು, ಜಾರ್ಕಳ, ಕುಕ್ಕುಂದೂರು, ಯರ್ಲಪಾಡಿ, ಹಿರ್ಗಾನ, ಕಾನಂಗಿ, ಎಣ್ಣೆಹೊಳೆ, ಪಿಲಿಚಂಡಿಸ್ಥಾನ, ಗಣಿತನಗರ, ಅಯ್ಯಪ್ಪನಗರ, ಮಂಗಿಲಾರು, ಚಿಕ್ಕಲ್ ಬೆಟ್ಟು, ಹೆರ್ಮುಂಡೆ, ಅಜೆಕಾರ್, ಅಂಡಾರು, ಕಡ್ತಲ, ಕುಕ್ಕುಜೆ, ಶಿರ್ಲಾಲು, ಕಾಡುಹೊಳೆ, ಕಡಂಬಳ, ನಾರ್ಕಟ್ಟ, ಪಲಾಯಿಬಕ್ಯಾರು, ಮಲೆಬೆಟ್ಟು, ಪೊಳ್ಳಾರು, ಅಜೆಕಾರು ಪೇಟೆ ಮತ್ತು ಸುತ್ತಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.* ಮಣಿಪಾಲ: ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಇಂದ್ರಾಳಿ, ಅನಂತನಗರ ಫೀಡರ್ ಮಾರ್ಗದಲ್ಲಿ, ಹಿರಿಯಡ್ಕ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೆರ್ಡೂರು ಫೀಡರ್ ಮಾರ್ಗದಲ್ಲಿ ಮತ್ತು ಪರ್ಕಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ 80 ಬಿಬಿಟಿ, ವೈರಾಲಜಿ, ಎಂ.ಐ.ಟಿ. ಕ್ಯಾಂಪಸ್, ಹೆರ್ಗಾ, ಆತ್ರಾಡಿ, ಪರೀಕಾ ಫೀಡರ್ ಮಾರ್ಗದಲ್ಲಿ ಏ.23ರಂದು ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆ ವರೆಗೆ ಹಯಗ್ರೀವನಗರ, ಲಕ್ಮೀಂದ್ರನಗರ, ಇಂದ್ರಾಳಿ ರೈಲ್ವೆ ನಿಲ್ದಾಣ, ಹುಡ್ಕೊ ಅನಂತನಗರ, ಕಲ್ಯಾಣನಗರ, ಸೋನಿಯಾ ಕ್ಲಿನಿಕ್, ಪುತ್ತಿಗೆ, ಪಕ್ಕಾಲು, ಪೆರ್ಡೂರು ಪೇಟೆ, ಮುತ್ತೂರ್ಮೆ, ಕುಕ್ಕೆಹಳ್ಳಿ, ಪಾಡಿಗಾರ, ನಡಿದಾರೆ, ನಲ್ಲೂರು, ಹಿರೇಬೆಟ್ಟು, ವೈರಾಲಜಿ ಹಾಸ್ಟೆಲ್, ಎಂ.ಐ.ಟಿ. ಕ್ಯಾಂಪಸ್, ಪರ್ಕಳ ಸಿಟಿ, ಶೆಟ್ಟಿಬೆಟ್ಟು, ಗೋಳಿಕಟ್ಟೆ, ಆತ್ರಾಡಿ, ಪರೀಕಾ ಮತ್ತು ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ.

* ಉಡುಪಿ: ಬೆಳಪು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪಣಿಯೂರು ಮತ್ತು ಮಲ್ಲಾರು ಫೀಡರ್ ಮಾರ್ಗದಲ್ಲಿ ಏ.23ರಿಂದ ಹೊಸದಾಗಿ ಲಿಂಕ್ ಲೈನ್ ಕಾಮಗಾರಿ ನಡೆಯಲಿದೆ. ಆದ್ದರಿಂದ ಪಣಿಯೂರು, ಬೆಳಪು ಗ್ರಾಮ ಪಂಚಾಯಿತಿ ಏರಿಯಾ, ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯಾ, ಪುಂಚಲಕಾಡು, ಮಲ್ಲಾರು ಮತ್ತು ಸುತ್ತಮುತ್ತ ಬೆಳಗ್ಗೆ 9ರಿಂದ ಸಂಜೆ 5.30ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

* ಉಡುಪಿ: ಮಧುವನ ಉಪಕೇಂದ್ರದಿಂದ ಹೊರಡುವ ಬಾರ್ಕೂರು ಎಕ್ಸ್‌ಪ್ರೆಸ್ ಫೀಡರ್ ಮಾರ್ಗದಲ್ಲಿ, ಬ್ರಹ್ಮಾವರ ಉಪವಿದ್ಯುತ್ ಕೇಂದ್ರದಿಂದ ಹೊರಡುವ ಕೊಳಲಗಿರಿ, ಉಪ್ಪೂರು, ಚೇರ್ಕಾಡಿ ಫೀಡರ್ ಮಾರ್ಗದಲ್ಲಿ ಹಾಗೂ ನಿಟ್ಟೂರು ಉಪವಿದ್ಯುತ್ ಕೇಂದ್ರದಿಂದ ಹೊರಡುವ ಕಲ್ಯಾಣಪುರ ಫೀಡರ್ ಮಾರ್ಗದಲ್ಲಿ ಟ್ರೀ ಕಟ್ಟಿಂಗ್, ತುರ್ತು ನಿರ್ವಹಣೆ ಕಾಮಗಾರಿ ಏ.23ರಂದು ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು, ಉಗ್ಗೇಲ್ ಬೆಟ್ಟು, ಜಾತಾಬೆಟ್ಟು, ಹಾವಂಜೆ, ಹೈರಾಬೆಟ್ಟು, ಕೆ.ಜಿ.ರೋಡ್, ಸಾಲ್ಮರ, ಮಾಯಾಡಿ, ಅಮ್ಮುಂಜೆ, ಹೇರೂರು, ಚಾಂತಾರು, ಕುಂಜಾಲು, ಆರೂರು, ಚೇರ್ಕಾಡಿ, ಹಲುವಳ್ಳಿ, ಸಂತೆಕಟ್ಟೆ, ನೇಜಾರು, ಮೂಡುತೋನ್ಸೆ, ಕೋಡಿಬೆಂಗ್ರೆ, ಬಡಾನಿಡಿಯೂರು ಮತ್ತು ಸುತ್ತಮುತ್ತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ.

* ಉಡುಪಿ: ಹೆಗ್ಗುಂಜೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಹೆಗ್ಗುಂಜೆ ಮತ್ತು ನಂಚಾರು ಫೀಡರ್ ಮಾರ್ಗದಲ್ಲಿ ಏ.23ರಂದು ಟ್ರೀ ಕಟ್ಟಿಂಗ್ ಮತ್ತು ತುರ್ತು ನಿರ್ವಹಣೆ ಕಾಮಗಾರಿ ನಡೆಯಲಿದೆ. ಆದ್ದರಿಂದ ಅಂದು ಹೆಗ್ಗುಂಜೆ, ಕಾಡೂರು, ಪೆಜಮಂಗೂರು, ಕೊಕ್ಕರ್ಣೆ, ಕೆಂಜೂರು, ಶಿರೂರು, ಹಿಲಿಯಾಣ, ನಂಚಾರು, ಮುದ್ದೂರು, ಕಜ್ಕೆ ಮತ್ತು ಸುತ್ತಮುತ್ತ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ವಿದ್ಯುತ್ ಸ್ಥಗಿತಗೊಳ್ಳಲಿದೆ.