ಸಾರಾಂಶ
ಸಂಶೋಧನಾ ವಿದ್ಯಾರ್ಥಿಗಳು ಮೊದಲು ಸಂಶೋಧನೆಯ ಉದ್ದೇಶ, ಗುರಿ ಮತ್ತು ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬೇಕು. ಹೊಸ ಹೊಸ ಅನ್ವೇಷಣೆಯ ತುಡಿತ ಇರಬೇಕು. ಸಂಶೋಧನೆಗೆ ಪೂರಕವಾದ ಆಕಾರ ಗ್ರಂಥಗಳನ್ನು ಓದಿ ವಿಷಯ ಸಂಗ್ರಹಿಸಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ಸಮಾಜದ ಸಮಸ್ಯೆಗೆ ಪರಿಹಾರ ನೀಡುವ ಅನ್ವೇಷಣಾ ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ ಜೀವರಾಸಾಯನಶಾಸ್ತ್ರ ವಿಭಾಗದ ಪ್ರಧಾನ ವಿಜ್ಞಾನಿ ಡಾ.ಕೆ.ವಿ. ಹರೀಶ್ ಪ್ರಶಾಂತ್ ಸಲಹೆ ನೀಡಿದರು.ನಗರದ ಶಾರದಾ ವಿಲಾಸ ಕಾಲೇಜ್ ಆಫ್ ಫಾರ್ಮಸಿ ವತಿಯಿಂದ ಸಂಶೋಧನಾ ವಿಜ್ಞಾನ ಮತ್ತು ಸಂಖ್ಯಾಶಾಸ್ತ್ರ ವಿಷಯ ಕುರಿತ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಶೋಧನಾ ವಿದ್ಯಾರ್ಥಿಗಳು ಮೊದಲು ಸಂಶೋಧನೆಯ ಉದ್ದೇಶ, ಗುರಿ ಮತ್ತು ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬೇಕು. ಹೊಸ ಹೊಸ ಅನ್ವೇಷಣೆಯ ತುಡಿತ ಇರಬೇಕು. ಸಂಶೋಧನೆಗೆ ಪೂರಕವಾದ ಆಕಾರ ಗ್ರಂಥಗಳನ್ನು ಓದಿ ವಿಷಯ ಸಂಗ್ರಹಿಸಬೇಕು ಎಂದರು.ಸಂಶೋಧಕರು ನಂಬಲಾರ್ಹ ಮತ್ತು ವಸ್ತುನಿಷ್ಠ ಗ್ರಂಥಗಳಿಂದಲೇ ತಮ್ಮ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಅಂಕಿ ಅಂಶಗಳನ್ನು ಸಂಗ್ರಹಿಸಬೇಕೆ ಹೊರತು ಗೂಗಲ್ ಮತ್ತು ವಾಟ್ಸಾಪ್ ಮುಂತಾದ ಜಾಲತಾಣ ಅವಲಂಬಿಸಬಾರದು ಎಂದು ಕಿವಿಮಾತು ಹೇಳಿದರು.
ಶಾರದಾ ವಿಲಾಸ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್. ಚಂದ್ರಶೇಖರ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ನ ಸಹ ಪ್ರಾಧ್ಯಾಪಕ ಡಾ.ಎಚ್.ಆರ್. ಶಶಿರ, ಶಾರದಾ ವಿಲಾಸ ಕಾಲೇಜ್ ಆಫ್ ಫಾರ್ಮಸಿ ಪ್ರಾಂಶುಪಾಲ ಡಾ. ಹನುಮಂತಾಚಾರಿ ಜೋಷಿ, ಸಂಘಟನಾ ಕಾರ್ಯದರ್ಶಿ ಡಾ.ಪಿ.ಕೆ. ಕುಲಕರ್ಣಿ ಇದ್ದರು.